ಕುಲದೈವ ಕೊರಗಜ್ಜ ದೈವದ ಅವಹೇಳನ, ಕೊರಗ ಸಮಾಜದಿಂದ ಪ್ರತಿಭಟನೆ

5:15 PM, Monday, October 30th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

koraga ಮಂಗಳೂರು: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ  ಸಾಮಾಜಿಕ ಜಾಲತಾಣದ ಮೂಲಕ ಕೊರಗ ಸಮುದಾಯದ ಕುಲದೈವ, ಸಾಂಸ್ಕೃತಿಕ ಪುರುಷನಾಗಿ ಆರಾಧಿಸಲ್ಪಡುವ ಕೊರಗಜ್ಜನನ್ನು ಅವಹೇಳನ ಮಾಡಿರುವ ವ್ಯಕ್ತಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಯಿತು.

ಒಕ್ಕೂಟದ ಅಧ್ಯಕ್ಷ ಎಂ. ಸುಂದರ, ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕರಾವಳಿ ಕರ್ನಾಟಕದ ಮೂಲ ಜನಾಂಗವಾದ ಕೊರಗ ಸಮಾಜ ಹಾಗೂ ಸಮಾಜದ ಕೊರಗಜ್ಜ ದೈವದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿರುುದು ಬೇಸರದ ಸಂಗತಿ ಎಂದರು.

koraga ಆ್ಯಂಜಲ್ ನಯನಾ ಪ್ರಜ್ವಲ್ ಎಂಬಾತ ಕೊರಗಜ್ಜನ ಕುರಿತು ಅಸಭ್ಯ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯೋಗ ಮಾಡಿದ್ದಾರೆ ಅವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳೇಕು ಎಂದು ಅವರು ಆಗ್ರಹಿಸಿದರು.

ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೊರಗಜ್ಜನ ಕೋಲ ನಡೆಯುವ ಸಂದರ್ಭದಲ್ಲಿಯೂ ಕೊರಗಜ್ಜನ ವೇಷ ಹಾಕಿದವರು ಅಶ್ಲೀಲವಾಗಿ ವರ್ತಿಸುವುದು, ಕುಣಿಯುವುದನ್ನು ಮಾಡಲಾಗುತ್ತಿದೆ. ಈ ಮೂಲಕ ಕೊರಗರ ಕುಲದೈವವನ್ನು ನಿಂದಿಸಿ, ಸಮುದಾಯವನ್ನು ಅವಮಾನಿಸುವ ಕೃತ್ಯ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಪ್ರತಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಅವರು ಈ ಸಂದರ್ಭ ಒತ್ತಾಯಿಸಿದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗೆ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿ ಗೌರಿ ಕೆಂಜೂರು, ಉಪಾಧ್ಯಕ್ಷ ರಮೇಶ್ ಕೊಗ್ಗ, ಕಾರ್ಯದರ್ಶಿ ದಿವಾಕರ್ ಕೆಂಜೂರು, ಕೋಶಾಧಿಕಾರಿ ಸುಮತಿ ಕಾಸರಗೋಡು, ಬಾಬು ಪಾಂಗಾಳ, ಸಂಜೀವ ಕೋಡಿಕಲ್, ಬಾಲರಾಜ್ ಕೋಡಿಕಲ್, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English