ಮಂಗಳೂರು : ಕಾಡುಕೋಣವೊಂದು ಕದ್ರಿ ಪ್ರದೇಶದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಅದು ಸಂಚರಿಸುವ ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕದ್ರಿ, ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜರೋಷವಾಗಿ ಹಗಲು, ರಾತ್ರಿ ಎನ್ನದೇ ಸುತ್ತಾಡುತ್ತಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಈ ಕಾಡು ಕೋಣವು ಕೆಲ ಮನೆಗಳ ಕಂಪೌಂಡ್ ಗಳನ್ನು ಹಾರಿ, ಕಬ್ಬಿಣದ ತಡೆ ಬೇಲಿಗಳಮ್ಮು ಮುರಿದು ಹಾಕಿದೆ ಎಂದು ತಿಳಿದು ಬಂದಿದೆ. ರಾತ್ರಿ ವೇಳೆಯೇ ಕಾಡು ಕೋಣಗಳು ಸಂಚಾರ ಮಾಡುತ್ತಿವೆ ಎಂದು ದಾರಿಹೋಕರು,ಸವಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದೀಗ ಮೂರನೇ ಬಾರಿ ನಗರದಲ್ಲಿ ಕಾಡುಕೋಣ ಪ್ರತ್ಯಕ್ಷವಾದಂತಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ರಾತ್ರಿಗಾಗಿ ಕಾದು ಕಾರ್ಯಚರಿಸುವುದಾಗಿ ಮಾಹಿತಿ ನೀಡಿದೆ.
Click this button or press Ctrl+G to toggle between Kannada and English