ನಗರದ ಕಾರಾಗೃಹದಲ್ಲಿ ಕೈದಿಗಳ ನಡುವೆ ಜಗಳ, ಇಬ್ಬರು ಆಸ್ಪತ್ರೆಗೆ ದಾಖಲು

Sunday, April 25th, 2021
jail clash

ಮಂಗಳೂರು: ದರೋಡೆ ಪ್ರಕರಣದ ಆರೋಪಿ ಮತ್ತು ಇಬ್ಬರು ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಾಯಗೊಂಡಿರುವ ಘಟನೆ ನಗರದ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಅನ್ಸಾರ್ ಮತ್ತು ಝೈನುದ್ದೀನ್ ಗಾಯಾಳುಗಳು. ಬೆಳಗ್ಗೆ ಉಪಹಾರ ವಿತರಣೆ ವೇಳೆ ಘರ್ಷಣೆ ನಡೆದಿದೆ. ಪಣಂಬೂರು ಪೊಲೀಸರು ಬಂಧಿಸಿದ ದರೋಡೆ ಪ್ರಕರಣದ ಆರೋಪಿ ಸಮೀರ್ ಎಂಬಾತ ಹಲ್ಲೆ ನಡೆಸಿದ್ದಾನೆ. ಚಮಚೆ ಮತ್ತಿತರ ಅಡುಗೆ ಪಾತ್ರೆಗಳಿಂದ ಹಲ್ಲೆ ನಡೆದಿದೆ. ಅನ್ಸಾರ್ ನ ಕೈ ಮತ್ತು ಕಾಲಿಗೆ, ಝೈನುದ್ದೀನ್ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ […]

ಜಾಮೀನು ಸಿಕ್ಕಿದರೂ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲಾಗದ ಕೈದಿಗಳಿಗೆ ನೆರವು‌

Wednesday, July 17th, 2019
GA bava

ಮಂಗಳೂರು: ಸಣ್ಣಪುಟ್ಟ ಪ್ರಕರಣದಲ್ಲಿ ಜೈಲುಪಾಲಾಗಿ ನ್ಯಾಯಾಲಯದಿಂದ ಜಾಮೀನು ಸಿಕ್ಕಿದರೂ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲಾಗದ ಕೈದಿಗಳಿಗೆ ಅಲ್ಪಸಂಖ್ಯಾತ ಆಯೋಗದಿಂದ ನೆರವು‌ ನೀಡಲು ಚಿಂತನೆ ನಡೆಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಜಿ.ಎ.ಬಾವ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಸೆಂಟ್ರಲ್ ಜೈಲಿನ ಕೈದಿಗಳಲ್ಲಿ ಶೇ. 30ರಿಂದ 35ರಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ. ಅಲ್ಪಸಂಖ್ಯಾತರ ಜನಸಂಖ್ಯೆ ಶೇ. 15ರಷ್ಟು ಇದ್ದರೆ, ಜೈಲಿನಲ್ಲಿ ಶೇ. 30ರಿಂದ 35 ಜನ ಇದ್ದಾರೆ. ಜೈಲಿನ ಅಂಕಿ-ಅಂಶ ಪರಿಶೀಲನೆ ಮಾಡಿದಾಗ ಹಲವು ಮಂದಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದರೂ ಬಡ […]

