ಬೆಂಗಳೂರು : ನಮ್ಮ ಮೆಟ್ರೋ ರೈಲು ವಾಣಿಜ್ಯ ಓಡಾಟ ಸೆ.15ರಿಂದ ಆರಂಭವಾಗಲಿದೆ ಎಂದು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಧಾನಿ ಮನಮೋಹನ್ ಸಿಂಗ್ ಅವರು ಮೇಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ತೋರಿಸಲಿದ್ದಾರೆ.
ಪ್ರಧಾನಿಯವರು ಸೆಪ್ಟೆಂಬರ್ ಮೊದಲ ವಾರ ಬಾಂಗ್ಲಾದೇಶ ಪ್ರವಾಸ ಹೊರಡಲಿರುವುದರಿಂದ. ಸೆ.15 ರಂದು ಬಿಎಂಆರ್ ಸಿಎಲ್ ಮೆಟ್ರೋ ರೈಲು ಉದ್ಘಾಟನೆಗೊಳ್ಳಲಿಸಲು ಅವರು ಒಪ್ಪಿಗೆ ನೀಡಿದ್ದಾರೆ ಎಂದರು.
ಬಿಎಂಆರ್ ಸಿಎಲ್ ಅಧಿಕಾರಿಗಳೋಡನೆ ಮಂಗಳವಾರ ಚರ್ಚೆ ನಡೆಸಿದ್ದೇನೆ, ರೈಲ್ವೇ ಸುರಕ್ಷತಾ ನಿಯಮಗಳಿಗೆ ತಕ್ಕಂತೆ ಮೆಟ್ರೋವನ್ನು ಅಣಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಆದರೆ, ರೈಲ್ವೇ ಮಂಡಳಿಯಿಂದ ಇನ್ನೂ ಅನುಮತಿ ಪತ್ರ ಸಿಕ್ಕಿಲ್ಲ. 7.5 ಕಿ.ಮೀ ದೂರದ ಮೊದಲ ಹಂತದಲ್ಲಿ ಭೈಯಪ್ಪನಹಳ್ಳಿಯಿಂದ ಎಂಜಿ ರಸ್ತೆವರೆಗೂ ಮೆಟ್ರೋ ರೈಲು ಸಂಚರಿಸಲಿದೆ.
Click this button or press Ctrl+G to toggle between Kannada and English