ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ಉತ್ಸವ

11:27 PM, Thursday, July 27th, 2017
Share
1 Star2 Stars3 Stars4 Stars5 Stars
(No Ratings Yet)
Loading...

Nagarapanchamiಮಂಗಳೂರು : ಇತಿಹಾಸ ಪ್ರಸಿದ್ದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆದ ನಾಗರ ಪಂಚಮಿ ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.

ಅನಂತ (ಶಿವ) ಪದ್ಮನಾಭ (ವಿಷ್ಣು)ವಿನ ಸಮಾಗಮವಿರುವ ಕುಡುಪು ನಾಗನ ಆರಾಧನೆಯ ಪ್ರಮುಖ ಕೇಂದ್ರವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ5 ನೇ ದಿನವನ್ನು ಭಕ್ತರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಾಗರ ಪಂಚಮಿಯನ್ನಾಗಿ ಆಚರಿಸುತ್ತಾರೆ. ಮುಂಜಾನೆ 6.30 ಕ್ಕೆ ಅನಂತ ಪದ್ಮನಾಭ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ ಮಾಡಿ, ನಾಗ ಬನದಲ್ಲಿ ನಾಗ ದೇವರಿಗೆ ತಂಬಿಲ ಪೂಜಾ ಪುರಸ್ಕಾರ ನೆರವೇರಿದವು . ಮಧ್ಯಾಹ್ನ ಅನಂತಪದ್ಮನಾಭ ದೇವರಿಗೆ ವಿಶೇಷ ಪೂಜೆ ಹಾಗು ಮಂಗಳಾರತಿ ನಡೆಯಿತು.

ಭಕ್ತರು ನಾಗದೇವರಿಗೆ ಹಾಲಿನ ಅಭಿಷೇಕ, ಸಿಯಾಳದ ಅಬೀಷೇಕ, ಅಲ್ಲದೆ ಇಷ್ಟಾರ್ಥ ಸಿದ್ಧಿಗಾಗಿ ನಾಗನ ಬೆಳ್ಳಿಯ ಪ್ರತಿಕೃತಿಗಳನ್ನು ದೇವರಿಗೆ ಸಮರ್ಪಿಸಿದರು. ವಿಶೇಷವಾಗಿ ನಾಗ ತಂಬಿಲ, ಆಶ್ಲೇಷ ಬಲಿ ಈ ಸಂದರ್ಭದಲ್ಲಿ ನಡೆಯಿತು.

Nagarapanchami

ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ಪೂರ್ವ ಶಿಷ್ಠ ಸಂಪ್ರದಾ ಯದಂತೆ ನಾಗರ ಪಂಚಮಿ ಆಚರಿಸಲಾ ಗುವುದು. ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗ ಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ಶ್ರದ್ಧಾ ಭಕ್ತಿಯಿಂದ ನೆರವೇರಲಿದೆ. ಪ್ರತಿ ವರ್ಷ ಭಕ್ತರು ಶ್ರೀ ಕ್ಷೇತ್ರದಲ್ಲಿ ನಾಗರಾ ಜನಿಗೆ ತನು ಎರೆಯುತ್ತಾರೆ. ಅಲ್ಲದೆ ಈ ದಿನ ಶ್ರೀ ದೇವಳದಲ್ಲಿ ವಿಶೇಷ ಪಂಚಾ ಮೃತ ಮಹಾಭಿಷೇಕ ನೆರವೇರಲಿದೆ.

ನಾಗರ ಪಂಚಮಿಯಂದು ಮಹಾ ಪೂಜೆಯ ನಂತರ ನಾಗಪ್ರತಿಷ್ಠಾ ಮಂಟ ಪದಲ್ಲಿನ ನಾಗರಾಜನಿಗೆ ವಿಶೇಷ ನೈವೇದ್ಯ ಸಮರ್ಪಣೆ ನೆರವೇರಲಿದೆ. ಬಳಿಕ ಗಂಧ ಪ್ರಸಾದದೊಂದಿಗೆ ಹಾಲಿನ ಅಭಿಷೇಕದ ಹಾಲು ಮತ್ತು ವಿಶೇಷವಾಗಿ ನಾಗ ಪ್ರಿಯವಾದ ಅರಿಶಿನ ಪ್ರಸಾದ ಹಾಗೂ ಕಂಡಸಾರಿ ಕೆಂಪು ಕಲ್ಲು ಸಕ್ಕರೆ ಒಳಗೊಂಡ ಪಂಚಕಜ್ಜಾಯ ವಿತರಿಸಲಾಗುತ್ತದೆ. ಈ ದಿನ ನಾಗರಾಜನಿಗೆ ಪ್ರಿಯ ವಾದ ಅಕ್ಕಿ ಮತ್ತು ಹಾಲಿನ ಪಾಯಸದ ಭೋಜನ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ.

ವಳಲಂಬೆ ಶ್ರೀ ಶಂಖಪಾಲ ಸುಬ್ರ ಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ದೇವಸ್ಥಾನದ ನಾಗನ ಕಟ್ಟೆ ಯಲ್ಲಿ ನಾಗದೇವರಿಗೆ ಹಾಲಿನ ಅಭಿ ಷೇಕ ನಾಗ ತಂಬಿಲ ನೆರವೇರಲಿದೆ.

ಅಲ್ಲದೆ ಶ್ರೀ ದೇವಳದಲ್ಲಿ ನಾಗರ ಪಂಚಮಿ ಪ್ರಯುಕ್ತ ಹೋಮ ಸಹಿತ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಲಿದೆ. ಏನೆಕಲ್ ಶಂಖಪಾಲ ದೇವಸ್ಥಾನ ಮತ್ತು ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುವುದು. ಗ್ರಾಮೀಣ ಪ್ರದೇಶದ ದೇವಾಲಯಗಳಲ್ಲಿ ಮತ್ತು ನಾಗಬನದಲ್ಲಿ ತನು ಸಮರ್ಪಣೆ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English