ಮೂಡುಬಿದಿರೆ: ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕೊರಗಿನಿಂದ ಹೆತ್ತವರನ್ನು ಕಾಡಿ ಬೇಡಿ ಅವರ ಮನವೊಲಿಸಿ ಕೊನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಶಿರ್ತಾಡಿ ಗ್ರಾ.ಪಂ.ನ ಮೂಡುಕೊಣಾಜೆಯ 8ರ ಹರೆಯದ ಕಾವ್ಯಾ ಯಶಸ್ವಿಯಾಗಿದ್ದಾಳೆ.
ಕುದ್ರೆಲ್ ನಿವಾಸಿ ಶೀನ-ಲೀಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಕಾವ್ಯಾ ಕಿರಿಯವಳು. ಸರಕಾರಿ ಕಿ.ಪ್ರಾ. ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಆರೋಗ್ಯ ಕಾರ್ಯಕರ್ತೆಯ ಸ್ವತ್ಛತೆಯ ಪಾಠದಿಂದ ಪ್ರೇರಿತಳಾದ ಕಾವ್ಯಾ ಶೌಚಾಲಯ ನಿರ್ಮಿಸಲು ಹೆತ್ತವರನ್ನು ಆಗ್ರಹಿಸಿದ್ದಳು. ಸೋಗೆ ಮಾಡಿನ ಸೂರಿನ ಮನೆಯನ್ನು ದುರಸ್ತಿ ಮಾಡಿದಾಗಲೇ 1.5 ಲಕ್ಷ ರೂ. ಸಾಲವಾಗಿತ್ತು. ಮತ್ತೆ ಶೌಚಾಲಯ ನಿರ್ಮಿಸಲು ಹೆತ್ತವರಲ್ಲಿ ಚಿಕ್ಕಾಸು ಇರಲಿಲ್ಲ. ಜತೆಗೆ ಹಕ್ಕುಪತ್ರ ಸಮಸ್ಯೆ ಹಾಗೇ ಇದೆ.
ಪಂಚಾಯತ್‌ನಲ್ಲಿ ಶೌಚಾಲಯ ನಿರ್ಮಿಸಲು ವಿನಂತಿ ಸಲ್ಲಿಸಿದಾಗ, ಮನೆ ಕಟ್ಟಿಸಿಕೊಂಡವರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಆಗುವುದಿಲ್ಲವೇ? ಎಂಬ ಉತ್ತರ ಬಂದಿತ್ತು. ಕೊನೆಗೆ ಕಾವ್ಯಾಳ ಒತ್ತಾಯಕ್ಕೆ ಮಣಿದ ತಂದೆ-ತಾಯಿ ಚಿನ್ನ ಅಡವಿಟ್ಟು ಮೂವತ್ತು ಸಾವಿರ ರೂ. ವೆಚ್ಚದಲ್ಲಿ ಶೌಚಾಲಯ, ಸ್ನಾನದ ಕೊಠಡಿ ಕಟ್ಟಿಸಿದ್ದಾರೆ.
Click this button or press Ctrl+G to toggle between Kannada and English