ಮಂಗಳೂರು: ಟ್ರಾಫಿಕ್ ಸಮಸ್ಯೆಯಿಂದ ನಲುಗಿ ಹೋಗಿರುವ ಸುರತ್ಕಲ್- ಮಂಗಳೂರಿಗೆ ಬೈಪಾಸ್ ರಸ್ತೆ ಬೇಕು ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಾಗರಿಕ ಸಮಿತಿ ಮಂಗಳೂರು ತಾಲೂಕು ಇದರ ಪದಾದಿಕಾರಿಗಳು, ನಿರ್ದೇಶಕರು ಮತ್ತು ನಾಗರಿಕರು ಶಾಸಕ ಮೊದಿನ್ ಬಾವಾರನ್ನು ಅವರ ಸುರತ್ಕಲ್ ನಿವಾಸದಲ್ಲಿ ಭೇಟಿಯಾಗಿ ಸುರತ್ಕಲ್‌ನಿಂದ ಪಂಪ್‌ವೆಲ್ ಸರ್ಕಲ್‌ವರೆಗಿನ ಟ್ರಾಫಿಕ್ ಸಮಸ್ಯೆಯನ್ನು ಮನದಟ್ಟು ಮಾಡಿಕೊಟ್ಟರು.
ಅಲ್ಲದೇ ಈಗಾಗಲೇ ಕರ್ನಾಟಕ ಸರಕಾರ 25 ಜಿಲ್ಲೆಗಳಿಗೆ ಅಗತ್ಯವಿರುವ ಬೈಪಾಸ್ ರಸ್ತೆಯ ಸಮೀಕ್ಷೆ, ಯೋಜನಾ ಕಾರ್ಯಕ್ರಮ ತಯಾರಿಕೆಗಾಗಿ ಸಂಪುಟ ಸಭೆಯಲ್ಲಿ ಅನುಮೋದಿಸಿದ 275 ಕೋಟಿ ರೂಪಾಯಿಯನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸಮಿತಿ ಆಗ್ರಹಪಡಿಸಿತು.
ಈ ಸಮಜಾಯಿಷಿಗೆ ಒಪ್ಪಿದ ಶಾಸಕರು ಕೂಡಾಲೇ ನಾನು ಈ ಯೋಜನೆಯ ನೇತೃತ್ವವಹಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಈ ಯೋಜನೆಯ ಉಪಯೋಗ ನಾಗರಿಕರಿಗೆ ಸಿಗುವಂತೆ ತನ್ನ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು. ಈ ಯೋಜನೆ ಕಾರ್ಯಗತವಾದರೆ ಎಂಆರ್‌ಪಿಎಲ್ ಕಡೆಯಿಂದ ಸುರತ್ಕಲ್ ಕಡೆಗೆ ಬರುವ ಎಲ್ಲಾ ಕಂಪೆನಿಗಳ ಟ್ಯಾಂಕರ್, ಗಜಗಾತ್ರದ ಲಾರಿಗಳು, ಟ್ರೇಲರ್‌ಗಳನ್ನು ಈ ಬೈಪಾಸ್ ರಸ್ತೆಯಲ್ಲಿಯೇ ಕಳುಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು, ಉಪಾಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಬಿ.ಎನ್. , ಸನಿಲ್, ಅಬ್ದುಲ್ ಹಮೀದ್ ಕಾನ, ಕಾರ್ಯದರ್ಶಿಗಳಾದ ಟಿ.ಎನ್.ರಾಘವೇಂದ್ರ, ಬಾಲಕೃಷ್ಣ ಶೆಟ್ಟಿ ಕೆ., ಯಶವಂತ ಶೆಟ್ಟಿ, ಕೋಶಾಧಿಕಾರಿಯಾದ ರಮೇಶ್ ಸುರತ್ಕಲ್, ನಿರ್ದೇಶಕರುಗಳಾದ ಡಾ. ಗುರುರಾಜ್, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಲೀಲಾಧರ ಶೆಟ್ಟಿ ಕಟ್ಲ, ಸುರೇಶ್ ನಾಯಕ್, ಎಂ. ಬಾಲಕೃಷ್ಣ ಶೆಟ್ಟಿ, ಚಂದ್ರಹಾಸರೈ, ರೋಖಿಪಿಂಟೊ, ಪುಷ್ಪರಾಜ್ ಶೆಟ್ಟಿ ಮದ್ಯ, ಬಾಲಕೃಷ್ಣ ಶೆಟ್ಟಿ ಮದ್ಯ, ಸದಾಶಿವ ಶೆಟ್ಟಿ ಹೊಸಬೆಟ್ಟು ಮತ್ತು ಸುರತ್ಕಲ್‌ನ ನಾಗರಿಕರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English