ಮಂಗಳೂರು:ಮೇಯರ್ ಕವಿತಾ ಸನಿಲ್ ನಗರದ ಸ್ಟೇಟ್ ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಮಂಗಳವಾರ ಉದ್ಘಾಟಿಸಿದರು.
ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ ತಾತ್ಕಾಲಿಕ ಮೀನು ಮಾರುಕಟ್ಟೆಯ ಮೇಲ್ಚಾವಣೆ ಕುಸಿದು ಮಳೆಗಾಲದಲ್ಲಿ ಧಾರಾಕಾರ ಮಳೆ ಮಾರುಕಟ್ಟೆಯ ಒಳಗೆ ಸುರಿಯುತ್ತಿದ್ದು, ಇದರಿಂದ ಮೀನು ಮಾರಾಟಗಾರಿಗೆ ಹಾಗೂ ಗ್ರಾಹಕರಿಗೆ ತುಂಬಾ ಸಮಸ್ಯೆಯಾಗಿತ್ತು. ನೆಲಕ್ಕೆ ಹಾಸಲಾದ ಕಲ್ಲ ಚಪ್ಪಡಿಗಳು ಅಲ್ಲಿಲ್ಲಿ ಕಿತ್ತು ಹೋಗಿ ಒಳಗಡೆ ರಾಡಿ ತುಂಬಿತ್ತು. ಈ ಕುರಿತು ಮೀನು ಮಾರಾಟಗಾರರು ಹಲವು ಬಾರಿ ಮಂಗಳೂರು ಮಹಾನಗರಪಾಲಿಕೆಗೆ ಮನವಿ ಮಾಡಿದ್ದರು. ಇದೀಗ ಮಾರುಕಟ್ಟೆಯ ಮೇಲ್ಚಾವಣೆಯನ್ನು ದುರಸ್ತಿ ಪಡಿಸಲಾಗಿದೆ. ನೆಲಕ್ಕೆ ಹಾಸಲಾದ ಕಲ್ಲು ಚಪ್ಪಡಿಗಳನ್ನು ತೆಗೆದು ಕಾಂಕ್ರೀಟ್ ಹಾಕಲಾಗಿದೆ. ಮೀನು ಮಾರುಕಟ್ಟೆಯಿಂದ ಹರಿದು ಹೋಗುವ ತ್ಯಾಜ್ಯ ನೀರಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 10 ಲಕ್ಷ ರೂ. ೆಚ್ಚದಲ್ಲಿ ದುರಸ್ತಿ ಕಾರ್ಯ ನಡೆದಿದೆ.
ಮೀನುಗಾರ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು, ಮಧ್ಯಾಹ್ನದ ಭೋಜನ ಹಾಗೂ ವಿಶ್ರಾಂತಿ ಪಡೆಯಲು ನಿರ್ಮಿಸಿದ ಕೊಠಡಿಯನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಮೀನುಗಾರರ ಮನವಿಗೆ ಸ್ಪಂದಿಸಿದ ಮೇಯರ್ ಕವಿತಾ ಸನಿಲ್ ಅವರನ್ನು ಮೀನುಗಾರರ ಪರವಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪ ಮೇಯರ್ ರಜನೀಶ್, ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವ್ೂ, ಸಬಿತಾ ಮಿಸ್ಕಿತ್, ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English