ಮಂಗಳೂರು : ಇಸ್ಲಾಂ ಸಹಪಾಠಿಗಳ ಮಾತಿಗೆ ಮರುಳಾಗಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಗೊಂಡು ಮಾತೃ ಧರ್ಮವನ್ನೇ ತ್ಯಜಿಸಿದ್ದ ಕಾಸರಗೋಡು ಜಿಲ್ಲೆಯ ಉದುಮದ ಯುವತಿ ಆದಿರಾ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾಳೆ.
ಕಳೆದ ಜೂ. 10ರಂದು ಮನೆಯಿಂದ ನಾಪತ್ತೆಯಾಗಿದ್ದ ಆದಿರಾ, ಹೆತ್ತವರಿಗೆ ಪತ್ರ ಬರೆದಿಟ್ಟಿದ್ದಳು. ತಾನು ಇಸ್ಲಾಂ ಧರ್ಮದ ಬಗ್ಗೆ ಆಕರ್ಷಿತಳಾಗಿದ್ದೇನೆ. ಆ ಧರ್ಮದ ಬಗ್ಗೆ ಇನ್ನಷ್ಟು ಕಲಿಯುವ ಉದ್ದೇಶದಿಂದ ಮನೆ ಬಿಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಳು.
ಇದರಿಂದ ಆತಂಕಗೊಂಡ ಆಕೆಯ ಹೆತ್ತವರು ಪೋಷಕರು ಜೂ. 27ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು. ಅಲ್ಲದೆ ಪೋಷಕರು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಬಳಿಕ ಪೊಲೀಸರು ಆದಿರಾಳನ್ನು ಕಣ್ಣೂರು ಬಸ್ ನಿಲ್ದಾಣದ ಬಳಿ ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಅಗ ಆಕೆ ತನ್ನ ಸ್ನೇಹಿತೆಯ ಮನೆಯಲ್ಲಿದ್ದಾಳೆಂದು ತಿಳಿದುಬಂದಿತ್ತು.
ನ್ಯಾಯಾಲಯವು ಆದಿರಾಳನ್ನು ಆಕೆಯ ಪೋಷಕರೊಂದಿಗೆ ಮನೆಗೆ ಕೊಂಡೊಯ್ಯಲು ಅನುಮತಿಯನ್ನೂ ನೀಡಿತ್ತು. ಆದರೆ, ಆಕೆ ಹೆತ್ತವರ ಜೊತೆ ಹೋಗಲು ನಿರಾಕರಿಸಿದ್ದಳು. ಆದರೆ, ಇದೀಗ ಆಕೆಯೇ ತನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಸೇರಿಸುವ ಪ್ರಯತ್ನ ನಡೆದಿತ್ತು ಎಂದು ಮಾಧ್ಯಮದವರ ಮುಂದೆ ಎರ್ನಾಕುಲಂ ನಲ್ಲಿ ಹೇಳಿಕೊಂಡಿದ್ದಾಳೆ.
Click this button or press Ctrl+G to toggle between Kannada and English