ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

12:30 PM, Thursday, November 2nd, 2017
Share
1 Star2 Stars3 Stars4 Stars5 Stars
(No Ratings Yet)
Loading...

expert collageಮಂಗಳೂರು: ಜಾಗತೀಕರಣ ಸದಂರ್ಭದಲ್ಲಿ ಕನ್ನಡಿಗರಿಗೆ ಬದುಕಲು ಸೂಕ್ತವಾದ ವಾತಾವರಣವನ್ನು ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚು ಸೃಷ್ಟಿಸಿದರೆ ಮಾತೃಭಾಷೆಗೆ ನಿಜವಾಗಿಯೂ ಗೌರವ ಕೊಟ್ಟಂತೆ ಆಗುತ್ತದೆ ಎಂದು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರಭಟ್ ಹೇಳಿದರು.

ಅವರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಕನ್ನಡವನ್ನು ಮಾತನಾಡುವ ಮೂಲಕ ಮಾತ್ರ ಕನ್ನಡವನ್ನು ಬೆಳಗಿಸುವುದು ಅಷ್ಟೇ ಅಲ್ಲ ಕನ್ನಡ ಭಾಷೆಯನ್ನು ಅವಲಂಬಿಸಿರುವ ಕನ್ನಡಿಗರ ಬದುಕಿನಲ್ಲಿ ಜೀವನವನ್ನು ನಡೆಸಲು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೂಡ ಅಷ್ಟೇ ಅವಶ್ಯ. ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಪೂರ್ಣವಾದ ವಿಚಾರಗಳು, ಚಿಂತನೆಗಳು, ಮೌಲ್ಯಗಳು ಇವೆ. ಇವು ಯುವ ಮನಸ್ಸುಗಳಿಗೆ ತಲುಪುವಲ್ಲಿ ನಾವು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಕನ್ನಡದಲ್ಲಿ ಅತಿಹೆಚ್ಚು ಅಂಕಗಳನ್ನು ತೆಗೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಬೇಕು. ನಾವು ಯಾವ ಮಾಧ್ಯಮದಲ್ಲಿ ಅಧ್ಯಾಯನ ಮಾಡಿದ್ದೇವೆ ಅನ್ನುವುದಕ್ಕಿಂತ ನಾವು ಜಾಗತೀಕರಣದ ಸದಂರ್ಭದಲ್ಲಿ ಸವಾಲುಗಳನ್ನು ಎದುರಿಸುವಲ್ಲಿಎಷ್ಟು ಸಾಫಲ್ಯ ಹೊಂದಿದ್ದೇವೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.

expert collageಕರ್ನಾಟಕ ರಾಜ್ಯೋತ್ಸವ ಎಂದರೆ ನಮಗೆ ನಮ್ಮ ತಾಯಿಯ ಜನ್ಮ ದಿನದಷ್ಟೇ ಸಂಭ್ರಮ. ಹೆತ್ತತಾಯಿ ನಮಗೆ ಶರೀರವನ್ನು ನೀಡಿದರೆ, ಕನ್ನಡಾಂಬೆಯು ಈ ಶರೀರಕ್ಕೊಂದು ವ್ಯಕ್ತಿತ್ವವನ್ನು ನೀಡಿದಳು ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕರುಣಾಕರ ಬಳ್ಕೂರು ಅವರು ಹೇಳಿದರು.

ಅವರು ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಉಪನ್ಯಾಸವನ್ನು ಮಾಡುತ್ತ ನಮ್ಮರಾಜ್ಯ, ಮಾತೃಭಾಷೆ, ಧರ್ಮ, ಜನ್ಮಭೂಮಿ, ಕರ್ಮಭೂಮಿ, ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು.ಕನ್ನಡಾಂಬೆಯ ಮಕ್ಕಳಾದ ನಾವು ಭಾಷೆ, ಭಾವನೆ, ನಡವಳಿಕೆ, ಸಂಸ್ಕಾರ, ಶಾಂತಿ ಸಹಿಷ್ಣುತೆ ಎಲ್ಲದರಲ್ಲೂ ಇಡೀ ಜಗತ್ತಿಗೆ ಮಾದರಿಯಾಗಿದ್ದೇವೆ ಎಂದರೆ ತಪ್ಪಲ್ಲ. ವೈವಿಧ್ಯಮಯ ಕನ್ನಡನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ಕನ್ನಡಿಗರಾದ ನಾವು ನಾಡು ನುಡಿಗಳನ್ನು ಕಾಯ್ದು ಆತ್ಮ ಗೌರವ ಕಾಪಾಡಿಕೊಂಡಲ್ಲಿ ಕನ್ನಡದ ಪತಾಕೆ ಎತ್ತರಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಸುಕನ್ಯಾ ಸಂಪತ್ ಮಾಡ, ಶ್ರೀಮತಿ ವಿದ್ಯಾ ಮೋಹನ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮನೋಜ್ ಶಾನುಭೋಗ್, ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ವಿಜೇತ್ ನಾಯಕ್‌ ಅವರು ಉಪಸ್ಥಿತರಿದ್ಧರು. ಕಾರ್ಯಕ್ರಮವನ್ನು ನೀರಿಕ್ಷಾ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಸ್ವಾಗತಿಸಿ ನಿರೂಪಿಸಿದರು.

ಕನ್ನಡ ರಾಜೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾವಗೀತೆ ಸ್ಪರ್ಧೆಯನ್ನುಏರ್ಪಡಿಸಲಾಗಿತ್ತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಅಕ್ಷತಾ, ಶ್ರೇಯಾ, ಸ್ನೇಹ ವಿಶೇಷ ಪುರಸ್ಕಾರವನ್ನು ಪಡೆದರು. ಕನ್ನಡ ರಾಜೋತ್ಸವದ ಅಂಗವಾಗಿ ಕವಿ ಕುವೆಂಪು ರಚಿತ ಕೆಲವು ಹಾಡುಗಳನ್ನು ವಿದ್ಯಾರ್ಥಿಗಳು ಹಾಡಿ ಸಂಭ್ರಮಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English