ಬಂಟ್ಸ್ ಸಂಘ ಮುಂಬಯಿ 2017-20 ಸಮಿತಿಗೆ ನೂತನ ಸಾರಥಿಗಳ ಆಯ್ಕೆ

4:38 PM, Wednesday, November 1st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

bunts sangaಮುಂಬಯಿ: ಬಂಟ ಸಮುದಾಯದ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಯೆಂದೆಣಿಸಿದ ಬಂಟ್ಸ್ ಸಂಘ ಮುಂಬಯಿ ಇದರ ವಾರ್ಷಿಕ 89 ನೇ ಮಹಾಸಭೆಯು ಇಂದಿಲ್ಲಿ ಸೋಮವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ್ದು ಸಭೆಯಲ್ಲಿ ಸಂಘದ 2017-20 ನೇ ಸಾಲಿಗೆ ನೂತನ ಸಾರಥಿಗಳ ಆಯ್ಕೆ ನಡೆಸಲ್ಪಟ್ಟಿತು.

bunts sangaಸಂಘದ 29 ನೇ ಅಧ್ಯಕ್ಷರಾಗಿ ಪದ್ಮನಾಭ ಎಸ್.ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ರಂಜನಿ ಸುಧಾಕರ ಹೆಗ್ಡೆ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಶರತ್ ವಿಜಯ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾದರು. ನ್ಯಾ| ಡಿ.ಕೆ ಶೆಟ್ಟಿ ಅವರು ನೂತನ ಸಾರಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿ ಫಲಿತಾಂಶ ಪ್ರಕಟಿಸಿದರು. ಬಳಿಕ ಹಾಲಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ.ಶೆಟ್ಟಿ ಅವರು ಕ್ರಮವಾಗಿ ನೂತನ ಅಧ್ಯಕ್ಷರನ್ನು ಪುಷ್ಪಗುಪ್ಚವನ್ನಿತ್ತು ಅಭಿನಂದಿಸಿದರು. ಶೀಘ್ರವೇ ನೂತನ ಅಧ್ಯಕ್ಷರು ಇತರ ಪದಾಧಿಕಾರಿಗಳ ಆಯ್ಕೆ ನಡೆಸಲಿದ್ದು ಹಾಲಿ ಪದಾಧಿಕಾರಿ ಗಳು ಪದಾಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರ ನಡೆಸವರು.

ಪದ್ಮನಾಭ ಎಸ್.ಪಯ್ಯಡೆ: ಮೂಲತಃ ಬಂಟ್ವಾಳ ತಾಲೂಕು ಅಲ್ಲಿನ ಪಂಜ ಮೂಡುಮನೆ ಶೀನ ಪಯ್ಯಡೆ ಮತ್ತು ಕುರಿಯಾಳಗುತ್ತು ಗಿರಿಜಾ ಪಯ್ಯಡೆ ದಂಪತಿ ಸುಪುತ್ರರಾಗಿದ್ದು, ಮುಂಬಯಿ ಮಹಾನಗರದಲ್ಲಿನ ಪ್ರತಿಷ್ಠಿತ ಉದ್ಯಮಿ ಸ್ವರ್ಗಸ್ಥ ರಮಾನಾಥ್ ಪಯ್ಯಡೆ ಸಹೋದರ ಆಗಿದ್ದಾರೆ. ಕುರಿಯಾಳಗುತ್ತುವಿನಲ್ಲಿ ಜನಿಸಿದ ಪದ್ಮನಾಭ ತನ್ನ ಪ್ರಾಥಮಿಕ ಶಿಕ್ಷಣ ಕಂದಾವರ (ಕೈಕಂಬ) ಮತ್ತು ಪ್ರೌಢ ಶಿಕ್ಷಣವನ್ನು ಗುರುಪುರ ಬೋರ್ಡ್ ಹೈಸ್ಕೂಲ್‌ನಲ್ಲಿ ಪೂರೈಸಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಪದವಿಧಾರರಾದರು. ಬಳಿಕ ಬ್ಯಾಂಕಿಂಗ್ ನೌಕರಿ ನಡೆಸಿ ಕ್ರಮೇಣ ಉದ್ಯಮಕ್ಕೆ ಕಾಲಿಸಿ ಇಂದು ಯಶಸ್ವೀ ಉದ್ಯಮಿಯಾಗಿರುವರು. ಹೊಟೇಲ್ ಉದ್ದಿಮೆಯಲ್ಲಿ ಪಳಗಿ ಸಫಲತೆ ಪಡೆದ ಇವರು ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡಿರುವರು. ಪಯ್ಯಡೆ ಗ್ರೂಫ್ ಆಫ್ ಹೊಟೇಲ್ಸ್‌ನ ನಿರ್ದೇಶಕರಾಗಿದ್ದು ಪ್ರಸ್ತುತ ಪಯ್ಯಡೆ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಕಾರ್ಯಾಧ್ಯಕ್ಷ ಆಗಿದ್ದಾರೆ. ಮುಂಬಯಿಯ ಮಲಾಡ್‌ನಲ್ಲಿ ಸಪ್ನಾ ವೆಜ್ ರೆಸ್ಟೋರೆಂಟ್, ಉಡುಪಿಯಲ್ಲಿ ಸರೋವರ ರೆಸ್ಟೋರೆಂಟ್, ಪಯ್ಯಡೆ ರೆಸಿಡೆನ್ಸಿ, ಪಯ್ಯಡೆ’ಸ್ ಕುಬೇರ ಹೊಟೇಲ್, ಬೆಂಗಳೂರುನಲ್ಲಿ ಪಯ್ಯಡೆ ಗ್ರ್ಯಾಂಡ್ ಹೊಟೇಲ್ ಹೊಂದಿರುವರು.

