ಗೌರಿ ಹತ್ಯೆ: ವಿಶೇಷ ತನಿಖಾ ತಂಡ 3 ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ

1:38 PM, Saturday, October 7th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

gauriಮಂಗಳೂರು: ಗೌರಿ ಲಂಕೇಶ್‌ ಕೊಲೆ ಪ್ರಕರಣ ಕುರಿ ತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಎಸ್‌ಐಟಿ ಸನಾತನ ಸಂಸ್ಥೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಜಾಡು ಹಿಡಿದು ಪೊಲೀಸರು ಮೂರು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೂ ಬಂದು ಹೋಗಿದ್ದಾರೆ. ಹೀಗಾಗಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿ ಸಿದ್ದ ಗೌರಿ ಲಂಕೇಶ್‌ ಹತ್ಯೆ ಪ್ರಕ ರಣದ ಹಿಂದೆ ದಕ್ಷಿಣ ಕನ್ನಡದ ನಂಟು ಇದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಪೊಲೀಸರು ಜಿಲ್ಲೆಯ ಪುತ್ತೂರು ತಾಲೂಕು ಕಡಬ ಪೊಲೀಸ್‌ ಠಾಣೆಗೆ ಇತ್ತೀಚೆಗೆ 3 ಬಾರಿ ಬಂದು ಮಾಹಿತಿ ಕಲೆ ಹಾಕಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಪ್ರಸ್ತುತ ಭೂಗತ ರಾಗಿರುವ ಮಾಲೆಗಾಂವ್‌ ಸ್ಫೋಟ ಪ್ರಕರಣದ ಶಂಕಿತ ಐವರು ಆರೋಪಿ ಗಳ ಪಟ್ಟಿಯಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಕಡಬ ಸಮೀಪದ ನೂಜಿ ಬಾಳ್ತಿಲದ ಜಯ ಪ್ರಕಾಶ್‌ ಯಾನೆ ಅಣ್ಣ ಎಂಬ ವ್ಯಕ್ತಿಯ ಹೆಸರು ಇತ್ತು. ಆಗ ಕೂಡ ಪೊಲೀಸರು ಕಡಬಕ್ಕೆ ಬಂದು ಈತನ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಆದರೆ ಆತ ಎಲ್ಲಿದ್ದಾನೆಂದು ತಿಳಿದಿಲ್ಲ. ಈಗ ಗೌರಿ ಹತ್ಯೆ ಪ್ರಕರಣದಲ್ಲಿಯೂ ಜಯ ಪ್ರಕಾಶ್‌ ಕೈವಾಡ ಇರುವ ಬಗ್ಗೆ ಪೊಲೀಸರಿಗೆ ಅನುಮಾನ ಇದ್ದು, ಈ ಕಾರಣಕ್ಕೆ ಎಸ್‌ಐಟಿ ಅಧಿಕಾರಿ ಗಳು ಬರೋಬ್ಬರಿ ಮೂರು ಬಾರಿ ಕಡಬ ಪೊಲೀಸ್‌ ಠಾಣೆಗೆ ಬಂದು ಹೋಗಿದ್ದಾರೆ. ಆ ಮೂಲಕ ನಾಪತ್ತೆಯಾಗಿರುವ ಜಯ ಪ್ರಕಾಶ್‌ ವ್ಯಕ್ತಿಯ ಬಗ್ಗೆ ಸುಳಿವು ಪಡೆಯಲು ಪ್ರಯತ್ನಿಸಿದ್ದಾರೆ.

ನಾಪತ್ತೆಯಾಗಿರುವ ಕೋಲ್ಹಾಪುರದ ಪ್ರವೀಣ್‌ ಲಿಮ್ಕರ್‌ (34), ದಕ್ಷಿಣ ಕನ್ನಡ ಜಿಲ್ಲೆ ಕಡಬದ ಜಯ ಪ್ರಕಾಶ್‌ ಯಾನೆ ಅಣ್ಣ (45), ಪೂನಾದ ಸಾರಂಗ್‌ ಆಕೋಲ್ಕರ್‌ (38), ಸಾಂಗ್ಲಿಯ ರುದ್ರಾ ಪಾಟಿಲ್‌ (37), ಸತಾರಾದ ವಿನಯ್‌ ಪವಾರ್‌ (32) ಅವರು 2009ರಲ್ಲಿ ಗೋವಾದ ಮಾಲೆಗಾಂವ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದ ಶಂಕಿತ ಆರೋಪಿಗಳಾಗಿದ್ದು, ಈ ಐವರ ತಂಡವೇ ಗೌರಿ ಹತ್ಯೆಯಲ್ಲೂ ಭಾಗಿಯಾಗಿರ ಬೇಕೆಂಬ ಶಂಕೆಯನ್ನು ಎಸ್‌ಐಟಿ ವ್ಯಕ್ತಪಡಿಸುತ್ತಿದೆ.

ಸನಾತನ ಸಂಸ್ಥೆಯ ಕಾರ್ಯಕರ್ತ ರಾಗಿದ್ದ ಲಿಮ್ಕರ್‌, ಅಣ್ಣ, ಅಕೋಲ್ಕರ್‌ ಮತ್ತು ಪಾಟೀಲ್‌ ಅವರು 2009ರ ಅ. 9ರಂದು ನಡೆದ ಮಾಲೆ ಗಾಂವ್‌ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಶಂಕಿಸ ಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಈ ನಾಲ್ವರು ಶಂಕಿತರನ್ನು “ಮೋಸ್ಟ್‌ ವಾಂಟೆಡ್‌’ ವ್ಯಕ್ತಿಗಳೆಂದು ಗುರುತಿಸಿ ಅವರ ಪತ್ತೆಗಾಗಿ ರೆಡ್‌ ಕಾರ್ನರ್‌ ನೋಟಿಸು ಜಾರಿ ಮಾಡಿತ್ತು.

ಜಯಪ್ರಕಾಶ್‌ ಯಾನೆ ಅಣ್ಣ ಈ ಹಿಂದೆ ಸನಾತನ ಸಂಸ್ಥೆಯ ವಾಹನ ಚಾಲಕನಾಗಿ ದ.ಕ.ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ಎಸ್‌ಐಟಿ ತಂಡ ಕಡಬ ಠಾಣೆಯಲ್ಲಿ ಮಾಹಿತಿ ಕಲೆ ಹಾಕಿದ ಸಂದರ್ಭ ಜಯ ಪ್ರಕಾಶ್‌ ಮನೆಯ ಸದಸ್ಯರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೆಲವು ವರ್ಷ ಗಳಿಂದ ಜಯ ಪ್ರಕಾಶ್‌ ಸಂಪರ್ಕ ಇಲ್ಲ ಎಂದು ಮನೆ ಮಂದಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲೆಗಾಂವ್‌ ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಪೊಲೀಸರು ಕಡಬಕ್ಕೆ ಬಂದು ವಿಚಾರಣೆ ನಡೆಸಿದ್ದರು. ಜಯಪ್ರಕಾಶ್‌ ನಾಪತ್ತೆ ಯಾಗಿದ್ದ ಕಾರಣ ಒಂದು ಪೋಸ್ಟರ್‌ನಲ್ಲಿ ಆತನ ಫೋಟೋ ಮತ್ತು ವಿವರ ಗಳನ್ನು ಬರೆದು ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಅಂಟಿಸಿ ಹೋಗಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English