ಸುರತ್ಕಲ್ : ಹಿಂದೂ ಎಂದು ನಂಬಿಸಿ ಮುಸ್ಲಿಂ ಯುವಕನ ಲವ್ ಜಿಹಾದ್

Tuesday, October 26th, 2021
ibrahim

ಮಂಗಳೂರು :  ಬೈಕಂಪಾಡಿಯ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಧರ್ಮದ ಯುವಕ ತಾನು ಹಿಂದೂ ಯುವಕ ಎಂದು ನಂಬಿಸಿ ಯುವತಿಯೋರ್ವಳಿಗೆ ಲವ್ ಜಿಹಾದ್ ಹೆಸರಿನಲ್ಲಿ ಮೋಸ ಮಾಡಿದ್ದಾನೆ ಎಂದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸಿ ಇದೀಗ ಇಬ್ಬರ ಜೊತೆಗಿನ ಫೋಟೋಗಳನ್ನು ತೋರಿಸಿ ಮತಾಂತರವಾಗದಿದ್ದಲ್ಲಿ ಅತ್ಯಾಚಾರವೆಸಗುವುದಾಗಿ ಬೆದರಿಕೆಯೊಡ್ದಿದ್ದು ಯುವತಿಯ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿ ಕಿರುಕುಳ ನೀಡುತ್ತಿರುತ್ತಿರುವುದಾಗಿ ಯುವತಿ ದೂರಿದ್ದಾಳೆ. ಇಬ್ರಾಹಿಮ್ ಎಂಬ ಮುಸ್ಲಿಂ ಯುವಕ ತನ್ನ ಧರ್ಮವನ್ನು ಮರೆಸಿ […]

ಮಸೀದಿ ಹಾಗೂ ದರ್ಗಾಗಳ ಆಡಳಿತ ಸಮಿತಿಗಳಿಗೆ ಶಬ್ದ ಮಾಲಿನ್ಯ ನಿಯಂತ್ರಣ ಸಂಬಂಧ ಅರಿವು ಮೂಡಿಸಲು ತೀರ್ಮಾನ

Thursday, March 18th, 2021
Azan

ಮಂಗಳೂರು  :  ಈ ಹಿಂದೆ ಅಲಹಾಬಾದ್ ಹೈಕೋರ್ಟ್ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಯಾವುದೇ ಧ್ವನಿವರ್ಧಕಗಳನ್ನು ಬಳಸದೆ ಅಜಾನ್ ಧಾರ್ಮಿಕ ಪ್ರಾರ್ಥನೆ ಕರೆಯನ್ನು ಮಸೀದಿಗಳ ಮಿನಾರ್‌ಗಳಿಂದ ಮಾನವ ಧ್ವನಿಯಿಂದ ಮಾತ್ರ ಪಠಿಸಬಹುದು ಎಂದು ಹೇಳಿತ್ತು. ಅಜಾನ್ ಇಸ್ಲಾಂ ಧರ್ಮದ ಅತ್ಯಗತ್ಯ ಮತ್ತು ಅವಿಭಾಜ್ಯ ಅಂಗವಾಗಿರಬಹುದು ಆದರೆ ಧ್ವನಿವರ್ಧಕಗಳು ಅಥವಾ ಇತರ ಧ್ವನಿ ವರ್ಧಕ ಸಾಧನಗಳ ಮೂಲಕ ಅದರ ಪಠಣವು ಆರ್ಟಿಕಲ್ 25 ರ ಅಡಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕನ್ನು ರಕ್ಷಿಸುವ ಧರ್ಮದ ಅವಿಭಾಜ್ಯ ಅಂಗವೆಂದು ಹೇಳಲಾಗುವುದಿಲ್ಲ. ಸಾರ್ವಜನಿಕ ಆದೇಶ, ನೈತಿಕತೆ […]

ಪ್ರವಾದಿ ಬಗ್ಗೆ ಅವಹೇಳನ ಆರೋಪ : ನಾಪೋಕ್ಲುವಿನಲ್ಲಿ ದೂರು ದಾಖಲು

Tuesday, February 18th, 2020
haris

ಮಡಿಕೇರಿ : ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಅತುಲ್ ಕುಮಾರ್ (ಮಧುಗಿರಿ ಮೋದಿ) ಎಂಬುವವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾರಿಸ್ ನಾಪೋಕ್ಲು ಅವರು ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅತುಲ್ ಕುಮಾರ್ ಎಂಬುವವರು ಮುಸಲ್ಮಾನರ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾರಿಸ್ ದೂರಿನಲ್ಲಿ ತಿಳಿಸಿದ್ದಾರೆ.  

ಸಹಪಾಠಿಗಳ ಮಾತಿಗೆ ಮರುಳಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡ ಆದಿರಾ ಮತ್ತೆ ಹಿಂದೂ ಧರ್ಮಕ್ಕೆ

Friday, September 22nd, 2017
Adhira

ಮಂಗಳೂರು : ಇಸ್ಲಾಂ ಸಹಪಾಠಿಗಳ ಮಾತಿಗೆ ಮರುಳಾಗಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಗೊಂಡು ಮಾತೃ ಧರ್ಮವನ್ನೇ ತ್ಯಜಿಸಿದ್ದ ಕಾಸರಗೋಡು ಜಿಲ್ಲೆಯ ಉದುಮದ ಯುವತಿ ಆದಿರಾ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾಳೆ. ಕಳೆದ ಜೂ. 10ರಂದು ಮನೆಯಿಂದ ನಾಪತ್ತೆಯಾಗಿದ್ದ ಆದಿರಾ, ಹೆತ್ತವರಿಗೆ ಪತ್ರ ಬರೆದಿಟ್ಟಿದ್ದಳು. ತಾನು ಇಸ್ಲಾಂ ಧರ್ಮದ ಬಗ್ಗೆ ಆಕರ್ಷಿತಳಾಗಿದ್ದೇನೆ. ಆ ಧರ್ಮದ ಬಗ್ಗೆ ಇನ್ನಷ್ಟು ಕಲಿಯುವ ಉದ್ದೇಶದಿಂದ ಮನೆ ಬಿಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಳು. ಇದರಿಂದ ಆತಂಕಗೊಂಡ ಆಕೆಯ ಹೆತ್ತವರು ಪೋಷಕರು ಜೂ. […]

ಶರಿಯತ್ ಕಾನೂನಿಗೆ ಅನ್ಯಾಯವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಸೂದ್ ಎಚ್ಚರಿಕೆ

Friday, October 28th, 2016
musilm-organisations

ಮಂಗಳೂರು: ಇಸ್ಲಾಂ ಧರ್ಮದ ಶರಿಯತ್ ಕಾನೂನಿನ ಬಗ್ಗೆ ಹಸ್ತಕ್ಷೇಪ ಮಾಡಿ ತ್ರಿವಳಿ ತಲಾಕ್‍ನ್ನು ವಿರೋಧಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್‌ ಸಲ್ಲಿಸಿರುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ಆಕ್ಷೇಪ ವ್ಯಕ್ತಪಡಿಸಿದರು. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರಿಯತ್ ಕಾನೂನಿಗೆ ಅನ್ಯಾಯವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು, ಸರ್ಕಾರ ಇದಕ್ಕೆಲ್ಲ ಅವಕಾಶ ಮಾಡಿಕೊಡಬಾರದು ಎಂದರು. ನಮ್ಮ ಸಂವಿಧಾನ ಧಾರ್ಮಿಕ […]