ಮಲಾಡ್ ಕನ್ನಡ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಆಹಾರ್ ಸಂಸ್ಥೆಯ ಪದಾಧಿಕಾರಿ ಆಗಿ, ಬಂಟ್ಸ್ ಸಂಘ ಮುಂಬಯಿ ಇದರ ವಿವಿಧ ಹುದ್ದೆಗಳನ್ನಲಂಕರಿಸಿದ ಇವರು ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾಗಿ, ಸಂಘದ ವಿಶ್ವಸ್ಥ ಸದಸ್ಯ, ಆಸ್ತಿ ಮತ್ತು ಸಭಾಗೃಹ ವಹಿವಾಟು ಸಮಿತಿ ಕಾರ್ಯಾಧ್ಯಕ್ಷ, ಬಂಟ್ಸ್ ನ್ಯಾಯ ಮಂಡಳಿ ಕಾರ್ಯಾಧ್ಯಕ್ಷ ಮತ್ತು ಕೇಂದ್ರ ಸಮಿತಿಯ ಉಪಾಧ್ಯಕ್ಷ, ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸ್ಥಾಪಕ ಕಾರ್ಯಾಧ್ಯಕ್ಷ ಆಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಪತ್ನಿ ಮಾಲಿನಿ ಪಯ್ಯಡೆ, ಸುಪುತ್ರಿಯರಾದ ದಿವ್ಯಾ ಪ್ರಧಾ ಶೆಟ್ಟಿ ಮತ್ತು ದೀಕ್ಷಾ ಆದಿತ್ಯಾ ಶೆಟ್ಟಿ ಅವರೊಂದಿಗೆ ಮುಂಬಯಿಯಲ್ಲಿ ಕಾಂದಿವಿಲಿಯಲ್ಲಿ ನೆಲೆಸಿದ್ದಾರೆ.

ರಂಜನಿ ಸುಧಾಕರ ಹೆಗ್ಡೆ: ಕಣಂಜಾರು ಆನಂದ್ ಶೆಟ್ರ ಸೊಸೆ ಹಾಗೂ ಬಡಗ ಬೆಟ್ಟು ಹೊಸಮನೆ ದಿ| ಹಿರಿಯಣ್ಣ ಹೆಗ್ಡೆ ಮತ್ತು ಕಣಂಜಾರು ಜಲಜ ಶೆಟ್ಟಿ ದಂಪತಿ ಸುಪುತ್ರಿ ಮತ್ತು ಕಡಂದಲೆ ಪಿರ್ದೊಟ್ಟು ಪರಾರಿ ದಿ| ಸೀನ ಹೆಗ್ಡೆ ಮತ್ತು ತುಂಗಮ್ಮ ಎಸ್.ಹೆಗ್ಡೆ ಅವರ ಸೊಸೆ ಆಗಿದ್ದು, ತುಂಗಾ ಗ್ರೂಪ್ ಆಫ್ ಹೋಟೆಲ್ಸ್‌ನ ಕಾರ್ಯಾಧ್ಯಕ್ಷ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ ಅವರ ಧರ್ಮಪತ್ನಿ. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

ಶರತ್ ವಿಜಯ್ ಶೆಟ್ಟಿ: ಕಡಂದಲೆ ಉಳ್ಳನಡ್ಕ ವಿಶಾಲಾಕ್ಷಿ ಶೆಟ್ಟಿ ಮತ್ತು ಕಟಪಾಡಿ ಮೂಡಬೆಟ್ಟುಗುತ್ತು ವಿಜಯ್ ದೇಜು ಶೆಟ್ಟಿ ಅವರ ಪುತ್ರರಾದ ಇವರು ಯುವೋದ್ಯಮಿ ಆಗಿರುವರು. ಬಂಟರ ಸಂಘದ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ, ಸಮಿತಿಯ ಹಾಲಿ ಜೊತೆ ಕೋಶಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಶಿಲ್ಪಾ ಎಸ್.ಶೆಟ್ಟಿ, ಪುತ್ರ ಆರಾಂಶ್ ಇವರ ಪರಿವಾರ. ಚೆಂಬೂರ್‌ನಲ್ಲಿ ವಾಸ್ತವ ಆಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English