ವಿಶ್ವ ಹಿಂದು ಪರಿಷತ್, ಭಜರಂಗದಳದಿಂದ ಮಂಗಳೂರಿನಲ್ಲಿ ಚೀನಾ ವಸ್ತುಗಳನ್ನು ಸುಟ್ಟು ಪ್ರತಿಭ‌ಟನಾ ಪ್ರದರ್ಶನ

5:49 PM, Friday, September 1st, 2017
Share
1 Star2 Stars3 Stars4 Stars5 Stars
(4 rating, 1 votes)
Loading...

china item ಮಂಗಳೂರು : ಬಜರಂಗದಳ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡ ಹಿನ್ನಲೆಯಲ್ಲಿ  ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳದ ಕಾರ್ಯಕರ್ತರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಪ್ರತಿಭ‌ಟನಾ ಪ್ರದರ್ಶನ ನಡೆಸಿದರು.

ಮಂಗಳೂರಿನ ಕದ್ರಿ ಮೈದಾನದಲ್ಲಿ ಸೇರಿದ ನೂರಾರು ವಿ.ಎಚ್.ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಚೀನಾ ನಿರ್ಮಿತ ಆಟಿಕೆ ಸಾಮಾಗ್ರಿ, ಎಲೆಕ್ಟ್ರಾನಿಕ್ ಉಪಕರಣ ಹಾಗೂ ಚೀನಾದಿಂದ ಆಮದಾದ ಇತರ ವಸ್ತುಗಳನ್ನು ದಹಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್  ಮಾತನಾಡಿ  ಚೀನಾ ಭಾರತದ ಸೇನೆಗೆ ನಿರಂತರ ಉಪಟಳವನ್ನು ಕೊಡುತ್ತಿದ್ದು, ಗಡಿಯಲ್ಲಿ ಬಿಗುವಿನ ವಾತಾವರಣವನ್ನೂ ನಿರ್ಮಿಸಿದೆ. ಅಲ್ಲದೆ ಅರುಣಾಚಲಪ್ರದೇಶವನ್ನೂ ಚೀನಾ ತನ್ನದೆಂದು ಖ್ಯಾತೆ ತೆಗೆಯುತ್ತಲೆ ಬಂದಿದೆ.
china item
ಚೀನಾದ ಇಂಥಹ ಆಕ್ರಮಣಶೀಲತೆಗೆ ಹೊಡೆತ ನೀಡಲು ಚೀನಾ ನಿರ್ಮಿತ ವಸ್ತುಗಳ ಬಹಿಷ್ಕಾರದಿಂದಲೇ ಸಾಧ್ಯ . ಚೀನಾ ಹಾಗೂ ಭಾರತದ ಗಡಿ ಭಾಗವಾದ ಧೋಕ್ಲಾಮ್ ನಲ್ಲಿ ಸೇನಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿದೆ.

ಚೀನಾದ ಆರ್ಥಿಕತೆಯು ಭಾರತೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಚೀನಾ ದೇಶದ ಆರ್ಥಿಕತೆಯ ಶೇಕಡಾ 17 ಭಾಗ ಭಾರತದ ಮಾರುಕಟ್ಟೆಯಿಂದಲೇ ಬರುತ್ತಿದೆ. ಒಂದು ವೇಳೆ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿದ್ದೇ ಆದಲ್ಲಿ ಆ ದೇಶದ ಆರ್ಥಿಕ ಶಕ್ತಿಗೆ ಭಾರೀ ಹೊಡೆತ ಬೀಳಲಿದೆ ಎಂದು ಪ್ರತಿಭಟನಾಕಾರರನ್ನು ಉದ್ಧೇಶಿಸಿ ಅವರು ಹೇಳಿದರು.

ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್  ತಮ್ಮ ಒಪ್ಪೊ ಮೊಬೈಲ್‌ನ್ನು ನೆಲಕ್ಕಪ್ಪಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಚೀನಾದ ಆಟಿಕೆಗಳು, ಇಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ವಸ್ತುಗಳನ್ನು ಸುಡಲಾಯಿತು.

ಈ ಸಂದರ್ಭ ಮಾತನಾಡಿದ ಶರಣ್ಪಂಪ್ ವೆಲ್ , ಭಾರತದ ನಾಶಕ್ಕೆ ಚೀನಾ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ್ದಲ್ಲದೆ, ಗಡಿ ತಕರಾರಿಗೂ ಬಂದಿತ್ತು. ಆದರೆ, ಈ ಬಾರಿ ದೇಶದ ಯುವಕರು ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದರು.

china item
ದೇಶದ ಉತ್ಪನ್ನಗಳಿಗಿಂತ ಚೀನಾದ ಉತ್ಪನ್ನಗಳೇ ಭಾರತದ ಮಾರುಕಟ್ಟೆಯನ್ನು ಆಳುತ್ತಿವೆ. ಉಡುಪು, ಮಕ್ಕಳ ಆಟಿಕೆಗಳು, ಇಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಚೀನಾ ಎಲ್ಲ ವಸ್ತುಗಳಿಗೆ ಜನಸಂಖ್ಯಾತ ದೇಶವಾದ ಭಾರತದಲ್ಲಿ ಮಾರುಕಟ್ಟೆ ಸ್ಥಾಪಿಸಿದೆ. ಇಷ್ಟೆಲ್ಲಾ ಆದರೂ ಭಾರತದ ಪರ ನಿಲುವು ತಾಳದ ಚೀನಾ ನಮ್ಮ ಸೈನಿಕರ ಮೇಲೆ ದಾಳಿಗೆ ಮುಂದಾಗಿ ದೇಶದ ಜನರನ್ನು ಕೆಣಕಿದೆ ಎಂದರು.

ವಿಶ್ವಹಿಂದೂ ಪರಿಷತ್ ಮುಖಂಡರಾದ  ಜಗದೀಶ್ ಶೇಣವ, ಭುಜಂಗ ಕುಲಾಲ್, ಪುನೀತ್ ಕೊಟ್ಟರಿ ಉಪಸ್ಥಿತರಿದ್ದರು.

china item

china item

china item

china item

china item

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English