ಮುಡುಬಿದಿರೆ: ದಾವಣಗೆರೆಯ ಕೆಇಬಿ ಇಂಜಿನಿಯರ್ ಅಸೋಸಿಯೇಶನ್ ಹಾಲ್ ನಲ್ಲಿ ಜಿಲ್ಲಾ ವೇಟ್ ಲಿಪ್ಟಿಂಗ್ ಅಸೋಸಿಯೇಷನ್, ರಾಜ್ಯ ವೇಟ್ ಲಿಪ್ಟರ್ ಅಸೋಸಿಯೇಸನ್ ಸಹ ಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಸ್ಪರ್ಧೆ ಯಲ್ಲಿ ಆಳ್ವಾಸ್ ಕಾಲೇಜ್ ತಂಡ ವೇಟ್ ಲಿಪ್ಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆಳ್ವಾಸ್ ಕಾಲೇಜಿನ ಸ್ವಸ್ತಿಕ್ ಶೆಟ್ಟಿ ಸ್ನ್ಯಾಚ್ ನಲ್ಲಿ 115, ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 150 ಕೆ.ಜಿ.ಭಾರ ಎತ್ತಿದ ಸಾಧನೆ ಮಾಡಿದರು. ಸೀನಿಯರ್ ವಿಭಾಗದ ಬೆಸ್ಟ್ ಲಿಪ್ಟರ್ ಪ್ರಶಸ್ತಿಗೆ ಅವರು ಬಾಜನರಾದರು. ಆಳ್ವಾಸ್ ಕಾಲೇಜಿನ ಮತ್ತೊಬ್ಬ ಸ್ಪರ್ಧೆ ಹನುವೇಷ್ ಸಾಗರ್ ಜೂನಿಯರ್ ವಿಭಾಗದಲ್ಲಿ ಸ್ನ್ಯಾಚ್ ನಲ್ಲಿ 80, ಕ್ಲೀನ್ ಆ್ಯಂಡ್ ಜಕ್ರ್ ನಲ್ಲಿ 110 ಕೆ.ಜಿ ಭಾರ ಎತ್ತುವ ಮೂಲಕ ಬೆಸ್ಟ್ ಲಿಪ್ಟರ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಮಹಿಳೆಯರ ವಿಭಾಗದ ಜೂನಿಯರ್ ಮತ್ತು ಸೀನಿಯರ್ ಬೆಸ್ಟ್ ಲಿಪ್ಟರ್ ಗೌರವಕ್ಕೆ ಸಾಯ್ (ಬೆಂಗಳೂರು) ಕ್ರೀಡಾ ಪಟು ತಸಾನಾ ಚಾಂದ್ (58 ಕೆ.ಜಿ. ವಿಭಾಗ) ಪಾತ್ರರಾದರು.
ಸ್ನ್ಯಾಚ್ ನಲ್ಲಿ 90, ಕ್ಲೀನ್ ಆ್ಯಂಡ್ ಜಕ್ರ್ ನಲ್ಲಿ 120 ಕೆ.ಜಿ. ಭಾರ ಎತ್ತಿದ ಸಾಧನೆಯನ್ನು ಚಾನು ಮಾಡಿದರು.
ಫಲಿತಾಂಶ: ಸೀನಿಯರ್ ವಿಭಾಗ
ಪುರುಷರು, ಆಳ್ವಾಸ್ ಕಾಲೇಜ್ (215 ಪಾಯಿಂಟ್ಸ್)-1: ಆಳ್ವಾಸ್ ಸ್ಪೋಟ್ಸ್ ಕ್ಲಬ್ (193 ಪಾಯಿಂಟ್ಸ್)-
2. ಮಹಿಳೆಯರು: ಭಾರತ ಕ್ರೀಡಾ ಪ್ರಾಧಿಕಾರ (ಸಾಯ್)-ಬೆಂಗಳೂರು (194 ಪಾಯಿಂಟ್ಸ್)-1 ಆಳ್ವಾಸ್ ಕಾಲೇಜು (190 ಪಾಯಿಂಟ್ಸ್)-2.
ಜೂನಿಯರ್ ವಿಭಾಗ: ಪುರುಷರು
ಆಳ್ವಾಸ್ ಕಾಲೇಜು (230 ಪಾಯಿಂಟ್ಸ್)-1, ಆಳ್ವಾಸ್ ಸ್ಪೋಟ್ಸ್ ಕ್ಲಬ್ (178 ಪಾಯಿಂಟ್ಸ್)-2.
ಮಹಿಳೆಯರು: ಆಳ್ವಾಸ್ ಕಾಲೇಜು(200 ಪಾಯಿಂಟ್ಸ್)-1,
ಆಳ್ವಾಸ್ ಸ್ಪೋಟ್ಸ್ ಕ್ಲಬ್ (185 ಪಾಯಿಂಟ್ಸ್)-2.
Click this button or press Ctrl+G to toggle between Kannada and English