ಆಳ್ವಾಸ್​ ಶಿಕ್ಷಣ ಸಂಸ್ಥೆಯ ಹಾಸ್ಟೆಲ್​ನಲ್ಲಿ ಕೋಲಾರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ, ಒಕ್ಕೂಟದಿಂದ ಪ್ರತಿಭಟನೆ

Thursday, March 14th, 2024
Alvas-student

ಮೂಡಬಿದ್ರೆ : ಆಳ್ವಾಸ್​ ಶಿಕ್ಷಣ ಸಂಸ್ಥೆಯ ಹಾಸ್ಟೆಲ್​ನಲ್ಲಿ ಕೋಲಾರ ಮೂಲದ ಸಂಜಯ್ ಭುವನ್ (16) ಎಂಬ ವಿದ್ಯಾರ್ಥಿ ಮಾ.12 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕಾಲೇಜಿಗೆ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (NSUI) ನ ಜಿಲ್ಲಾಧ್ಯಕ್ಷ ಸುಹಾನ್ ನೇತೃತ್ವದಲ್ಲಿ ಮುತ್ತಿಗೆ‌ ಹಾಕಲಾಗಿದೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರಿಂದ ಕಾಲೇಜು ಬಳಿ ಭದ್ರತೆ ಒದಗಿಸಲಾಗಿದೆ. ಸಂಜಯ್ ಭುವನ್ ಚಿಲ್ಲರೆ ಹಣ ತೆಗೆದು ಆಡಳಿತ ಮಂಡಳಿಗೆ ತಿಳಿದು ಅವಮಾನಗೊಂಡು ಈ ನಿರ್ಧಾರಕೈ ಗೊಂಡಿದ್ದಾಗಿ […]

ದಪ್ಪ ಆಗಿದ್ದೇನೆ ಎಂದು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮಹಡಿಯಿಂದ ಜಿಗಿದು ಆತ್ಮಹತ್ಯೆ

Tuesday, November 14th, 2023
Prakruti Shetty

ಮಂಗಳೂರು : ಎಷ್ಟೇ ಪ್ರಯತ್ನ ಪಟ್ಟರು ತೂಕ ಇಳಿಸಲು ಸಾಧ್ಯವಾಗದೆ ವೈದ್ಯಕೀಯ ವಿದ್ಯಾರ್ಥಿನಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ ನಲ್ಲಿ ನಡೆದಿದೆ. ಬೆಳಗಾವಿಯ ಅಥಣಿ ಮೂಲದ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಪ್ರಕೃತಿ ಶೆಟ್ಟಿ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಬೆಳಗಿನ ಜಾವ 3 ಗಂಟೆಗೆ ಕಾಲೇಜಿನ ಹಾಸ್ಟೆಲ್‌ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ” ನಾನು ತುಂಬಾ ದಪ್ಪಾ […]

ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸಿದರೆ, ಅವರು ತಂದೆತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ: ಬಸವರಾಜ ಹೊರಟ್ಟಿ

Thursday, September 28th, 2023
basavaraja-horatti

ಹುಬ್ಬಳ್ಳಿ: ಜನರ ಮನಸ್ಸಿನಲ್ಲಿ ಸ್ವಾರ್ಥ ಹೆಚ್ಚುತ್ತಿದ್ದು, ಸಾಮಾಜಿಕ ಕಳಕಳಿ ಕುಸಿಯುತ್ತಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕೆಂಬ ಮನಸ್ಸುಗಳು ಹೆಚ್ಚಬೇಕಾಗಿದೆ ಎಂದು ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು. ಇಲ್ಲಿನ ಶ್ರೀನಿವಾಸ ಗಾರ್ಡನ್ನಲ್ಲಿ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಸಾಮಾನ್ಯರ ಅಸಾಮಾನ್ಯ ಅವ್ವ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಕುಸಿಯುತ್ತಿರುವ ಇಂದಿನ ದಿನದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ತಾಯಿ ಹೆಸರಿನ ಟ್ರಸ್ಟ್ […]

ಸುಮಾರು 3,500 ಹಾಸ್ಟೆಲ್​ಗಳ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಲಾಗುವುದು: ಪ್ರಿಯಾಂಕ್ ಖರ್ಗೆ

Wednesday, October 17th, 2018
priyanka-kharge

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ರಾಜ್ಯದಲ್ಲಿ ನಡೆಸುತ್ತಿರುವ ಸುಮಾರು 3,500 ಹಾಸ್ಟೆಲ್ಗಳ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ರಾಜ್ಯಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳ ಪ್ರಿನ್ಸಿಪಾಲರುಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್ಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಾಸ್ಟೆಲ್ಗಳ ಸಮಗ್ರ ಸುಧಾರಣೆಗಾಗಿ ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ವರದಿ ನೀಡಿದ ನಂತರ ಹಾಸ್ಟೆಲ್ಗಳ ಕಾರ್ಯವೈಖರಿಯಲ್ಲಿ […]

ಆತ್ಮಹತ್ಯೆ ಮಾಡಿಕೊಂಡ ಕಾವ್ಯಾಳ ಪ್ರಕರಣ ತನಿಖೆಗೆ ಪೊಲೀಸ್ ಆಯುಕ್ತರಿಂದ ಆದೇಶ

Friday, July 28th, 2017
Kavyasree

ಮಂಗಳೂರು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನಲ್ಲಿ ಆತ್ಮ ಹತ್ಯೆ ಮಾಡಿಕೊಂಡ  ವಿದ್ಯಾರ್ಥಿನಿ ಕಾವ್ಯಾ ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶಿಸಿದ್ದಾರೆ. ಜುಲಾಯಿ 20 ರಂದು ಬೆಳಗ್ಗೆ 6.03 ನಿಮಿಷಕ್ಕೆ ಹಾಸ್ಟೆಲ್ ನಿಂದ ಬ್ಯಾಡ್ಮಿಂಟನ್ ಪ್ರಾಕ್ಟಿಸ್ ಗೆ ಬಂದಿದ್ದ ಕಾವ್ಯ ಆ ದಿನ ಶಾಲೆಗೂ ಹಾಜರಾದ ಸಿಸಿ ಟಿವಿ ಪೂಟೇಜ್ ಗಳು ಪೊಲೀಸರು ಪರೀಕ್ಷಿಸಿದ್ದು. ಸಂಜೆ ಆಕೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆಯ ಶವವನ್ನು […]

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳು ಸುಸ್ಥಿತಿಯಲ್ಲಿ- ಎಂ.ಶಿವಣ್ಣ

Saturday, August 24th, 2013
dalit

ಮಂಗಳೂರು  :  ಇತರೆ ರಾಜ್ಯಗಳು ಹಾಗೂ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸುತ್ತಿರುವ ಹಾಸ್ಟೆಲ್ ಗಳು  ಅತ್ಯುತ್ತಮವಾಗಿವೆಯೆಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯರಾದ ಮಾನ್ಯ ಶ್ರೀ ಎಂ.ಶಿವಣ್ಣ ಅವರು ತಮ್ಮ ಅಭಿಪ್ರಾಯ ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸಂವಿಧಾನಾತ್ಮಕವಾಗಿ ವಿವಿಧ ಇಲಾಖೆಗಳ ಮುಖೇನ ನೀಡಲಾಗಿರುವ ವಿವಿಧ ಸವಲತ್ತುಗಳ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 32 ವಿದ್ಯಾರ್ಥಿ ನಿಲಯಗಳು ಸಮಾಜ […]