ಜಾಮೀನು ಸಿಕ್ಕಿದರೂ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲಾಗದ ಕೈದಿಗಳಿಗೆ ನೆರವು‌

2:25 PM, Wednesday, July 17th, 2019
Share
1 Star2 Stars3 Stars4 Stars5 Stars
(No Ratings Yet)
Loading...

GA bavaಮಂಗಳೂರು: ಸಣ್ಣಪುಟ್ಟ ಪ್ರಕರಣದಲ್ಲಿ ಜೈಲುಪಾಲಾಗಿ ನ್ಯಾಯಾಲಯದಿಂದ ಜಾಮೀನು ಸಿಕ್ಕಿದರೂ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲಾಗದ ಕೈದಿಗಳಿಗೆ ಅಲ್ಪಸಂಖ್ಯಾತ ಆಯೋಗದಿಂದ ನೆರವು‌ ನೀಡಲು ಚಿಂತನೆ ನಡೆಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಜಿ.ಎ.ಬಾವ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಸೆಂಟ್ರಲ್ ಜೈಲಿನ ಕೈದಿಗಳಲ್ಲಿ ಶೇ. 30ರಿಂದ 35ರಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ. ಅಲ್ಪಸಂಖ್ಯಾತರ ಜನಸಂಖ್ಯೆ ಶೇ. 15ರಷ್ಟು ಇದ್ದರೆ, ಜೈಲಿನಲ್ಲಿ ಶೇ. 30ರಿಂದ 35 ಜನ ಇದ್ದಾರೆ. ಜೈಲಿನ ಅಂಕಿ-ಅಂಶ ಪರಿಶೀಲನೆ ಮಾಡಿದಾಗ ಹಲವು ಮಂದಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದರೂ ಬಡ ಕೈದಿಗಳು ಹಣಕಾಸಿನ ಮುಗ್ಗಟ್ಟಿನಿಂದ ಶ್ಯೂರಿಟಿ ನೀಡಲಾಗದೆ ಜೈಲಿನಲ್ಲೇ ಇರುವಂತಹ ಪರಿಸ್ಥಿತಿ ಇದೆ. ಇವುಗಳಲ್ಲಿ ಸಣ್ಣಪುಟ್ಟ ಪ್ರಕರಣದಲ್ಲಿ ಜೈಲುಪಾಲಾಗಿರುವ ಕೈದಿಗಳನ್ನು ಗುರುತಿಸಿ ಅವರಿಗೆ ನೆರವು ನೀಡಲು ವಕೀಲರ ಮೂಲಕ ಆಯೋಗ ಪ್ರಯತ್ನಿಸಲಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English