ಮಂಗಳೂರು ನಗರದಲ್ಲಿ ದೈತ್ಯ ಗಾತ್ರದ ಕಾಡುಕೋಣ ಪ್ರತ್ಯಕ್ಷ, ಜನರಿಗೆ ಆತಂಕ

Monday, December 4th, 2023
Wild-bore

ಮಂಗಳೂರು : ಕಾಡುಕೋಣವೊಂದು ಕದ್ರಿ ಪ್ರದೇಶದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಅದು ಸಂಚರಿಸುವ ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ರಿ, ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜರೋಷವಾಗಿ ಹಗಲು, ರಾತ್ರಿ ಎನ್ನದೇ ಸುತ್ತಾಡುತ್ತಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಈ ಕಾಡು ಕೋಣವು ಕೆಲ ಮನೆಗಳ ಕಂಪೌಂಡ್ ಗಳನ್ನು ಹಾರಿ, ಕಬ್ಬಿಣದ ತಡೆ ಬೇಲಿಗಳಮ್ಮು ಮುರಿದು ಹಾಕಿದೆ ಎಂದು ತಿಳಿದು ಬಂದಿದೆ. ರಾತ್ರಿ ವೇಳೆಯೇ ಕಾಡು ಕೋಣಗಳು ಸಂಚಾರ ಮಾಡುತ್ತಿವೆ ಎಂದು […]

ಮಾದಕ ವಸ್ತು ಎಲ್‌ಎಸ್‌ಡಿ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿ ಸೆರೆ

Friday, June 11th, 2021
Mohammed Ajinas

ಮಂಗಳೂರು : ಅಕ್ರಮವಾಗಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಲ್‌ಎಸ್‌ಡಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳ ಮೂಲದ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೋಡಿದ ಕಮಿಶನರ್, ಮೂಲತಃ ಕೇರಳ ಕ್ಯಾಲಿಕಟ್ ಮುಟ್ಟಂಗಲ್ ನಿವಾಸಿ, ಪ್ರಸ್ತುತ ಕದ್ರಿಯ ಪಿಜಿಯಲ್ಲಿ ವಾಸಿಸುತ್ತಿರುವ ಮುಹಮ್ಮದ್ ಅಜಿನಾಸ್ (25) ಬಂಧಿತ ಆರೋಪಿ. ಈತನಿಂದ 16.80 ಲಕ್ಷ ರೂ. ಮೌಲ್ಯದ ಒಟ್ಟು 15 ಗ್ರಾಂ 15 ಮಿಲಿ ಗ್ರಾಂ ತೂಕವಿರುವ […]

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶಿವನಿಗೆ ವಿಶೇಷ ಪೂಜೆ

Friday, February 21st, 2020
kadri

ಮಂಗಳೂರು : ಇಂದು ನಾಡಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ. ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶುಕ್ರವಾರ ಬೆಳಗ್ಗೆಯಿಂದಲೇ ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ಮಂಜುನಾಥ ಸ್ವಾಮಿಗೆ ಅಭೀಷೆಕ ಮಾಡಿದರು. ಭಜನಾ ಸಂಕೀರ್ತನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇನ್ನು ಮಹಾಶಿವರಾತ್ರಿ ಪ್ರಯುಕ್ತ ದೇವಾಲಯ ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ಮುಂಜಾನೆ […]

ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಸ್ಯಾಕ್ಸೋಫೋನ್‌ ಕಾರ್ಯಕ್ರಮ

Thursday, January 23rd, 2020
kadri

ಕದ್ರಿ : ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಕದ್ರಿ ಮಲ್ಲಿಕಾ ವೃಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ| ಮಚ್ಚೇಂದ್ರನಾಥ ಮಂಗಳಾದೇವಿ ಮತ್ತು ಅಂತರಾಷ್ಟ್ರೀಯ ಸ್ಯಾಕ್ಸೋಫೋನ್‌ ಕಲಾವಿದೆ ಸಿಂಧು ಭೈರವಿ ಅವರಿಂದ ಸ್ಯಾಕ್ಸೋಫೋನ್‌ ಕಾರ್ಯಕ್ರಮವು 22.02.2020 ರಂದು ನೆರವೇರಿತು. ಸಹ ಕಲಾವಿದರಾಗಿಡೋಲು ವಿದ್ವಾನ್‌ ತಾಯೂರು ನಾಗರಾಜ ಹಾಗೂಗಣೇಶ ಮಂಗಳಾದೇವಿ, ಫ್ಲೂಟ್ ಶ್ರೀಧರ ಆಚಾರ್ಯ ಕಾಸರಗೋಡು ಸಹಕರಿಸಿದರು. ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷರು ಡಾ| ಎ. ಜನಾರ್ಧನ ಶೆಟ್ಟಿ, ಎಸ್. ಪ್ರದೀಪಕುಮಾರ ಕಲ್ಕೂರ, ಸುಧಾಕರರಾವ್ ಪೇಜಾವರ ಕಲಾವಿದರನ್ನುಶಾಲು ಹೊದಿಸಿ ನೆನಪಿನ ಕಾಣಿಕೆ […]

ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಗೆ ಹಸಿರು ಹೊರೆಕಾಣಿಕೆ

Monday, January 20th, 2020
kadri

ಮಂಗಳೂರು : ಪುರಾಣ ಪ್ರಸಿದ್ಧ ಕ್ಷೇತ್ರಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿದಾನದ ವಾರ್ಷಿಕಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಡೆಯುವ ಅನ್ನ ಸಂತರ್ಪಣೆಗೆ ಕದ್ರಿ ರಿಕ್ಷಾ ಚಾಲಕರು ಮತ್ತು ಮಾಲಕರು ಮತ್ತುಕದ್ರಿ ಪರಿಸರದ ಹಿತೈ ಷಿಗಳಿಂದ ಸಂಗ್ರಹಗೊಂಡ ಸುಮಾರು 55 ಸಾವಿರರೂಪಾಯಿ ಮೌಲ್ಯದಹಸಿರು ಹೊರೆಕಾಣಿಕೆಯನ್ನು ಶನಿವಾರ ಶ್ರೀ ಮಂಜುನಾಥ ಸ್ವಾಮಿಯ ಸನ್ನಿದಾನಕ್ಕೆ ವಿಜೃಂಭಣೆಯ ಮೆರವಣಿಗೆಯೊಂದಿಗೆಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕಾ ಸದಸ್ಯರಾದ ಶ್ರೀಮತಿ ಶಕಿಲ ಕಾವ ಮತ್ತು ಶ್ರೀ ಮನೋಹರ ಶೆಟ್ಟಿ, ಉದ್ಯಮಿಗಲಾದ ಶ್ರೀ ಗಣೇಶ್ ಶಿರ್ವ, ಗೋಕುಲ್‌ಕದ್ರಿ, […]

ಕದ್ರಿ ರಾಮಚಂದ್ರ ಭಟ್ ಎಲ್ಲೂರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ

Monday, January 13th, 2020
ramachandra

ಮಂಗಳೂರು : ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದಿಂದ ಕೊಡಮಾಡುವ “ಕುಂದೇಶ್ವರ ಸಮ್ಮಾನ್” ಪ್ರಶಸ್ತಿಗೆ ಈ ಬಾರಿ ಯಕ್ಷಗುರು ಕದ್ರಿ ರಾಮಚಂದ್ರ ಭಟ್ ಆಯ್ಕೆಯಾಗಿದ್ದಾರೆ. ಜ.21ರಂದು ರಾತ್ರಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ *ಭಾರ್ಗವ ವಿಜಯ* ಯಕ್ಷಗಾನ ನಡೆಯಲಿದೆ. ಸಿಂಧೂರ ಕಲಾವಿದರಿಂದ ಪನೊಡಿತ್ತುಂಡು ತುಳು ನಾಟಕ ಪ್ರದರ್ಶನ ಗೊಳ್ಳಲಿದೆ. ಜ.22ರಂದು ವರ್ಷ್ಷಾವಧಿ ಮಹೋತ್ಸವ ನಡೆಯಲಿದೆ. […]

