ಮಂಗಳೂರು : ಪುರಾಣ ಪ್ರಸಿದ್ಧ ಕ್ಷೇತ್ರಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿದಾನದ ವಾರ್ಷಿಕಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಡೆಯುವ ಅನ್ನ ಸಂತರ್ಪಣೆಗೆ ಕದ್ರಿ ರಿಕ್ಷಾ ಚಾಲಕರು ಮತ್ತು ಮಾಲಕರು ಮತ್ತುಕದ್ರಿ ಪರಿಸರದ ಹಿತೈ ಷಿಗಳಿಂದ ಸಂಗ್ರಹಗೊಂಡ ಸುಮಾರು 55 ಸಾವಿರರೂಪಾಯಿ ಮೌಲ್ಯದಹಸಿರು ಹೊರೆಕಾಣಿಕೆಯನ್ನು ಶನಿವಾರ ಶ್ರೀ ಮಂಜುನಾಥ ಸ್ವಾಮಿಯ ಸನ್ನಿದಾನಕ್ಕೆ ವಿಜೃಂಭಣೆಯ ಮೆರವಣಿಗೆಯೊಂದಿಗೆಒಪ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕಾ ಸದಸ್ಯರಾದ ಶ್ರೀಮತಿ ಶಕಿಲ ಕಾವ ಮತ್ತು ಶ್ರೀ ಮನೋಹರ ಶೆಟ್ಟಿ, ಉದ್ಯಮಿಗಲಾದ ಶ್ರೀ ಗಣೇಶ್ ಶಿರ್ವ, ಗೋಕುಲ್‌ಕದ್ರಿ, ದಿನೇಶ್‌ರಾಜ್‌ಅಂಚನ್, ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ದಿನೇಶ್‌ದೇವಾಡಿಗರಿಕ್ಷಾಚಾಲಕರು ಮತ್ತು ಮಾಲಕರು ಸಂಘಟಣೆಯಅಧ್ಯಕ್ಷರಾದ ಸುಧೀರ್‌ಕೊಂಡಾಣ, ಗೌರವಅಧ್ಯಕ್ಷರಾದ ಹರೀಶ್ ಶೆಟ್ಟಿ ವಾಮಂಜೂರು, ಕಾರ್ಯದರ್ಶಿ ರವಿ ಕುಡುಪು ಸದಸ್ಯರಾದ ಪದ್ಮನಾಭಕದ್ರಿ, ಪ್ರಸಾದ್‌ಕದ್ರಿ, ಪ್ರಭಾಕರಕದ್ರಿ ಉಪಸ್ಥಿತರಿದ್ದು ದೀಪ ಪ್ರಜ್ವಲನೆಯ ಮುಖೇನ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಶ್ರೀ ನಿರಂಜನ್ ಕೆ.ಸಾಲಿಯಾನ್ ನಿರೂಪಿಸಿದರು.
Click this button or press Ctrl+G to toggle between Kannada and English