ಮೂಡುಬಿದಿರೆ: ಭಾಷೆಯಿಂದ ಕೇವಲ ಸಂವಹನ ನಡೆಯುವುದಲ್ಲ. ಅದು ನಮ್ಮ ಯೋಚನಾಕ್ರಮವನ್ನು ಬದಲಾಯಿಸುತ್ತದೆ. ಸಂಬಂಧಗಳನ್ನು ಬೆಸೆಯುತ್ತದೆ. ಕಲ್ಪನಾ ಶಕ್ತಿ ಹೆಚ್ಚಿಸುವ ಸಾಹಿತ್ಯ ಆತ್ಮ ಗೌರವ, ಆತ್ಮ ವಿಶ್ವಾಸವನ್ನು ವೃದ್ಧಿಸುವಂತೆ ಮಾಡುತ್ತದೆ. ಮೌಲ್ಯಗಳನ್ನು ನಮ್ಮೊಳಗೆ ಜಾಗೃತಿಗೊಳಿಸುವ ಸಾಹಿತ್ಯ ವ್ಯಕ್ತಿತ್ವವನ್ನು ಬೆಳಗುತ್ತದೆ. ಉತ್ತಮ ಬದುಕಿಗೆ ಬೇಕಾದ ಬಹುರೂಪಿ ದಾರಿಯನ್ನು ತೋರಿಸುವ ಸಾಮರ್ಥ್ಯ ಸಾಹಿತ್ಯಕ್ಕಿದೆ ಎಂದು ವಿಮರ್ಶಕ ಡಾ.ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಂಗಳವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ‘ಸಾಹಿತ್ಯ ಬೆರಗು, ಬೆಡಗು’ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಸಾದ್ ಸ್ವಾಗತಿಸಿದರು. ರಮೇಶ್ ಎಂ. ಕಾರ್ಯಕ್ರಮ ನಿರೂಪಿಸಿದರು. ಆಶಾ ವಂದಿಸಿದರು.
Click this button or press Ctrl+G to toggle between Kannada and English