ಮಂಗಳೂರು: ನಮ್ಮ ಬಾಳ್ವೆಯಲ್ಲಿ ಉತ್ತಮ ಅಧ್ಯಯನ ಮತ್ತು ಉತ್ತಮ ಅಧ್ಯಾಪನ ಇವೆರಡು ಜೀವಮಾನ ಸ್ನೇಹಿಗಳು ಎಂದು ಎಜೆ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇಲ್ಲಿನ ಪ್ರೊ.ಡಾ| ಕೆ. ಮೋಹನ್ ಪೈ ರವರು ಹೇಳಿದರು.
ಅವರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಮತ್ತು ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಕೂಟಕ್ಕಳ ಸಭಾಂಗಣದಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ೨೦೧೭ ವನ್ನು ಉದ್ಟಾಟಿಸಿ ಮಾತನಾಡಿದರು.
ಸಮಾಜದಲ್ಲಿ ಕೌಶಲ್ಯ ಆಧಾರಿತ ವೃತ್ತಿಯು ಉದ್ಯೋಗದಲ್ಲಿ ಯಶಸ್ಸನ್ನು ನೀಡುತ್ತದೆ. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಗೌರವವಿದೆ. ಉತ್ತಮ ತಳಹದಿಯೊಂದಿಗೆ ತಯಾರಿಯನ್ನು ನಡೆಸಿದರೆ ನಮ್ಮ ಭವಿಷ್ಯ ಉಜ್ವಲವಾಗಿರುತ್ತದೆ. ವಿದ್ಯಾರ್ಥಿಗಳು ಭವಿಷ್ಯವನ್ನು ನಿರ್ಮಿಸಿಕೊಳ್ಳುವಲ್ಲಿ ಅಪಾರವಾದ ಪರಿಶ್ರಮವನ್ನು ಪಟ್ಟು ತಮ್ಮ ಕನಸುಗಳನ್ನು ನನಸಾಗಿಸುವಲ್ಲಿ ಸತತ ಪ್ರಯತ್ನಶೀಲರಾಗಿರಬೇಕು. ಸಮಾಜದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಯಾವುದೇ ವೃತ್ತಿಯಲ್ಲಿಯೂ ಕೂಡ ನಿಮ್ಮನ್ನು ಸಮಾಜ ಗುರುತಿಸುತ್ತದೆ.
ಹಿಂದಿನ ಕಾಲದಲ್ಲಿ ಉದ್ಯೋಗವು ಪುರುಷ ಲಕ್ಷಣವಾಗಿತ್ತು ಆದರೆ ಪರಿಸ್ಥಿತಿ ಬದಲಾವಣೆ ಆಗಿದೆ ಹಾಗಾಗಿ ಇಂದಿನ ತುರ್ತಿನಲ್ಲಿ ಉದ್ಯೋಗವು ಮನುಷ್ಯ ಲಕ್ಷಣವಾಗಿದೆ. ಸಮಾಜದಲ್ಲಿ ವೃತ್ತಿಯನ್ನು ನಿರ್ವಹಿಸುವುದಷ್ಟೇ ಅಲ್ಲ ಸಮಾಜದೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದು ಉತ್ತಮ ಕಲೆ ಎಂದು ಹೇಳಿದರು.
ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳಿಗಿಂತ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ವಿಷಯವಾರು ಮಾಹಿತಿ ಅತ್ಯಂತ ನಿಖರವಾಗಿರುತ್ತದೆ. ಶಿಕ್ಷಣದಲ್ಲಿ ಬೇರೆ ಬೇರೆ ಕೋರ್ಸ್‌ಗಳು ಇವೆ. ಆದರೆ ಯಾವುದನ್ನು ಆಯ್ಕೆ ಮಾಡಿದರೂ ಅದನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದುಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಎಕ್ಸ್‌ಪರ್ಟ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ| ನರೇಂದ್ರ ಎಲ್. ನಾಯಕ್ ಹೇಳಿದರು.
ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಹರೀಶ್ ಭಟ್, ಬೀದರ್ ಕರ್ನಾಟಕ ವೆಟರಿನರಿ ಮತ್ತು ಫಿಶರೀಸ್ ಸೈನ್ಸ್ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಎಂ.ಶಿವಪ್ರಕಾಶ್ , ಮಂಗಳೂರಿನಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ದೇರಳಕಟ್ಟೆಯ ಸರ್ಜರಿ ವಿಭಾಗದ ಪ್ರೊ.ಡಾ.ರಾಜೇಶ್ ಬಲ್ಲಾಳ್, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಶ್ರೀ ಅಂಕುಶ್ ಎನ್ ನಾಯಕ್, ಶ್ರೀ ಸಹನ್ ಆಳ್ವಮತ್ತು ವೈಷ್ಣವಿ ಬಲ್ಲಾಳ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಶ್ರೀ ಕುದ್ರೋಳಿ ದೇವಸ್ಥಾನದ ಟ್ರಸ್ಟಿ ಶ್ರೀ ಮಾಧವ ಜಪ್ಪು ಪಟ್ಣ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಉಪಸ್ಥಿತರಿದ್ಧರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಸ್ವಾಗತಿಸಿದರು, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ನೀಹಾ ಅವರು ನಿರೂಪಿಸಿ ವಂದಿಸಿದರು.
Click this button or press Ctrl+G to toggle between Kannada and English