ಪಾಂಡೇಶ್ವರ: ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ

4:24 PM, Tuesday, October 3rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

post cardಮಂಗಳೂರು : ಶಾಲಾ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರವು ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ‘ಧಾಯಿ ಆಖಾರ್‌-ಪ್ರೀತಿಯ ಬಾಪೂಜಿ ನೀವು ನನಗೆ ಸ್ಫೂರ್ತಿ’ ಪತ್ರ ಬರೆಯುವ ಸ್ಪರ್ಧೆಯ ನೆನಪಿಗಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ನಗರದ ಪಾಂಡೇಶ್ವರ ಅಂಚೆ ಕಚೇರಿಯಲ್ಲಿ ಸೋಮವಾರ ಜರಗಿತು.

ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಂ. ಜಗದೀಶ್‌ ಪೈ, ಅಂಚೆ ಸಂಬಂಧಿ ನಡೆಸುವ ಪ್ರತಿ ಸ್ಪರ್ಧೆಯಲ್ಲೂ ಮಂಗಳೂರಿನ ವಿದ್ಯಾರ್ಥಿಗಳು ಸ್ಥಾನ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಮುಖ್ಯ ಅತಿಥಿ, ವೈದ್ಯ ಡಾ| ಲಕ್ಷ್ಮಣ್‌ ಪ್ರಭು ಮಾತನಾಡಿ, ಮಹಾತ್ಮಾ ಗಾಂಧೀಜಿಯವರಿಗೂ, ಅಂಚೆ ಚೀಟಿಗಳಿಗೂ ಅವಿನಾಭಾವ ಸಂಬಂಧವಿದೆ. ಗಾಂಧೀಜಿಯವರು ಅಂಚೆ ಚೀಟಿ ಅಂಟಿಸುವ ಕೆಲಸವನ್ನು ಪ್ರಾರಂಭಿಕ ದಿನಗಳಲ್ಲಿ ಮಾಡಿದ್ದರು ಎಂದು ನೆನಪಿಸಿಕೊಂಡರು.

ಜಿಲ್ಲಾ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಕಾರರ ಸಂಘದ ಅಧ್ಯಕ್ಷ ಪ್ರಭಾಕರ ಕಾಮತ್‌, ಜತೆ ಕಾರ್ಯದರ್ಶಿ ಮನ್ಸೂರ್‌ ಹುಸೈನ್‌ ಅತಿಥಿಗಳಾಗಿದ್ದರು. ಮಂಗಳೂರು ಫಿಲಾಟಲಿ ಬ್ಯೂರೋ ಇನ್‌ಚಾರ್ಜ್‌ ದೀಪಕ್‌ ಆಲ್ವಾರಿಸ್‌ ಸ್ವಾಗತಿಸಿ,ಸಹಾಯಕ ಅಧೀಕ್ಷಕ ಲಕ್ಷ್ಮೀನಾರಾಯಣ ವಂದಿಸಿದರು. ದಿನೇಶ್‌ ನಿರೂಪಿಸಿದರು.

ಪತ್ರ ವ್ಯವಹಾರದ ಮೂಲಕ ಸಂಬಂಧಗಳನ್ನು ಬೆಸೆಯುವ ಕಾಲ ಘಟ್ಟವೊಂದಿತ್ತು. ಈಗ ಫೇಸ್ಬುಕ್ , ವಾಟ್ಸಪ್‌ ಯುಗ ಪತ್ರ ವ್ಯವಹಾರವನ್ನೇ ಮರೆಸಿದೆ. ಸಂಬಂಧ ಬೆಸೆಯುವ ಪತ್ರ ವ್ಯವಹಾರಕ್ಕೆ ಮತ್ತೆ ಜೀವಂತಿಕೆ ಕಲ್ಪಿಸಿಕೊಡಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಕ್ಕಳಿಗಾಗಿ ಅಖಿಲ ಭಾರತ ಮಟ್ಟದಲ್ಲಿ ಪತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಮಂಗಳೂರು ವ್ಯಾಪ್ತಿಯ ಸುಮಾರು 1000 ಮಕ್ಕಳಿಂದ ಪತ್ರಗಳು ಬಂದಿದ್ದು, ರಾಜ್ಯ ಮಟ್ಟದಲ್ಲಿ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ದೀಪಕ್‌ ಆಲ್ವಾರಿಸ್‌ ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English