ಮಂಗಳೂರು ಜೈಲಿನ ಕೈದಿಗಳಿಂದ ಬರ್ಜರಿ ಭೋಜನ ಕೂಟ

Wednesday, July 19th, 2017
Jail

ಮಂಗಳೂರು : ಮಂಗಳೂರು ಜೈಲಿನ ಕೈದಿಗಳು ಭೋಜನ ಕೂಟ ಏರ್ಪಡಿಸಿದ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕೈದಿಗಳು ತಮ್ಮ ಮೊಬೈಲ್‍ಗಳಲ್ಲೇ ಕ್ಲಿಕ್ಕಿಸಿದ ಈ ಫೋಟೋಗಳು ವೈರಲ್ ಆಗಿವೆ. ಕಾಲಿಯಾ ರಫೀಕ್ ಕೊಲೆ ಪ್ರಕರಣದ ಆರೋಪಿಗಳು ಎನ್ನಲಾದ ಆರೇಳು ಮಂದಿ ವಿಚಾರಣಾಧೀನ ಕೈದಿಗಳು ಹಳೆ ಜೈಲಿನ ಕೊಠಡಿಯೊಳಗೆ ಬಾಗಿಲಿಗೆ ಕರ್ಟನ್ ಹಾಕಿ ಪಾರ್ಟಿ ಮಾಡಿದ್ದರು. ಹೊರಗಿನಿಂದ ಬಿರಿಯಾನಿ  ತರಿಸಿಕೊಂಡು ಮಜಾ ಮಾಡುತ್ತಿರುವುದನ್ನು ಫೋಟೋ ತೆಗೆಸಿಕೊಂಡು  ಮೊಬೈಲ್ ಮೂಲಕ ಹೊರ ಹಾಕಿದ್ದಾರೆ. ಈ ಘಟನೆ ಜುಲೈ ಮೊದಲ ವಾರದಲ್ಲೇ ನಡೆದಿದ್ದು ,  ಕೈದಿಗಳನ್ನು ಭೇಟಿಯಾಗಿ ಈ […]

ಕಾರಾಗೃಹದ ಕೈದಿ ಹೃದಯಾಘಾತದಿಂದ ಸಾವು

Wednesday, September 14th, 2016
heart-attack

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಕಾರ್ಕಳ ಹೊಸ್ಮಾರು ಈದು ಗ್ರಾಮ ಬಾಬು ಯಾನೆ ಮಬು (60) ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯ ಹೊಂದಿದ್ದ ಅವರಿಗೆ ಹಲವು ಬಾರಿ ನಗರದ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ಮಂಗಳವಾರವೂ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಕೂಡಲೇ ಸಿಬ್ಬಂದಿಗಳ ಭದ್ರತೆಯೊಂದಿಗೆ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಾರ್ಗದ ಮಧ್ಯೆಯೇ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಬಾಬು ಅವರು ಮೂಡಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದ ಆರೋಪಿಯಾಗಿ […]

ಕೈದಿಗಳ ನಿಯಮಿತ ಆರೋಗ್ಯ ತಪಾಸಣೆ: ಜಿಲ್ಲಾಧಿಕಾರಿ ಸೂಚನೆ

Tuesday, March 24th, 2015
dc Jail

ಮಂಗಳೂರು : ಜೈಲಿನಲ್ಲಿರುವ ಖೈದಿಗಳ ಆರೋಗ್ಯವನ್ನು ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ನಿಯಮಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಕಾರಾಗೃಹದಲ್ಲಿ ಸಂದರ್ಶಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಲ್ಲದೆ, ದಂತ ಕಾಲೇಜುಗಳ ನೆರವಿನೊಂದಿಗೆ ಕೈದಿಗಳ ದಂತ ಪರೀಕ್ಷೆಯನ್ನು ನಡೆಸಲು ಅವರು ತಿಳಿಸಿದರು. ಮೊದಲ ಬಾರಿಗೆ ಸಣ್ಣ ಪುಟ್ಟ ಅಪರಾಧಗಳನ್ನು ಎಸಗಿ ಬಂಧನಕ್ಕೊಳಗಾಗಿ ಜೈಲಿಗೆ ಬರುವವರನ್ನು ಮತ್ತು ವಿದ್ಯಾರ್ಥಿ ಆರೋಪಿಗಳನ್ನು ಜೈಲಿನಲ್ಲಿ ಕುಖ್ಯಾತ ಆರೋಪಿಗಳಿರುವ ಸೆಲ್‌ನಲ್ಲಿರಿಸದೆ, ಅವರನ್ನು ಪ್ರತ್ಯೇಕ ಸೆಲ್‌ನಲ್ಲಿಡಬೇಕು. ಅಂತರ್ ಜಿಲ್ಲಾ […]