ಡಾ. ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

10:56 AM, Wednesday, October 11th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

nisar ahmedಮಂಗಳೂರು: ಪದ್ಮಶ್ರೀ ಪುರಸ್ಕೃತ, ನಾಡೋಜ ಡಾ. ಕೆ.ಎಸ್.ನಿಸಾರ್ ಅಹಮದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಕಾರಂತ ಹುಟ್ಟುಹಬ್ಬದ ಪ್ರಯುಕ್ತ ಕಾರಂತ ಪ್ರಶಸ್ತಿಯನ್ನು ನಗರದ ಪುರಭವನದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಮಂಗಳೂರು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ್ ಭಟ್ ಕಾರಂತರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ವಹಿಸಿದ್ದರು. ಕಾರಂತರ ವಿಭಿನ್ನ ಮುಖಗಳ ಚಿಂತನೆ ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಯನ್ನು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ. ಬಿ.ಎ.ವಿವೇಕ ರೈ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ಕಲ್ಕೂರ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಸಾಹಿತಿ, ಮಳೆಯಾಳ ಕವಿ ರಾಘವನ್ ಬೆಳ್ಳಿಪ್ಪಾಡಿಗೆ, ಕಲ್ಕೂರ ಯುವ ಪ್ರಶಸ್ತಿಯನ್ನು ಚಿತ್ರಕಲಾವಿದೆ ಶಬರಿ ಗಾಣಿಗ ಹಾಗೂ ರಾಷ್ಟ್ರೀಯ ಮಟ್ಟದ ಯೋಗ ಸಾಧಕಿ ಸವಿತಾ ಕೆ. ಅವರಿಗೆ ಕಲ್ಕೂರ ಬಾಲ ಪ್ರತಿಭಾ ಪುರಸ್ಕಾರ, ಭರತನಾಟ್ಯ, ಯಕ್ಷಗಾನ, ಶಿಕ್ಷಣ ಕ್ಷೇತ್ರದ ಅನನ್ಯಾ ರೈ ಅವರಿಗೆ ನೀಡಲಾಯಿತು. ಕಾರ್ಡ್‌ನಲ್ಲಿ ಕಾರಂತ ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ಕಾರ್ಪೋರೇಶನ್‌ ಬ್ಯಾಂಕ್ ಮಂಗಳೂರು ಜನರಲ್ ಮೆನೇಜರ್ ಲಕ್ಷ್ಮೀನಾಥ ರೆಡ್ಡಿ ವಿತರಿಸಿದರು.

ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಸಿಂಡಿಕೇಟ್ ಬ್ಯಾಂಕ್, ವಲಯ ಕಚೇರಿ, ಮಣಿಪಾಲ ಜನರಲ್ ಮ್ಯಾನೇಜರ್ ಸತೀಶ್ ಕಾಮತ್ ವಿತರಿಸಿದರು. ಕಾರ್ಯಕ್ರಮದಲ್ಲಿ ಎ.ಜೆ. ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಎ.ಜೆ.ಶೆಟ್ಟಿ, ಬಿ.ಎಚ್.ಖಾದರ್, ಪ್ರೊ. ಎಂ.ಬಿ.ಪುರಾಣಿಕ್ ಮೊದಲಾದವರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English