ಮಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಅರವಿಂದ ಪ.ಪೂ. ಕಾಲೇಜು ಕುಣಿಗಲ್ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 8 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಆಳ್ವಾಸ್ 5 ವಿಭಾಗದಲ್ಲಿ ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕ ಮತ್ತು 2 ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪದಕ ವಿಜೇತರು: ಮಮತಾ ಕೇಳೋಜಿ( 44 ಕೆ.ಜಿ ವಿಭಾಗ) ಪ್ರಥಮ, ಅಂಕಿತ ಹೆಚ್. (59 ಕೆ.ಜಿ ವಿಭಾಗ) ಪ್ರಥಮ, ತುಷಾರ ಎ.(63 ಕೆ.ಜಿ ವಿಭಾಗ) ಪ್ರಥಮ ,ಡೆಲ್ಫಿ ವರ್ಗೀಸ್( 67 ಕೆ.ಜಿ ವಿಭಾಗ) ಪ್ರಥಮ, ರೂಪಾ ಅರಳಿಕಟ್ಟಿ(72 ಕೆ.ಜಿ) ಪ್ರಥಮ, ಅಸ್ನಾ ಶರೀನ್( 55 ಕೆ.ಜಿ) ದ್ವಿತೀಯ, ಸತ್ಯಭಾಮಾದೇವಿ (48 ಕೆ.ಜಿ) ತೃತೀಯ, ಭಾರತಿ(51 ಕೆ.ಜಿ) ತೃತೀಯ.
Click this button or press Ctrl+G to toggle between Kannada and English