ಕಡಬ: ಅಂಗಡಿಗೆ ಹೋದ ಸಂದರ್ಭದಲ್ಲಿ ದುಷ್ಕೃರ್ಮಿಗಳ ತಂಡವೊಂದು ಕಡಬದ ಸಿ.ಎ.ಬ್ಯಾಂಕ್ ಉಪಾಧ್ಯಕ್ಷರ ಮೇಲೆ ಕಬ್ಬಿಣದ ರಾಡ್ನಿಂದ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾದ ಐವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ .
ಪರಿಣಾಮ ಕಡಬದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕಡಬ ಠಾಣೆಗೆ ಸಾರ್ವಜನಿಕರು ಜಮಾವಣೆಗೊಂಡಿದ್ದಾರೆ.
ರಮೇಶ್ ಭಟ್ ಕಲ್ಪುರೆ ಹಲ್ಲೆಗೊಳಗಾದ ಬ್ಯಾಂಕ್ ಉಪಾಧ್ಯಕ್ಷ. ಕೃಷಿಕರಾಗಿದ್ದುಕೊಂಡು ಸಾಮಾಜಿಕ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ರಮೇಶ್ ಭಟ್, ನಗರದ ಯಶೋಧಾ ಸೂಪರ್ ಮಾರ್ಕೆಟ್ಗೆ ತೆರಳಿ ಸಾಮಾಗ್ರಿಗಳನ್ನು ಖರೀದಿಸಿ ತಮ್ಮ ಜೀಪಿನ ಹತ್ತಿರ ಆಗಮಿಸುತ್ತಿದ್ದಾಗ ಏಕಾಏಕಿ ಮುಗಿಬಿದ್ದ ಆಕ್ರಮಣಕಾರರು ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಟ್ರುಪ್ಪಾಡಿ ಪರಿಸರದ ಪ್ರಕಾಶ, ಟಿನ್ಸನ್, ಸನೂಷ್, ಲಿಜೋ, ಸಂತೋಷ್ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಸೋಮವಾರದಂದು ಕಡಬ ಬಂದ್ಗೆ ಕರೆ ನೀಡಿದ್ದಾರೆ.
Click this button or press Ctrl+G to toggle between Kannada and English