ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ

Friday, July 28th, 2017
Kaup Govardhan

ಮಂಗಳೂರು : ಹಿಂದೂಗಳ ನೈಸರ್ಗಿಕ ಆರಾಧನೆ ಎಂದು ಕರೆಯಲ್ಪಡುವ ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ ಎಂದು ನಂಬಲಾಗಿದೆ. ಪರಶುರಾಮ ದೇವರು ಸಮುದ್ರರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು […]

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ಉತ್ಸವ

Thursday, July 27th, 2017
Nagarapanchami

ಮಂಗಳೂರು : ಇತಿಹಾಸ ಪ್ರಸಿದ್ದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆದ ನಾಗರ ಪಂಚಮಿ ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಅನಂತ (ಶಿವ) ಪದ್ಮನಾಭ (ವಿಷ್ಣು)ವಿನ ಸಮಾಗಮವಿರುವ ಕುಡುಪು ನಾಗನ ಆರಾಧನೆಯ ಪ್ರಮುಖ ಕೇಂದ್ರವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ5 ನೇ ದಿನವನ್ನು ಭಕ್ತರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಾಗರ ಪಂಚಮಿಯನ್ನಾಗಿ ಆಚರಿಸುತ್ತಾರೆ. ಮುಂಜಾನೆ 6.30 ಕ್ಕೆ ಅನಂತ ಪದ್ಮನಾಭ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ ಮಾಡಿ, ನಾಗ ಬನದಲ್ಲಿ ನಾಗ ದೇವರಿಗೆ […]