ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರ

2:04 PM, Monday, October 9th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

CAMBRIDGE ENGLISH CENTREಮೂಡಬಿದಿರೆ: ಯು.ಕೆ.ಯ ಕೇಂಬ್ರಿಡ್ಜ್ ಇಂಗ್ಲೀಷ್ ಅಸೆಸ್‍ಮೆಂಟ್ ಸಂಸ್ಥೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರವನ್ನು ಪ್ರಾರಂಬಿಸಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯು.ಕೆ.ಯ ಕೇಂಬ್ರಿಡ್ಜ್ ಇಂಗ್ಲೀಷ್ ಅಸೆಸ್‍ಮೆಂಟ್ ಸಂಸ್ಥೆಯ ಅತ್ಯುತ್ತಮ 50 ತರಬೇತಿ ಕೇಂದ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರತಿಷ್ಠಾನದ 162 ವಿದ್ಯಾರ್ಥಿಗಳು ಕೇಂಬ್ರಿಡ್ಜ್ ಇಂಗ್ಲೀಷ್ ತರಬೇತಿಯ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿತು.

ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ಕಲಿಕಾ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಇಂಜಿನಿರಿಂಗ್, ಪದವಿ ಹಾಗೂ ಎಮ್.ಬಿ.ಎ ವಿದ್ಯಾರ್ಥಿಗಳಿಗಾಗಿ ಬ್ಯುಸಿನಸ್ ಇಂಗ್ಲಿಷ್ ಸರ್ಟಿಫಿಕೇಟ್ ಪೆÇ್ರೀಗ್ರಾಮ್‍ಗಳ ಮೂಲಕ ಉತ್ತಮ ತರಬೇತಿ ನೀಡುತ್ತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವ್ಯಾವಹಾರಿಕ ಆಂಗ್ಲ ಭಾಷಾ ಕಲಿಕೆಯ ತರಬೇತಿ ನೀಡುತ್ತಿರುವ ಅಧಿಕೃತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಕೇಂಬ್ರಿಡ್ಜ್ ಇಂಗ್ಲೀಷ್ ಎಕ್ಸಾಮ್ ಸೆಂಟರ್ ಅನ್ನಯ ಉದ್ಘಾಟಿಸಿ, ಮಾತನಾಡಿದ ಕೇಂಬ್ರಿಡ್ಜ್ ಇಂಗ್ಲೀಷ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾದ ಸ್ಥಳೀಯ ನಿರ್ದೇಶಕ ಟಿ.ಕೆ. ಅರುಣಾಚಲಂ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇಂಬ್ರಿಡ್ಜ್ ಇಂಗ್ಲೀಷ್ ಎಕ್ಸಾಮ್ ಸೆಂಟರ್ ಕರಾವಳಿ ಭಾಗದ ಪ್ರಥಮ ಸಂಸ್ಥೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳ ಇಂಗ್ಲೀಷ್ ಕೌಶಲ ವೃದ್ಧಿಸುವುದರೊಂದಿಗೆ, ಅಂತಾರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ಇಂಗ್ಲೀಷ್ ಭಾಷೆ ಕಲಿತಂತೆ ಪಾಶ್ಚತ್ಯ ಸಂಸ್ಕøತಿ ಅನುಸರಿಸಬೇಕೆಂದೇನಿಲ್ಲ. ಬದಲಾಗಿ ಆಂಗ್ಲ ಭಾಷೆಯ ಪ್ರವೃತ್ತಿ ಬೆಳೆದಂತೆ, ಅದು ನಿರಂತರ ಕೌಶಲ್ಯವಾಗಿ ಮಾರ್ಪಾಡಾಗುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಏರ್-ವೈಸ್ ಮಾರ್ಷಲ್, ಆಳ್ವಾಸ್ ಎಂಬಿಎ ಕಾಲೇಜಿನ ವಿಸಿಟಿಂಗ ಫ್ಯಾಕಲ್ಟಿ ಕೆ. ರಮೇಶ ಕಾರ್ಣಿಕ್ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಎಕ್ಸಾಮ್ ಸೆಂಟರ್ ಪ್ರಾರಂಬಿಸುವುದರೊಂದಿಗೆ, ಪ್ರಪಂಚದ ಹಳೆಯ ವಿಶ್ವ ವಿದ್ಯಾಲಯದೊಂದಿಗೆ ಸಂಬಂಧ ಕಲ್ಪಿಸಿದ ಅವಕಾಶ ಸಿಕ್ಕಿದಂತೆ ಎಂದರು. ಈ ಪರೀಕ್ಷೆಗಳು ಉನ್ನತ ಶಿಕ್ಷಣ, ಉತ್ತಮ ಉದ್ಯೋಗ ಅವಕಾಶÀ ಪಡೆಯಲು ಸಹಕಾರಿಯಾಗಿದೆ.
ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮುಖ್ಯ ಅಕೌಂಟ್ ಮ್ಯಾನೇಜರ್ ಕೆವಿನ್ ,ಆಳ್ವಾಸ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಸಂತ ಕುಮಾರ್ ನಿಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರುತಿ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English