ಜ.11 ರಿಂದ 13 ರವರೆಗೆ ಯಕ್ಷ ಮಂಜುಳಾ, ಕದ್ರಿ ದಶಮ ಸಂಭ್ರಮ

Wednesday, January 8th, 2020
yaksha-manjula

ಮಂಗಳೂರು : ಯಕ್ಷ ಮಂಜುಳಾ, ಕದ್ರಿ ಮಹಿಳಾ ತಾಳಮದ್ದಳೆ ಬಳಗ ತನ್ನ ‘ದಶಮ ಸಂಭ್ರಮ’ವನ್ನು ಮೂರು ದಿನ ಹಮ್ಮಿಕೊಂಡಿದ್ದು 2020 ನೇ ಜನವರಿ 11, 12, 13 ರಂದು ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ದೇವಸ್ಥಾನದ ಸಹಕಾರದೊಂದಿಗೆ ನೆರೆವೇರಲಿದೆ. ದಿನಾಂಕ 11 ರಂದು ಸಂಜೆ 4 ಗಂಟೆಗೆ ಕದ್ರಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಡಾ. ಎ. ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ‘ದಶಮ ಸಂಭ್ರಮ’ ಉದ್ಘಾಟನೆಗೆಗೊಳ್ಳಲಿದೆ. ಎಂದು ಸುದ್ದಿಗೋಷ್ಠಿಯಲ್ಲಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ರವರು ಹೇಳಿದ್ದಾರೆ.   […]

ಕದ್ರಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Monday, December 23rd, 2019
Kadri

ಮಂಗಳೂರು : ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕದ್ರಿ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿಯಿರುವ ಅಭಿಷೇಕ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮವನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ಜೆ. ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು. ದ.ಕ. ಜಿಲ್ಲಾಕನ್ನಡ ಸಾಹಿತ್ಯ […]

ಕದ್ರಿಯಿಂದ ಕುಕ್ಕೆ ಸುಬ್ರಮಣ್ಯ ತಲುಪಲಿರುವ ನೂತನ ಬ್ರಹ್ಮರಥ

Tuesday, October 1st, 2019
Brahma-ratha

ಮಂಗಳೂರು : ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿ ಅವರು ಕಾಣಿಕೆ ರೂಪದಲ್ಲಿ ಸಮರ್ಪಿಸಲು ತಯಾರಿಸಿರುವ ರಥವನ್ನು ಮೆರವಣಿಗೆ ಮೂಲಕ ಕುಕ್ಕೆ ಸುಬ್ರಮಣ್ಯಕ್ಕೆ ತಲುಪಿಸಲಾಗುತ್ತಿದೆ. ಸುಮಾರು 400 ವರ್ಷಗಳಷ್ಟು ಹಳೆಯದಾದ ರಥದ ಮಾದರಿಯಲ್ಲೇ ನೂತನ ರಥವನ್ನೂ ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರವರ ತಂಡವು ವೈಶಿಷ್ಟ್ಯಪೂರ್ಣವಾಗಿ ಪೂರ್ಣಗೊಳಿಸಿದೆ. ತಯಾರಿಸಿರುವ ರಥವು ಕೋಟೇಶ್ವರದಿಂದ ಭವ್ಯ ಮೆರವಣಿಗೆ ಮೂಲಕ ಹೊರಟಿದ್ದು, ಬ್ರಹ್ಮರಥವು ಉಡುಪಿ- ಪಡುಬಿದ್ರೆ ಮಾರ್ಗವಾಗಿ ಕದ್ರಿ- ಬಿ.ಸಿ.ರೋಡ್- ಉಪ್ಪಿನಂಗಡಿ, ಕಡಬ ಮೂಲಕ […]

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು : ಪ್ಲಾಸ್ಟಿಕ್ ಬಳಕೆದಾರರ ಮೇಲೆ ದಂಡ

Tuesday, September 3rd, 2019
banned-plastic

ಮಂಗಳೂರು : ಪ್ಲಾಸ್ಟಿಕ್ ನಿಷೇಧದ ಕುರಿತು ಇತೀಚೆಗೆ ಕಟ್ಟುನಿಟ್ಟಿನ ಕ್ರಮ ಅಳವಡಿಸಲಾಗಿದ್ದು, ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸದಂತೆ ಈ ಹಿಂದೆ ಅಧಿಕಾರಿಗಳು ಸೂಚಿಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ನಗರದ ಅಂಗಡಿ ಮುಂಗಟ್ಟುಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಭಾರಿ ದಂಡ ವಿಧಿಸಿ ಅವರ ಬಳಿಯಲ್ಲಿದ್ದ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಸೆಂಟ್ರಲ್ ಮಾರುಕಟ್ಟೆ,ಕದ್ರಿ, ಸುರತ್ಕಲ್, ಬಂದರು ಮತ್ತು ಲಾಲ್ ಬಾಗ್ ಪ್ರದೇಶದಲ್ಲಿ ಕಾರ್ಯಚರಣೆ ಪ್ರಾರಂಭಿಸಿದ್ದು ಕದ್ರಿ ಭಾಗದಲ್ಲಿ ಸುಮಾರು 50 ಕೆ.ಜಿಯಷ್ಟು […]