ಮಗಳ ಮಾತಿಗೆ ಚಿನ್ನ ಅಡವಿಟ್ಟು ಶೌಚಾಲಯ ಕಟ್ಟಿಸಿದ ಹೆತ್ತವರು

Wednesday, January 16th, 2019
Kavya

ಮೂಡುಬಿದಿರೆ: ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕೊರಗಿನಿಂದ ಹೆತ್ತವರನ್ನು ಕಾಡಿ ಬೇಡಿ ಅವರ ಮನವೊಲಿಸಿ ಕೊನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಶಿರ್ತಾಡಿ ಗ್ರಾ.ಪಂ.ನ ಮೂಡುಕೊಣಾಜೆಯ 8ರ ಹರೆಯದ ಕಾವ್ಯಾ ಯಶಸ್ವಿಯಾಗಿದ್ದಾಳೆ. ಕುದ್ರೆಲ್ ನಿವಾಸಿ ಶೀನ-ಲೀಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಕಾವ್ಯಾ ಕಿರಿಯವಳು. ಸರಕಾರಿ ಕಿ.ಪ್ರಾ. ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಆರೋಗ್ಯ ಕಾರ್ಯಕರ್ತೆಯ ಸ್ವತ್ಛತೆಯ ಪಾಠದಿಂದ ಪ್ರೇರಿತಳಾದ ಕಾವ್ಯಾ ಶೌಚಾಲಯ ನಿರ್ಮಿಸಲು ಹೆತ್ತವರನ್ನು ಆಗ್ರಹಿಸಿದ್ದಳು. ಸೋಗೆ ಮಾಡಿನ ಸೂರಿನ ಮನೆಯನ್ನು ದುರಸ್ತಿ ಮಾಡಿದಾಗಲೇ 1.5 ಲಕ್ಷ ರೂ. ಸಾಲವಾಗಿತ್ತು. ಮತ್ತೆ […]

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ: ಪೊಲೀಸ್‌ಗೆ ನೊಟೀಸ್

Wednesday, January 10th, 2018
kavya

ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಾಲೆ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೊಟೀಸ್ ನೀಡಿದೆ. ಕಾವ್ಯಾ ಪೂಜಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಮತ್ತು ದಾಖಲೆಗಳ ಸಮೇತ ಇನ್ನು ನಾಲ್ಕು ವಾರಗಳ ಒಳಗೆ ಮಾನವ ಹಕ್ಕು ಆಯೋಗದ ಮುಂದೆ ಹಾಜರಾಗುವಂತೆ ನೊಟೀಸ್‌ನಲ್ಲಿ ಸೂಚಿಸಲಾಗಿದೆ. ಆಳ್ವಾಸ್‌ನಲ್ಲಿ ಓದುತ್ತಿದ್ದ ಕಾವ್ಯಾ ಕಳೆದ ವರ್ಷ ಜುಲೈ 20ರಂದು ತನ್ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ […]

ಕಾವ್ಯಾ ಮರಣೋತ್ತರ ಪರೀಕ್ಷೆಯ ವರದಿ ಕೂಲಂಕಷ ಪರಿಶೀಲನೆ

Monday, July 31st, 2017
Kavyashree

ಮಂಗಳೂರು :  ರಾಷ್ಟ್ರ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅವರ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸ್ ಕೈ ಸೇರಿದೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದ ತಂಡದ ಕೈ ಸೇರಿರುವ ಈ ವರದಿಯಲ್ಲಿ ಕಾವ್ಯಾಳದ್ದು ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಮರಣೋತ್ತರ ಪರೀಕ್ಷೆಯ ವರದಿಯ ಬಗ್ಗೆ ಎಸಿಪಿ ನೇತೃತ್ವದ ತನಿಖಾ ತಂಡವು ಕೂಲಂಕಷ ಪರಿಶೀಲನೆ ನಡೆಸುತ್ತಿದೆ. ಕಟೀಲು ಸಮೀಪದ ಎಕ್ಕಾರು […]

ಕಾವ್ಯಾಳ ಸಂಶಯಾಸ್ಪದ ಸಾವಿನ ಸಿಐಡಿ ತನಿಖೆಗೆ ಶ್ರೀರಾಮಸೇನೆ ಆಗ್ರಹ

Monday, July 31st, 2017
Sri Rama Sene

ಮಂಗಳೂರು   :  ಸಿಐಡಿ ತನಿಖೆಗೆ ಶ್ರೀರಾಮಸೇನೆ ಆಗ್ರಹ ಕಾವ್ಯಾಳ ಸಂಶಯಾಸ್ಪದ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮತ್ತು ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ರೂಪದಲ್ಲಿ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಶನಿವಾರ ಜಿಲ್ಲಾಧಿಕಾರಿಗೆ ಮನವಿ ನೀಡಿತು. ಜಿಲ್ಲಾಧಿಕಾರಿ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮನವಿ ಸ್ವೀಕರಿಸಿದರು. ಮೃತ ಕಾವ್ಯಾಳ ಕುಟುಂಬದವರಿಗೆ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಹಾಗೂ ಮೃತರ ಕುಟುಂಬಕ್ಕೆ 25 […]

ಕಾವ್ಯಾ ಮನೆಗೆ ಸಚಿವ ರಮಾನಾಥ ರೈ ಭೇಟಿ

Sunday, July 30th, 2017
Ramanatha Rai

ಮಂಗಳೂರು   : ಇತ್ತೀಚಿಗೆ ಅಸಹಜ ಸಾವಿಗೀಡಾದ ಆಳ್ವಾಸ್ ಕಾಲೇಜಿನ ವಿದ್ಯಾಥಿ೯ನಿ ಕಾವ್ಯಾ ಮನೆಗೆ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಭೇಟಿ ನೀಡಿದರು. ಕಾವ್ಯಾ ಹೆತ್ತವರೊಂದಿಗೆ ಮಾತನಾಡಿ, ಅವರನ್ನು ಸಚಿವರು ಸಂತೈಸಿದರು. ಈ ಪ್ರಕರಣದಲ್ಲಿ ಕೆಲವೊಂದು ಸಂಶಯಗಳು ಕಾವ್ಯಾ ಮನೆಯವರಲ್ಲಿದೆ. ಇದರ ಸತ್ಯಾಸತ್ಯತೆಗಳು ಹೊರಗೆ ಬರಬೇಕೆಂದು ಅವರು ಅಪೇಕ್ಷಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಾಮಾಣಿಕವಾಗಿ ತನಿಖೆ ನಡೆಸಲಿದೆ ಎಂದು ಹೇಳಿದರು. ಕಾವ್ಯಾ ಉತ್ತಮ ಕ್ರೀಡಾಪಟು ಆಗಿದ್ದು, ಈ ನಿಟ್ಟಿನಲ್ಲಿ […]