ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಹೇಗೆ ?

1:39 PM, Wednesday, July 19th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Alvas Botany ಮೂಡುಬಿದಿರೆ: ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಮತ್ತು ಉಪಯೋಗ ಎನ್ನುವ ವಿಷಯದ ಕುರಿತು ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಕೇರಳ ನೀಲಂಬೂರಿನ ಕೆಎಫ್‍ಆರ್‍ಐ ಸಹಸಂಸ್ಥೆಯ ವಿಜ್ಞಾನಿ ಡಾ.ಯು.ಎಮ್. ಚಂದ್ರಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ಬುಡಕಟ್ಟು ಜನಾಂಗದವರ ಕೃಷಿಪದ್ಧತಿ ಮತ್ತು ಅವರ ವೈಜ್ಞಾನಿಕ ದೃಷ್ಠಿಕೋನವನ್ನು ತುಲನಾತ್ಮಕ ಸಂಶೋಧನೆಗೆ ಒಳಪಡಿಸಿ ದೊರೆತಿರುವ ಫಲಿತಾಂಶದ ವಿವರವನ್ನು ವಿಮರ್ಶಾತ್ಮಕವಾಗಿ ಪ್ರಸ್ತುತ ಪಡಿಸಿದರು. ಪಾರಂಪರಿಕ ಆಹಾರ ಪದ್ಧತಿಯ ಶ್ರೇಷ್ಠತೆಯನ್ನು ಮತ್ತು ಆ ಕ್ಷೇತ್ರದಲ್ಲಿ ಸಂಶೋಧನೆಗೆ ಇರುವ ವಿಫುಲ ಅವಕಾಶವನ್ನು ತಿಳಿಸಿದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆವಹಿಸಿ, ಪ್ರಪಂಚದಲ್ಲಿ ಎಲ್ಲಾ ಜೀವರಾಶಿಗಳು ಅದರದ್ದೇ ಆದ ಶ್ರೇಷ್ಠತೆಯನ್ನು ಹೊಂದಿದೆ. ಇಲ್ಲಿ ಯಾರು ಶ್ರೇಷ್ಠರೂ ಅಲ್ಲ, ಯಾರೂ ಕನಿಷ್ಠರೂ ಅಲ್ಲ ಎಂಬುದನ್ನು ಅರಿತರೆ ಪ್ರಪಂಚದಲ್ಲಿ ಮಾನವ ಸಂತತಿ ಉಳಿದೀತು ಎಂದು ತಿಳಿಸಿದರು.

ಆಶಿಕಾ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಷಾ ಭಟ್ ನಿರೂಪಿಸಿದರು.ಲೇಖಾ ವಂದಿಸಿದರು.
ಉಪನ್ಯಾಸಕರಾದ ಮನೋಹರ ಆಚಾರ್ಯ, ಅರುಣ್ ಕುಮಾರ್, ಅನಿಲಾ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English