ಮಂಗಳೂರು: ಮಂಗಳೂರು ನಗರದ ಜೆಪ್ಪು, ಬಂದರ, ಕದ್ರಿಯಲ್ಲಿ ಆಶಾ ಕಾರ್ಯಕರ್ತರನ್ನು ಬೇಗನೆ ಭರ್ತಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳುರು ನಗರದಲ್ಲಿರುವ ಆರೋಗ್ಯ ಕೇಂದ್ರಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಜೆಪ್ಪುವಿನಲ್ಲಿ 6, ಬಂದರ ನಲ್ಲಿ 6 ಮತ್ತು ಕದ್ರಿಯಲ್ಲಿ 3 ಹುದ್ದೆಗಳಿದ್ದು ಇವುಗಳಿಗೆ ತ್ವರಿತವಾಗಿ ನೇಮಕ ಮಾಡುವಂತೆ ತಿಳಿಸಿದರು.
ಆಶಾ ಕಾರ್ಯಕರ್ತರಿಗೆ ಮಾಸಿಕ 5 ಸಾವಿರ ರೂಪಾಯಿ ವೇತನ ಮತ್ತು ಹೆಚ್ಚಿವರಿಗೆ ಭತ್ತೆ ನೀಡಲಾಗುತ್ತದೆ. ಸ್ಥಳೀಯರನ್ನು ಮಾತ್ರ ನೇಮಕ ಮಾಡಬೇಕು. ಜೆಪ್ಪುನಲಿ ಜೆಪ್ಪು ಪರಿಸದವರು ಕದ್ರಿ, ಹಾಗೂ ಬಂದರಿನಲ್ಲಿ ಅಲ್ಲಿರುವವರೇ ಆಗಿರಬೇಕು ಎಂದರು. ಅಧಿಕಾರಿಗಳು ಶಾಸಕರಿಗೆ 48 ಆಶಾ ಕಾರ್ಯಕರ್ತರ ಹುದ್ದೆಗಳನ್ನು ಅನುಮೋದನೆ ಮಾಡಿದ್ದು ಈ ಪೈಕಿ 15 ಹುದ್ದೆಗಳನ್ನು ನೇಮಕ ಮಾಡಲಾಗಿದೆ, ಈಗ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆರೋಗ್ಯ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಿಸುವ ಬಗ್ಗೆ ತಾವು ಪ್ರಯತ್ನಿಸುತ್ತಿದ್ದು ಆದಷ್ಟು ಬೇಗನೆ ಮಂಜೂರಾಗುವ ನಿರೀಕ್ಷೆ ಇದೆ ಎಂದ ಶಾಸಕ ಜೆ.ಆರ್.ಲೋಬೊ ಅವರು ಆರೋಗ್ಯ ಕೇಂದ್ರಗಳಿಗೆ ಸ್ಥಳಾವಕಾಶ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
Click this button or press Ctrl+G to toggle between Kannada and English