ಮಂಗಳೂರು : ಎಷ್ಟೇ ಪ್ರಯತ್ನ ಪಟ್ಟರು ತೂಕ ಇಳಿಸಲು ಸಾಧ್ಯವಾಗದೆ ವೈದ್ಯಕೀಯ ವಿದ್ಯಾರ್ಥಿನಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ.
ಬೆಳಗಾವಿಯ ಅಥಣಿ ಮೂಲದ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.
ಪ್ರಕೃತಿ ಶೆಟ್ಟಿ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಬೆಳಗಿನ ಜಾವ 3 ಗಂಟೆಗೆ ಕಾಲೇಜಿನ ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ” ನಾನು ತುಂಬಾ ದಪ್ಪಾ ಇದ್ದೇನೆ. ನನ್ನ ಸೌಂದರ್ಯಕ್ಕೆ ದಪ್ಪ ಅನ್ಮೊದು ಅಡ್ಡಿಯಾಗಿದೆ. ತೂಕ ಇಳಿಸಲು ಸಾಕಷ್ಟು ಪ್ರಯತ್ನ ಪಟ್ಟರು ಆಗಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ ” ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದಿಟ್ಟಿದ್ದಳು.
ಯುವತಿ ಬೆಳಗಾವಿಯ ಅಥಣಿಯವಳಾಗಿದ್ದರು ದೀಪಾವಳಿ ಹಬ್ಬದ ಹಿನ್ನೆಲೆ ಕಾಲೇಜಿಗೆ ರಜೆ ಸಿಕ್ಕಿದ್ದರೂ ಊರಿಗೆ ತೆರಳದೆ ಹಾಸ್ಟೆಲ್‌ನಲ್ಲೇ ಇದ್ದಳು. ಆದರೆ, ಸೋಮವಾರ ಏಕಾಏಕಿ ಈ ನಿರ್ಧಾರ ಮಾಡಿದ್ದಾಳೆ.
ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English