ಕಾವ್ಯಾ ಮನೆಗೆ ಸಚಿವ ರಮಾನಾಥ ರೈ ಭೇಟಿ

11:37 PM, Sunday, July 30th, 2017
Share
1 Star2 Stars3 Stars4 Stars5 Stars
(No Ratings Yet)
Loading...
Ramanatha Rai ಮಂಗಳೂರು   : ಇತ್ತೀಚಿಗೆ ಅಸಹಜ ಸಾವಿಗೀಡಾದ ಆಳ್ವಾಸ್ ಕಾಲೇಜಿನ ವಿದ್ಯಾಥಿ೯ನಿ ಕಾವ್ಯಾ ಮನೆಗೆ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಭೇಟಿ ನೀಡಿದರು.

ಕಾವ್ಯಾ ಹೆತ್ತವರೊಂದಿಗೆ ಮಾತನಾಡಿ, ಅವರನ್ನು ಸಚಿವರು ಸಂತೈಸಿದರು. ಈ ಪ್ರಕರಣದಲ್ಲಿ ಕೆಲವೊಂದು ಸಂಶಯಗಳು ಕಾವ್ಯಾ ಮನೆಯವರಲ್ಲಿದೆ. ಇದರ ಸತ್ಯಾಸತ್ಯತೆಗಳು ಹೊರಗೆ ಬರಬೇಕೆಂದು ಅವರು ಅಪೇಕ್ಷಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಾಮಾಣಿಕವಾಗಿ ತನಿಖೆ ನಡೆಸಲಿದೆ ಎಂದು ಹೇಳಿದರು.

ಕಾವ್ಯಾ ಉತ್ತಮ ಕ್ರೀಡಾಪಟು ಆಗಿದ್ದು, ಈ ನಿಟ್ಟಿನಲ್ಲಿ ಅವಳ ಕುಟುಂಬಕ್ಕೆ ರಾಜ್ಯ ಸರಕಾರ ಗರಿಷ್ಟ ನೆರವು ನೀಡಲಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.

ಸಚಿವರೊಂದಿಗೆ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ,  ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಸ್ಥಳೀಯ ಮುಖಂಡರು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English