ಆತ್ಮಹತ್ಯೆ ಮಾಡಿಕೊಂಡ ಕಾವ್ಯಾಳ ಪ್ರಕರಣ ತನಿಖೆಗೆ ಪೊಲೀಸ್ ಆಯುಕ್ತರಿಂದ ಆದೇಶ

7:48 PM, Friday, July 28th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Kavyasree ಮಂಗಳೂರು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನಲ್ಲಿ ಆತ್ಮ ಹತ್ಯೆ ಮಾಡಿಕೊಂಡ  ವಿದ್ಯಾರ್ಥಿನಿ ಕಾವ್ಯಾ ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶಿಸಿದ್ದಾರೆ.

ಜುಲಾಯಿ 20 ರಂದು ಬೆಳಗ್ಗೆ 6.03 ನಿಮಿಷಕ್ಕೆ ಹಾಸ್ಟೆಲ್ ನಿಂದ ಬ್ಯಾಡ್ಮಿಂಟನ್ ಪ್ರಾಕ್ಟಿಸ್ ಗೆ ಬಂದಿದ್ದ ಕಾವ್ಯ ಆ ದಿನ ಶಾಲೆಗೂ ಹಾಜರಾದ ಸಿಸಿ ಟಿವಿ ಪೂಟೇಜ್ ಗಳು ಪೊಲೀಸರು ಪರೀಕ್ಷಿಸಿದ್ದು. ಸಂಜೆ ಆಕೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆಯ ಶವವನ್ನು ಸಹ ಪಾಠಿಗಳೇ ಕೆಳಗಿಸಿ ಆಸ್ಪತ್ರೆ ಗೆ ಸಾಗಿಸಿದ್ದಾರೆ. ಮನೆಯವರಿಗೂ ಮಗಳ ಸಾವಿನ ಸುದ್ದಿ ಸಿಕ್ಕಿದ್ದು ಎಲ್ಲವೂ ಮುಗಿದ ಮೇಲೆ.

ಕಾವ್ಯಾಳ ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಹೆತ್ತವರು ನೀಡಿರುವ ದೂರು ಹಾಗೂ ಸಾರ್ವಜನಿಕವಾಗಿ ವ್ಯಕ್ತವಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆಗೆ ಆದೇಶಿಸಲಾಗಿದೆ.

ಕ್ರೀಡಾ ಪ್ರತಿಭಾನ್ವಿತೆಯಾಗಿದ್ದ ಕಾವ್ಯಾಳ ಸಾವಿನ ಬಗ್ಗೆ ಅವರ ತಂದೆ ಲೋಕೇಶ್ ಶಂಕೆ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥೆ ಕೊಲೆ ಎಂದು ಆಪಾದಿಸಿದ್ದು, ಈ ಬಗ್ಗೆ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಜು.24ರಂದು ದೂರು ನೀಡಿದ್ದರು. ಅಲ್ಲದೇ ಡಿವೈಎಫ್‌ಐ, ಎಸ್‌ಎಫ್‌ಐಯಂತಹ ಸಂಘಟನೆಗಳು ಕೂಡಾ ಕಾವ್ಯಾ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಪ್ರಕರಣದ ವಿಶೇಷ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶಿಸಿದ್ದಾರೆ.

ಕಾವ್ಯ ಆತ್ಮಹತ್ಯೆ ಪ್ರಕರಣ: ಯಾವುದೇ ತನಿಖೆಗೆ ಸಿದ್ಧ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿನಃ ಕಾರಣ ಸಂಸ್ಥೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ಕೊಲೆ ಪ್ರಕರಣ ಹಿಂದೆ ಎಂದಿಗೂ ನಡೆದಿಲ್ಲ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಮಾಧ್ಯಮ ಅಥವಾ ವೈಯಕ್ತಿಕವಾಗಿ ಯಾರೇ ತನಿಖೆ ಮುಂದಾದರೂ ಯಾವುದೇ ತನಿಖೆ ನಾವು ಸಿದ್ಧರಿದ್ದೇವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರತಿಕ್ರಿಯಿಸಿದ್ದಾರೆ.

ಜುಲೈ 20ರಂದು ಹಾಸ್ಟೆಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಡುತ್ತಿರುವ ವದಂತಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಅಪರಾಧ ನಡೆದರೆ ಅದು ಪೊಲೀಸ್ ತನಿಖೆಯಾಗಬೇಕು.ಆದರೆ ಸಮಾಜದಲ್ಲಿ ಗೊಂದಲ ಸೃಷ್ಠಿಸಿ, ಜವಾಬ್ದಾರಿಯು ಸ್ಥಾನದಲ್ಲಿರುವ ನನ್ನನು ಹಾಗೂ ಕಳೆದ ಎರಡುವರೆ ದಶಕಗಳಿಂದ ಪಾರದರ್ಶಕವಾಗಿ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಸಂಸ್ಥೆಯನ್ನು ಟಾರ್ಗೆಟ್ ಮಾಡುವುದರ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ. ಸಂಸ್ಥೆಯಲ್ಲಿ ಕಲಿಯುತ್ತಿರುವ 26 ಸಾವಿರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನಮ್ಮನ್ನೇ ನಂಬಿದ್ದಾರೆ. ಕಾವ್ಯ ಆತ್ಮಹತ್ಯೆ ಪ್ರಕರಣವು ಸರಿಯಾದ ರೀತಿಯಲ್ಲಿ ತನಿಖೆಯಾಗಿ ಅತೀ ಶೀಘ್ರ ಸತ್ಯಾಂಶ ಹೊರಬರಲಿ ಎಂದು ಡಾ.ಎಂ ಮೋಹನ್ ಆಳ್ವ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English