ಆಳ್ವಾಸ್‌ನಲ್ಲಿ ದೀಪಾವಳಿ ಸಾಂಸ್ಕೃತಿಕ ಸಂಭ್ರಮ

Saturday, November 11th, 2017
alvas

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ ಸಾಯಂಕಾಲ ‘ಆಳ್ವಾಸ್ ದೀಪಾವಳಿ 2017 ಸಾಂಸ್ಕೃತಿಕ ವೈಭವ ನಡೆಯಿತು. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾತೀರ್ಥ ಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಆಳ್ವಾಸ್ ಮುಖ್ಯಸ್ಥ ಡಾ.ಎಂ ಮೋಹನ ಆಳ್ವ, ತುಳುನಾಡಿನ ಸಾಂಪ್ರಾದಾಯಿಕ ತುಳಸೀ ಪೂಜೆ, ಕೃಷಿ ಪರಿಕರಗಳಿಗೆ ಪೂಜೆ, ಸರಸ್ವತಿ ಪೂಜೆ, ಲಕ್ಷ್ಮೀ ಪೂಜೆ, ಗೋಪೂಜೆ ನೆರವೇರಿಸಿದರು. ಕದ್ರಿ ನವನೀತ ಶೆಟ್ಟಿ ಬಲೀಂದ್ರ ಪೂಜೆ ಮಹತ್ವವನ್ನು ತಿಳಿಸಿದರು. ಚೌಟರ […]

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಆಯ್ಕೆ

Friday, November 10th, 2017
alvas

ಮೂಡುಬಿದಿರೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ವಿವಿಧ ಕೋರ್ಸ್‌ಗಳನ್ನು ನಡೆಸಲು ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಆಯ್ಕೆಯಾಗಿದೆ. 300 ಸೀಟ್‌ಗಳನ್ನು ಈ ಕೋರ್ಸ್ ಗಳಿಗೆ ನಿಗದಿಪಡಿಸಲಾಗಿದೆ. ಸಿ.ಎನ್.ಸಿ ಆಪರೇಟರ್ , ತಾಂತ್ರಿಕ ಐಟಿ ಸಂಯೋಜಕ , ಟೆಕ್ನಿಷಿಯನ್, ಫಿಟ್ಟರ್ ಮತ್ತಿತರ ವೃತ್ತಿಪರ ಕೋರ್ಸ್‌ಗಳನ್ನು ನಡೆಸಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಮತ್ತು ಪ್ರಸಕ್ತ ಉದ್ಯೋಗಸ್ಥರಿಗೆ ಅಗತ್ಯ ತರಬೇತಿ ಮತ್ತು ಆರ್ಥಿಕ ಸಹಾಯವನ್ನು ಒದಗಿಸಿ ಕೌಶಲ್ಯಾಭಿವೃದ್ಧಿ ಮಾಡುವುದೇ ಈ ಯೋಜನೆಯ ಪ್ರಮುಖ ಉದ್ದೇಶ ಎಂದು ಸಂಯೋಜನಾಧಿಕಾರಿ ಪ್ರೊ. […]

ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

Tuesday, November 7th, 2017
alvas

ಮಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಅರವಿಂದ ಪ.ಪೂ. ಕಾಲೇಜು ಕುಣಿಗಲ್ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 8 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಆಳ್ವಾಸ್ 5 ವಿಭಾಗದಲ್ಲಿ ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕ ಮತ್ತು 2 ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪದಕ ವಿಜೇತರು: ಮಮತಾ ಕೇಳೋಜಿ( 44 ಕೆ.ಜಿ ವಿಭಾಗ) ಪ್ರಥಮ, ಅಂಕಿತ ಹೆಚ್. (59 ಕೆ.ಜಿ ವಿಭಾಗ) ಪ್ರಥಮ, ತುಷಾರ ಎ.(63 ಕೆ.ಜಿ ವಿಭಾಗ) ಪ್ರಥಮ ,ಡೆಲ್ಫಿ ವರ್ಗೀಸ್( 67 ಕೆ.ಜಿ ವಿಭಾಗ) […]

ಕೆ.ಎಸ್.ಸಿ.ಎ. ಪ.ಪೂ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ; ಆಳ್ವಾಸ್‌ಗೆ ವಿನ್ನರ‍್ಸ್ ಪ್ರಶಸ್ತಿ

