ಮಂಗಳೂರು : ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿ ಅವರು ಕಾಣಿಕೆ ರೂಪದಲ್ಲಿ ಸಮರ್ಪಿಸಲು ತಯಾರಿಸಿರುವ ರಥವನ್ನು ಮೆರವಣಿಗೆ ಮೂಲಕ ಕುಕ್ಕೆ ಸುಬ್ರಮಣ್ಯಕ್ಕೆ ತಲುಪಿಸಲಾಗುತ್ತಿದೆ.
ಸುಮಾರು 400 ವರ್ಷಗಳಷ್ಟು ಹಳೆಯದಾದ ರಥದ ಮಾದರಿಯಲ್ಲೇ ನೂತನ ರಥವನ್ನೂ ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರವರ ತಂಡವು ವೈಶಿಷ್ಟ್ಯಪೂರ್ಣವಾಗಿ ಪೂರ್ಣಗೊಳಿಸಿದೆ.
ತಯಾರಿಸಿರುವ ರಥವು ಕೋಟೇಶ್ವರದಿಂದ ಭವ್ಯ ಮೆರವಣಿಗೆ ಮೂಲಕ ಹೊರಟಿದ್ದು, ಬ್ರಹ್ಮರಥವು ಉಡುಪಿ- ಪಡುಬಿದ್ರೆ ಮಾರ್ಗವಾಗಿ ಕದ್ರಿ- ಬಿ.ಸಿ.ರೋಡ್- ಉಪ್ಪಿನಂಗಡಿ, ಕಡಬ ಮೂಲಕ ಅ.02ರಂದು ಕುಕ್ಕೆ ಸುಬ್ರಹ್ಮಣ್ಯ ತಲುಪಲಿದೆ. ರಥವು ಹಾದುಹೋಗುವ ರಸ್ತೆಯುದ್ದಕ್ಕೂ ವಿವಿಧ ಕಡೆಗಳಲ್ಲಿ ಅದ್ದೂರಿಯಾಗಿ ಸ್ವಾಗತ ನೀಡಲು ವ್ಯವಸ್ಥೆ ಮಾಡಲಾಗಿದೆ. ಬ್ರಹ್ಮರಥ ಸುಬ್ರಹ್ಮಣ್ಯ ತಲುಪುವ ಸಂದರ್ಭದಲ್ಲಿ ಸ್ಥಳೀಯ ಶಾಸಕರು, ಸಚಿವರು, ಜನಪ್ರತಿನಿಧಿಗಳು, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರು, ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Click this button or press Ctrl+G to toggle between Kannada and English