ದೀಪಾವಳಿಯ ಸಡಗರದೊಂದಿಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ

10:09 AM, Thursday, October 19th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

kudrolli templeಮಂಗಳೂರು:  ಕೌಶಲ್ಯವೊಂದಿದ್ದರೆ ಸಾಕು ಎಂತಹ ಅಪೂರ್ವ ಕಲಾಕೃತಿಗಳನ್ನು ಬೇಕಾದರೂ ಸೃಷ್ಟಿಬಹುದು.ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಆವರಣ ದೀಪಾವಳಿಯ ಸಡಗರದೊಂದಿಗೆ ಇಂತಹ ಸೃಜನಶೀಲತೆಗೆ ಸಾಕ್ಷಿಯಾಯಿತು.ದೀಪಾವಳಿ ಸಂದರ್ಭ ಕಂಗೊಳಿಸುವ ಗೂಡುದೀಪಗಳೆಂದರೆ ಬೆಳಕು.

ಕತ್ತಲಾಗುತ್ತಿದ್ದಂತೆ ಝಗಮಗಿಸುವ ಬೆಳಕಿನಲ್ಲಿ ಸಾಲು ಸಾಲು ಗೂಡುದೀಪಗಳು ಕಂಗೊಳಿಸಿದವು. ಹದಿನೆಂಟು ವರ್ಷಗಳಿಂದ ಆಯೋಜಿಸುತ್ತಿರುವ ಗೂಡುದೀಪ ಪಂಥದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ಕಲಾಕಾರರು ಚೆಲುವಿನ ಲೋಕವನ್ನೇ ಸೃಷ್ಟಿಸಿದ್ದರು. ಬಳಸಿ ಬಳಸಿ ಹಳಸಾಗಿರುವ ವಸ್ತುಗಳು ಕೂಡಾ ಇಲ್ಲಿ ಜೀವ ಪಡೆಯುತ್ತವೆ. ಹುಲ್ಲು ಕಡ್ಡಿಗಳು, ದವಸ ಧಾನ್ಯಗಳು, ಚೂರು ಬಟ್ಟೆಗಳು, ಸೋಡಾ ಬಾಟಲಿಗಳು, ಬೇಡವೆಂದು ಬಿಸಾಕಿದ ಸ್ಟ್ರಾಗಳು ಇಲ್ಲಿ ಅದ್ಭುತ ಸೃಷ್ಟಿಯಾಗಿ ಮೈದಳೆಯುತ್ತವೆ.

ಗೂಡುದೀಪ ಪಂಥದಲ್ಲಿ ಪ್ರತಿಬಾರಿಯೂ ವಿಭಿನ್ನ ಪರಿಕಲ್ಪನೆ, ವಿನ್ಯಾಸಗಳಿಂದ ಮನಸೆಳೆಯುವ ಗೂಡುದೀಪಗಳು ಈ ಬಾರಿಯೂ ಪ್ರೇಕ್ಷಕರಿಗೆ ನಿರಾಸೆ ಮಾಡಿಲ್ಲ. ಮಹೇಶ್ ರಾವ್ ಎಂಬವರು ಸತತ 11 ಗಂಟೆಗಳ ಕಾಲ, 16 ಬಣ್ಣಗಳಿಂದ ರಚಿಸಿದ 20 ಅಡಿ ಅಗಲ, 10 ಅಡಿ ಉದ್ದದ ರಂಗೋಲಿ ಗಮನಸೆಳೆಯಿತು. ಕಳೆದ 16 ವರ್ಷಗಳಿಂದ ರಂಗೋಲಿ ಬಿಡಿಸುತ್ತಿರುವ ಇವರು ದೆಹಲಿಯ ಕೆಂಪುಕೋಟೆಯಲ್ಲಿ ರಚಿಸಿದ ರಂಗೋಲಿಗೆ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಕಂಚಿನ ಪ್ರಶಸ್ತಿ ಪಡೆದುಕೊಂಡಿದ್ದರು.

kudrolli templeಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಕುದ್ರೋಳಿಯಲ್ಲಿ ಮಾತ್ರ ಕಾರ್ಬನ್ ಶೀಟ್‌ನ ರಾಮಮಂದಿರ ಸೃಷ್ಟಿಯಾಗಿತ್ತು. ಶ್ರೀನಿವಾಸ್ ಹಾಗೂ ಪುರುಷೋತ್ತಮ್ ವಾಮಂಜೂರು ಸೋದರರು ಕಾರ್ಬನ್ ಶೀಟ್ ಬಳಸಿ 12 ಅಡಿ ಉದ್ದ, ಒಂಭತ್ತು ಅಡಿ ಅಗಲ ನಿರ್ಮಿಸಿದ ರಾಮಮಂದಿರವದು. ಈ ಸಹೋದರರು ಕಳೆದ ಹನ್ನೊಂದು ವರ್ಷಗಳಿಂದ ಗೂಡುದೀಪ ಪಂಥದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು.

ಸುರುಳಿ ದೀಪ, ಪ್ಲಾಸ್ಟಿಕ್ ಚಮಚ, ಬಲೀಂದ್ರ, ಕರಾಳಿಯ ಮೀನುಗಾರಿಕೆಯನ್ನು ಬಿಂಬಿಸುವ ಗೂಡುದೀಪಗಳು, ದೈವಾರಾಧನೆ, ಯಕ್ಷಗಾನ, ದಸರಾ ವೈಭವ, ಬಾಹುಬಲಿ, ಡೈನೋಸರ್, ಗಣೇಶೋತ್ಸವ ಚಿತ್ರಣವನ್ನೊಳಗೊಂಡ ಗೂಡುದೀಪಗಳು ಆಕರ್ಷಣೀಯವಾಗಿತ್ತು.

1374ರಲ್ಲಿ ಥೈಲ್ಯಾಂಡ್‌ನ ರಾಜ ಒಂಡೇ ಬೋರಮ್ಮೊ ರಜಾತೀತ್ ನಿರ್ಮಿಸಿದ ವಾಹ್ ಮಹಾದಾಟ್ ದೇವಾಲಯದ ಪ್ರತಿಕೃತಿ ಹೈಲೈಟ್ ಆಗಿತ್ತು. ಒಟ್ಟು ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಮಾದರಿಗೆ ಸ್ಪರ್ಧೆಗಳು ನಡೆದಿದ್ದು, 425ಕ್ಕೂ ಹೆಚ್ಚು ನೋಂದಾವಣೆಯಾಗಿದ್ದವು. ಒಂದು ಸಾವಿರಕ್ಕೂ ಅಧಿಕ ಗೂಡುದೀಪಗಳು ತೀರ್ಪುಗಾರರಿಗೆ ಸವಾಲೊಡ್ಡಿದವು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English