ಮಂಗಳೂರು ಜೈಲಿನ ಕೈದಿಗಳಿಂದ ಬರ್ಜರಿ ಭೋಜನ ಕೂಟ

12:57 PM, Wednesday, July 19th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Jail ಮಂಗಳೂರು : ಮಂಗಳೂರು ಜೈಲಿನ ಕೈದಿಗಳು ಭೋಜನ ಕೂಟ ಏರ್ಪಡಿಸಿದ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕೈದಿಗಳು ತಮ್ಮ ಮೊಬೈಲ್‍ಗಳಲ್ಲೇ ಕ್ಲಿಕ್ಕಿಸಿದ ಈ ಫೋಟೋಗಳು ವೈರಲ್ ಆಗಿವೆ.

ಕಾಲಿಯಾ ರಫೀಕ್ ಕೊಲೆ ಪ್ರಕರಣದ ಆರೋಪಿಗಳು ಎನ್ನಲಾದ ಆರೇಳು ಮಂದಿ ವಿಚಾರಣಾಧೀನ ಕೈದಿಗಳು ಹಳೆ ಜೈಲಿನ ಕೊಠಡಿಯೊಳಗೆ ಬಾಗಿಲಿಗೆ ಕರ್ಟನ್ ಹಾಕಿ ಪಾರ್ಟಿ ಮಾಡಿದ್ದರು. ಹೊರಗಿನಿಂದ ಬಿರಿಯಾನಿ  ತರಿಸಿಕೊಂಡು ಮಜಾ ಮಾಡುತ್ತಿರುವುದನ್ನು ಫೋಟೋ ತೆಗೆಸಿಕೊಂಡು  ಮೊಬೈಲ್ ಮೂಲಕ ಹೊರ ಹಾಕಿದ್ದಾರೆ.

ಈ ಘಟನೆ ಜುಲೈ ಮೊದಲ ವಾರದಲ್ಲೇ ನಡೆದಿದ್ದು ,  ಕೈದಿಗಳನ್ನು ಭೇಟಿಯಾಗಿ ಈ ರೀತಿ ವಿಶೇಷ ಭೋಜನ ನೀಡುವುದು ಜೈಲು ಅಧಿಕಾರಿಗಳ ಕೈವಾಡದಿಂದ ಮಾತ್ರ ಸಾಧ್ಯ. ಮಂಗಳೂರು ಜೈಲಿನಲ್ಲಿ ಇದೆಲ್ಲಾ ಹೊಸತಲ್ಲ. ಜೈಲಿನಲ್ಲಿ ನಿರಂತರವಾಗಿ ಸರಬರಾಜಾಗುವ ಗಾಂಜಾ, ಆಗಾಗ ಕೈದಿಗಳ ಮಧ್ಯೆ ನಡೆಯುವ ಹೊಡೆದಾಟ,  ಮಾಮೂಲಾಗಿ ಬಿಟ್ಟಿದೆ.

ಮಲಬಾರಿ ರಶೀದ್ ಈ ಜೈಲಿನಲ್ಲಿದ್ದಾಗಂತೂ  ಔತಣ ಕೂಟ ಆಗಾಗ ನಡೆಯುತ್ತಲೇ ಇತ್ತು. ಸಹಕೈದಿಗಳಿಂದಲೇ ಹಫ್ತಾ ವಸೂಲಿ ಮಾಡಿ ಪಾರ್ಟಿ ಮಾಡಲಾಗುತ್ತಿತ್ತು.

jail 2015ರ ನ. 2ರಂದು ಮಂಗಳೂರು ಕಾರಾಗೃಹದಲ್ಲಿ ಡಬಲ್ ಮರ್ಡರ್ ಆದ ಮೇಲೆ ಜೈಲಿನ ಭದ್ರತೆ ಚರ್ಚೆಗೊಳಗಾದರೂ, ಆ ಕೊರತೆ ಮಾತ್ರ ಇಂದಿಗೂ ನಿವಾರಣೆಯಾಗಿಲ್ಲ. 425 ಕೈದಿಗಳಿಗೆ ಕನಿಷ್ಠವೆಂದರೂ 75 ಸಿಬ್ಬಂದಿ ಬೇಕು. ಜೈಲಿನ ಸಾಮರ್ಥ್ಯಕ್ಕೆ ಹೋಲಿಸಿದರೆ 250 ಕೈದಿಗಳಿಗೆ 40 ಸಿಬ್ಬಂದಿ ಮಾತ್ರ ಇದ್ದಾರೆ. ಇಲ್ಲಿ ಜೈಲರ್ ಸೇರಿದಂತೆ ಇನ್ನೂ 20 ಸಿಬ್ಬಂದಿಗಳ ಅಗತ್ಯವಿದೆ.

ಜಿಲ್ಲಾ ಜೈಲಿನ ಕಾವಲಿಗಾಗಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲೂ 50ರ ಬದಲು 24 ಮಂದಿ ಮಾತ್ರವೇ ಇದ್ದಾರೆ. ಅದರಲ್ಲಿ 18 ಮಂದಿ ಮಾತ್ರ ಜೈಲಿಗೆ ಭದ್ರತೆ ನೀಡುತ್ತಿದ್ದಾರೆ.

ಮಂಗಳೂರು ಜೈಲಿನಿಂದ ಈವರೆಗೆ 10 ಮಂದಿ ಎಸ್ಕೇಪ್ ಆಗಿದ್ದಾರೆ. 1999ರಲ್ಲಿ ನಾಲ್ವರು ಕ್ರಿಮಿನಲ್ ಪರಾರಿಯಾಗುವ ಮೂಲಕ ಎಸ್ಕೇಪ್ ಖಾತೆ ಇಲ್ಲಿ ತೆರೆದುಕೊಳ್ಳುತ್ತದೆ. ಖೋಟಾ ನೋಟು ಪ್ರಕರಣದ ಭಾಸ್ಕರನ್ ನಾಯರ್, ವಿದ್ಯಾರ್ಥಿನಿಯೋರ್ವಳನ್ನು ಕೊಲೆಗೈದಿದ್ದ ಮಿಲಿಟ್ರಿ ಅಶ್ರಫ್, ರೌಡಿ ಇಬ್ರಾಹಿಂ, ಅತ್ಯಾಚಾರಿ ಚಿನ್ನಪ್ಪ ಪರವ, ಬಾರ್ ಬೆಂಡರ್ ಮೋಹನ್ ಎಸ್ಕೇಪ್ ಆದವರ ಪಟ್ಟಿಯಲ್ಲಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English