ಮೇಯರ್ ಕವಿತಾ ಸನಿಲ್: ನಗರದ ಅನಧಿಕೃತ ಫ್ಲಾಟ್ ಗಳ ವಿರುದ್ಧ ಸಮರ

11:24 AM, Tuesday, October 10th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

mayorಮಂಗಳೂರು: ಪಾಲಿಕೆಯಲ್ಲಿ ಡೋರ್ ನಂಬರ್ ಆಗದೆ ಅಕ್ರಮವಾಗಿ ವಾಸವಿರುವ ಫ್ಲ್ಯಾಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಕವಿತಾ ಸನಿಲ್ ಮುಂದಾಗಿದ್ದಾರೆ.  ಮಂಗಳೂರು ಮೇಯರ್ ಕವಿತಾ ಸನಿಲ್ ಏಕಾಏಕಿ ನಗರದ ಹೊರವಲಯದ ಮೇರಿಹಿಲ್ ನ ಪಿಂಟೋಸ್ ಗಾರ್ಡನ್ ಎಂಬಲ್ಲಿರುವ ವೆಲಂಕಣಿ ಎಬೋರ್ಡ್ ಹೆಸರಿನ ಫ್ಲಾಟ್ ಗಳ ಮೇಲೆ ದಾಳಿ ನಡೆಸಿದರು.ಮಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಈಗ ನಗರದ ಅನಧಿಕೃತ ಫ್ಲಾಟ್ ಗಳ ವಿರುದ್ಧ ಸಮರ ಸಾರಿದ್ದಾರೆ.

ವೆಲಂಕಣಿ ಎಬೋರ್ಡ್ ಪ್ಲಾಟ್ ನಲ್ಲಿ ಒಟ್ಟು 24 ಮನೆಗಳಿದ್ದು ಇಲ್ಲಿಯ ಯಾವ ಮನೆಗೂ ಡೋರ್ ನಂಬರ್ ಇಲ್ಲದಿರುವುದನ್ನು ಮೇಯರ್ ಪತ್ತೆ ಮಾಡಿದ್ದಾರೆ. ಅಲ್ಲದೆ ಪ್ಲಾಟ್ ಗೆ ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ಮಹಾನಗರ ಪಾಲಿಕೆ ಯ ನೀರಿನ ಸರಬರಾಜು ಆಗುತ್ತಿರುವುದು ಮೇಯರ್ ದಾಳಿಯ ವೇಳೆ ಪತ್ತೆಯಾಗಿದೆ. ಅಲ್ಲದೆ ಈ ಪ್ಲಾಟ್ ನ ಡ್ರೈನೇಜ್ ನೀರು ರಾತ್ರಿ ಹೊತ್ತು ಅಕ್ರಮವಾಗಿ ಹೊರಗೆ ಬಿಡುತ್ತಿದ್ದು ಈ ಕುರಿತು ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಮೇಯರ್ ಇಂದು ದಿಢೀರ್ ದಾಳಿ ನಡೆಸಿದ್ದಾರೆ.

mayorಮೇಯರ್ ದಾಳಿಯ ಹಿನ್ನೆಲೆಯಲ್ಲಿ ಪ್ಲಾಟ್ ಮಾಲಕ ವಿವೇಕ್ ತಲೆಮರೆಸಿಕೊಂಡಿದ್ದಾರೆ. ಫ್ಲಾಟ್ ನ ಮಾಲಿಕ ವಿವೇಕ್ ಮಹಾನಗರ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದಾರೆ ಎಂದೂ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ಲಾಟ್‌ನಲ್ಲಿ ವಾಸವಾಗಿರುವವರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಣಕೊಟ್ಟು ಪ್ಲಾಟ್ ಪಡೆದುಕೊಂಡು ಇದೀಗ ಪ್ಲಾಟ್ ಮಾಲಕನ ಅಕ್ರಮದಿಂದ ಕಂಗಾಲಾಗಿದ್ದಾರೆ.ಆದರೆ ಕಳೆದ 4 ವರ್ಷಗಳಿಂದ ಈ ಅಕ್ರಮ ಆಗುತ್ತಿದ್ರೂ,ಅಧಿಕಾರಿಗಳು ಮತ್ತು ಕಾರ್ಪೊರೇಟರ್ ಕಣ್ಣುಮುಚ್ಚಿಕುಳಿತಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English