ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಹೇಗೆ ?
Wednesday, July 19th, 2017ಮೂಡುಬಿದಿರೆ: ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಮತ್ತು ಉಪಯೋಗ ಎನ್ನುವ ವಿಷಯದ ಕುರಿತು ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕೇರಳ ನೀಲಂಬೂರಿನ ಕೆಎಫ್‍ಆರ್‍ಐ ಸಹಸಂಸ್ಥೆಯ ವಿಜ್ಞಾನಿ ಡಾ.ಯು.ಎಮ್. ಚಂದ್ರಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ಬುಡಕಟ್ಟು ಜನಾಂಗದವರ ಕೃಷಿಪದ್ಧತಿ ಮತ್ತು ಅವರ ವೈಜ್ಞಾನಿಕ ದೃಷ್ಠಿಕೋನವನ್ನು ತುಲನಾತ್ಮಕ ಸಂಶೋಧನೆಗೆ ಒಳಪಡಿಸಿ ದೊರೆತಿರುವ ಫಲಿತಾಂಶದ ವಿವರವನ್ನು ವಿಮರ್ಶಾತ್ಮಕವಾಗಿ ಪ್ರಸ್ತುತ ಪಡಿಸಿದರು. ಪಾರಂಪರಿಕ ಆಹಾರ ಪದ್ಧತಿಯ ಶ್ರೇಷ್ಠತೆಯನ್ನು ಮತ್ತು ಆ […]