ಮಂಗಳೂರು : ಎ.ಜೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚಿಸುತ್ತದ್ದ ಬೃಹತ್ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಮಂಗಳೂರು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ .
ಮಂಗಳೂರಿನ ಪ್ರತಿಷ್ಠಿತ ಎ.ಜೆ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ಆರೋಪಿಗಳು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ .
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಅಜಯ್ ನಾಯಕ್ ಮುಖರ್ಜಿ (41), ಉತ್ತರ ಪ್ರದೇಶ ಮೂಲದ ಸೌರಭ್ ಗುಪ್ತಾ (32), ಬಿಹಾರ ಮೂಲದ ಅಮಿತ್ ರಂಜನ್(25), ಕಲ್ಕತ್ತಾ ಮೂಲದ ಸ್ವಪನ್ ಬಿಸ್ವಾಸ್(54), ಹೈದರಾಬಾದ್ ಮೂಲದ ರಾಜೀವ್ ಕುಮಾರ್(30), ಕಲ್ಕತ್ತಾ ಮೂಲದ ಅನಿಲ್ ತುಲ್ಕಿರಾಮ್ (62), ಜಾರ್ಖಂಡ್ ಮೂಲದ ಅನೂಪ್ ಸಿಂಗ್ (35), ಮನೀಷ ಕುಮಾರ್ ಷಾ(30), ಧೀರಜ್ ಶರ್ಮಾ(30), ಹಾಗೂ ಸಂಜಯ್ ಕುಮಾರ್ ಮಾಥುರ್ (26) ಎಂಬವರನ್ನು ಬಂಧಿಸಲಾಗಿದೆ .
ಬಂಧಿತ ಆರೋಪಿಗಳು ದೆಹಲಿ ಮೂಲದ ಕಮಲ್ ಸಿಂಗ್ ರಾಜ್ ಪುರೋಹಿತ್ ಹಾಗೂ ರಾಜಸ್ಥಾನ ಮೂಲದ ಮಹೇಂದರ್ ಎಂಬುವರ ಮಕ್ಕಳಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ 5.40 ಲಕ್ಷ ರೂಪಾಯಿ ಮೌಲ್ಯದ 2 ಡಿಮಾಂಡ್ ಡ್ರಾಫ್ಟ್ ಪಡೆದು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಗಳು ಎ.ಜೆ ಮೆಡಿಕಲ್ ಕಾಲೇಜಿನ ಅಧಿಕಾರಿಗಳೆಂದು ನಂಬಿಸಲು ನಕಲಿ ಗುರುತು ಚೀಟಿ ಮುದ್ರಿಸಿದ್ದರು. ತಾವು ಮೆಡಿಕಲ್ ಕಾಲೇಜಿನ ಪದಾಧಿಕಾರಿಗಳೆಂದು ನಂಬಿಸಿ ವಿದ್ಯಾರ್ಥಿಗಳಿಗೆ ವಂಚಿಸಿದ್ದಾರೆ ಎಂದು ದೂರಲಾಗಿದೆ .
ಈ ಕುರಿತು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು .
ಈ ಕುರಿತು ತನಿಖೆ ನಡೆಸಿದ ಕದ್ರಿ ಪೊಲೀಸರು ಆರೋಪಿಗಳನ್ನು ಮಂಗಳೂರು ಹೊರವಲಯದ ಸುರತ್ಕಲ್ ನ ಲಾಡ್ಜ್ ಒಂದರಿಂದ ಬಂಧಿಸಿದ್ದಾರೆ. ಬಂಧಿತರಿಂದ 5.40 ಲಕ್ಷ ರೂಪಾಯಿ ಮೌಲ್ಯದ 2 ಡಿಡಿ , 20ಮೊಬೈಲ್ ಫೋನ್ , 2 ಲ್ಯಾಪ್ ಟಾಪ್ , 1 ಐಪಾಡ್ , 1ಪ್ರಿಂಟರ್, 10 ಲಕ್ಷ ರೂಪಾಯಿ ನಗದು, 1 ಇನ್ನೋವಾ ಕಾರು , 1 ಶೆವರ್ಲೆ ಕಾರು ವಶಪಡಿಸಿಕೊಳ್ಳಲಾಗಿದೆ .
ಆರೋಪಗಳಿಂದ ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 30.98 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ ಅದಲ್ಲದೆ ಆರೋಪಿಗಳಿಂದ ಮೆಡಿಕಲ್ ಕಾಲೇಜಿನ ನಕಲಿ ಐಡಿ ಕಾರ್ಡ್ , ಎ.ಜೆ ಮೆಡಿಕಲ್ ಸೈನ್ಸ್ ಮತ್ತು ದೇರಳಕಟ್ಟೆ ಕೆ .ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೊಹರನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ .
Click this button or press Ctrl+G to toggle between Kannada and English