ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು : ಪ್ಲಾಸ್ಟಿಕ್ ಬಳಕೆದಾರರ ಮೇಲೆ ದಂಡ

4:43 PM, Tuesday, September 3rd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

banned-plasticಮಂಗಳೂರು : ಪ್ಲಾಸ್ಟಿಕ್ ನಿಷೇಧದ ಕುರಿತು ಇತೀಚೆಗೆ ಕಟ್ಟುನಿಟ್ಟಿನ ಕ್ರಮ ಅಳವಡಿಸಲಾಗಿದ್ದು, ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸದಂತೆ ಈ ಹಿಂದೆ ಅಧಿಕಾರಿಗಳು ಸೂಚಿಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ನಗರದ ಅಂಗಡಿ ಮುಂಗಟ್ಟುಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಭಾರಿ ದಂಡ ವಿಧಿಸಿ ಅವರ ಬಳಿಯಲ್ಲಿದ್ದ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಸೆಂಟ್ರಲ್ ಮಾರುಕಟ್ಟೆ,ಕದ್ರಿ, ಸುರತ್ಕಲ್, ಬಂದರು ಮತ್ತು ಲಾಲ್ ಬಾಗ್ ಪ್ರದೇಶದಲ್ಲಿ ಕಾರ್ಯಚರಣೆ ಪ್ರಾರಂಭಿಸಿದ್ದು ಕದ್ರಿ ಭಾಗದಲ್ಲಿ ಸುಮಾರು 50 ಕೆ.ಜಿಯಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು ಬಳಕೆದಾರರ ಮೇಲೆ ಒಟ್ಟು ರೂ 12000 ದಂಡವನ್ನು ವಿಧಿಸಿದ್ದಾರೆ.

ಕನಿಷ್ಠ 1500 ಮತ್ತು ಗರಿಷ್ಠ 5000ದವರೆಗೆ ದಂಡ ವಿಧಿಸಲಾಗಿದ್ದು ಸಂಜೆವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪರಿಸರ ಅಭಯಂತರರಾದ ಮಧು ಎಸ್. ಮನೋಹರ್ ಮಾಹಿತಿ ನೀಡಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English