Tuesday, November 7th, 2017
Alvas

ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ದೇರಳಕಟ್ಟೆಯಲ್ಲಿ ನಡೆದ ಕೆ.ಎಸ್.ಸಿ.ಎ. ಪ.ಪೂ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್‌ಗೆ ಪದವಿಪೂರ್ವ ಕಾಲೇಜು ವಿನ್ನರ‍್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ನಿಗದಿತ 50 ಓವರ್‌ಗಳಲ್ಲಿ 176 ರನ್‌ಗಳನ್ನು ಗಳಿಸಿತು. ಆಳ್ವಾಸ್ ಪರವಾಗಿ ಹರ್ಷಿತ್ ಪೂಜಾರಿ 47 ರನ್, ಮಿಥುನ್ 30 ರನ್ ಹಾಗೂ ಪರೇಶ್ 18 ರನ್‌ಗಳನ್ನು ಗಳಿಸಿದರು. ಇದಕ್ಕುತ್ತರವಾಗಿ ಸಂತ ಅಲೋಶಿಯಸ್ ಪ.ಪೂ. ಕಾಲೇಜು ಕೇವಲ 151 ರನ್‌ಗಳಿಗೆ ಸರ್ವಪತನಗೊಂಡಿತು. ಆಳ್ವಾಸ್ ಪರವಾಗಿ ಅರುಣ್ ಮೋನಪ್ಪ ತಲಾ 2 ವಿಕೆಟ್, ರೋಹಿತ್ […]

ಜಿಲ್ಲಾ ಮಟ್ಟದ ಪ.ಪೂ ಕಾಲೇಜುಗಳ ಬಾಸ್ಕೆಟ್‌ಬಾಲ್ ಪಂದ್ಯಾಟ, ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

Tuesday, November 7th, 2017
alvas

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಬೆಥನಿ ಪದವಿಪೂರ್ವ ಕಾಲೇಜು ನೆಲ್ಯಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನೆಲ್ಯಾಡಿಯಲ್ಲಿ ಬಡೆದ ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಬಾಕಿಯರ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಆಳ್ವಾಸ್ ಬಾಲಕಿಯರ ತಂಡವು ಸೈಂಟ್ ಅಲೋಶಿಯಸ್ ಪ.ಪೂ. ಕಾಲೇಜು ತಂಡವನ್ನು ೨೮-೫ ಅಂಕಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ರಾಜ್ಯ ಮಟ್ಟದ ಪಂದ್ಯಾಟವು ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ.

ಆಳ್ವಾಸ್‌ನಲ್ಲಿ ಸಾಹಿತ್ಯ ಬೆರಗು, ಬೆಡಗು: ಉಪನ್ಯಾಸ

Wednesday, November 1st, 2017
alvas

ಮೂಡುಬಿದಿರೆ: ಭಾಷೆಯಿಂದ ಕೇವಲ ಸಂವಹನ ನಡೆಯುವುದಲ್ಲ. ಅದು ನಮ್ಮ ಯೋಚನಾಕ್ರಮವನ್ನು ಬದಲಾಯಿಸುತ್ತದೆ. ಸಂಬಂಧಗಳನ್ನು ಬೆಸೆಯುತ್ತದೆ. ಕಲ್ಪನಾ ಶಕ್ತಿ ಹೆಚ್ಚಿಸುವ ಸಾಹಿತ್ಯ ಆತ್ಮ ಗೌರವ, ಆತ್ಮ ವಿಶ್ವಾಸವನ್ನು ವೃದ್ಧಿಸುವಂತೆ ಮಾಡುತ್ತದೆ. ಮೌಲ್ಯಗಳನ್ನು ನಮ್ಮೊಳಗೆ ಜಾಗೃತಿಗೊಳಿಸುವ ಸಾಹಿತ್ಯ ವ್ಯಕ್ತಿತ್ವವನ್ನು ಬೆಳಗುತ್ತದೆ. ಉತ್ತಮ ಬದುಕಿಗೆ ಬೇಕಾದ ಬಹುರೂಪಿ ದಾರಿಯನ್ನು ತೋರಿಸುವ ಸಾಮರ್ಥ್ಯ ಸಾಹಿತ್ಯಕ್ಕಿದೆ ಎಂದು ವಿಮರ್ಶಕ ಡಾ.ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಂಗಳವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ‘ಸಾಹಿತ್ಯ ಬೆರಗು, ಬೆಡಗು’ […]

ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

Tuesday, October 31st, 2017
alvas

ಮೂಡುಬಿದಿರೆ: ತಲಪಾಡಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 20 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ 18  ಚಿನ್ನ, 16 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಪಡೆದು ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ 19 ಚಿನ್ನ, 16ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಪಡೆದು ಆಳ್ವಾಸ್ ಪ.ಪೂ. ಕಾಲೇಜು ಪ್ರಶಸ್ತಿಯನ್ನು ಪಡೆಯಿತು. ಬಾಲಕರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿಯನ್ನು ನವನೀತ್, ಬಾಲಕಿಯರ ವಿಭಾಗದಲ್ಲಿ ಜೋತ್ಸ್ನಾ ಮತ್ತು ಪ್ರಿಯಾ ಎಲ್.ಡಿ. ಪಡೆದರು. ಪ್ರಥಮ ಮತ್ತು ದ್ವಿತೀಯ ಸ್ಥಾನ […]

ಆಳ್ವಾಸ್‌ನಲ್ಲಿ ‘ನಿಂಗೋಲ್ ಚಕೋಬ’ ಮಣಿಪುರಿ ಹಬ್ಬ

Tuesday, October 24th, 2017
Ningal-Chakkouba

ಮೂಡುಬಿದಿರೆ: ಮಣಿಪುರದಿಂದ ಹೊರಗೆ ಓದುವ ವಿದ್ಯಾರ್ಥಿಗಳ ಬಗ್ಗೆ ಮಣಿಪುರದ ಜನರಿಗೆ ಒಂದು ರೀತಿಯ ನಕಾರಾತ್ಮಕ ನಿಲುವಿದೆ. ಇತರ ರಾಜ್ಯಗಳಲ್ಲಿ ಓದುತ್ತಿರುವ ಮಣಿಪುರಿ ಮಕ್ಕಳು ತಮ್ಮ ಸಂಸ್ಕೃತಿಯನ್ನು ಅರಿಯಲಾರರು ಎಂಬುದು ಈ ನಿಲುವಿನ ಹಿಂದಿರುವ ಕಲ್ಪನೆ. ಆದರೆ ಆಳ್ವಾಸ್‌ನಲ್ಲಿ ಆಯೋಜಿಸಿರುವ ಮಣಿಪುರಿ ಹಬ್ಬ ನಮ್ಮ ಮಣಿಪುರಿ ಸಂಸ್ಕೃತಿಯನ್ನು ಚಿತ್ರಿಸಿ ಕೊಡುವುದಲ್ಲದೆ ಅವರ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ” ಎಂದು ಮಣಿಪಾಲ ಕಾಲೇಜಿನ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಎಲ್ಸಾ ಸನಾತೊಂಬ ದೇವಿ ಹೇಳಿದರು. ಆಳ್ವಾಸ್ ಶಿಕ್ಷಣ […]

ಅಥ್ಲೆಟಿಕ್ಸ್ ಕ್ರೀಡಾಕೂಟ, ಆಳ್ವಾಸ್ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Saturday, October 21st, 2017
alvas

ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಬೆಳಗಾವಿ, ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಇವರ ವತಿಯಿಂದ ಅಕ್ಟೋಬರ್ 16 ರಿಂದ 18ರವರೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆ ಮೂಡುಬಿದಿರೆ ವಿದ್ಯಾರ್ಥಿಗಳು ಒಟ್ಟು 17 ಚಿನ್ನ, 04 ಬೆಳ್ಳಿ ಹಾಗೂ 08 ಕಂಚಿನ ಪದಕಗಳನ್ನು ಪಡೆದು ಒಟ್ಟು 29 ಪದಕವನ್ನು ತನ್ನದಾಗಿಸಿಕೊಂಡು 4 ನೂತನ ಕೂಟ ದಾಖಲೆಗಳನ್ನು ಮಾಡಿರುತ್ತಾರೆ. ಹೊಸ […]

ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ, ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಚಾಂಪಿಯನ್

Thursday, October 12th, 2017
alvas

ಮಂಗಳೂರು: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪ.ಪೂ. ಕಾಲೇಜು ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ 13ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಬೆಥನಿ ಸಂಯುಕ್ತ ಪಿ.ಯು. ಕಾಲೇಜು ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ. ಕಾಲೇಜು, ಉಜಿರೆ ಪಡೆದುಕೊಂಡಿದೆ. ನೂಜಿ ಬಾಳ್ತಿಲದ ಬೆಥನಿ ಸಂಯುಕ್ತ ಪಿ.ಯು. ಕಾಲೇಜಿನಲ್ಲಿ ಈ ಕ್ರೀಡಾಕೂಟ ನಡೆದಿತ್ತು. ಬಾಲಕರ ವಿಭಾಗದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳಾದ ಶಶಿಧರ್ ಬಿ.ಎಲ್( […]