ಮಂಗಳೂರು: ಕೊಲ್ಯದ ರೋಟರಿ ಸಮುದಾಯ ದಳದವರ ವತಿಯಿಂದ ಇದೇ ನವೆಂಬರ್ 6 ರ ಸೋಮವಾರ ದಂದು ಸಂಜೆ 6.30 ಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ, ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದೆಯರು ಅಭಿನಯಿಸುವ ’ಗೋಕುಲ ನಿರ್ಗಮನ’ನೃತ್ಯ ನಾಟಕವನ್ನು ಆಯೋಜಿಸಿದೆ. ಪುತಿನ ಅವರು ರಚಿಸಿದ ಈ ನಾಟಕಕ್ಕೆ ವಿದ್ದು ಉಚಿಲ್ ನಿರ್ದೇಶನವಿದ್ದು, ಈಗಾಗಲೇ ಪ್ರಥಮ ಪ್ರದರ್ಶನದಲ್ಲಿ ಯಶಸ್ಸನ್ನು ಕಂಡಿದೆ.
ಸಭಾ ಕಾರ್ಯಕ್ರಮದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ, ಭಾರತೀಯ ರೆಡ್‌ಕ್ರಾಸ್ ಸೊಸಾಯಿಟಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ರಂಗಕರ್ಮಿ ರಾಜಶೇಖರರಾವ್, ಶ್ರೀಮತಿ ರೇಣು ಗಜೇಂದ್, ಸುಮಾ ಅರುಣ್ ಮಾನ್ವಿ, ಯೋಗೀಶ್ ಕುಮಾರ್ ಗಟ್ಟಿ, ಹರೀಶ್ ಶೆಟ್ಟಿ ಹಾಗೂ ಅರೆಹೊಳೆ ಸದಾಶಿವ ರಾವ್ ಭಾಗವಹಿಸಲಿದ್ದಾರೆ. ನಾಟಕಕ್ಕೆಉಚಿತ ಪ್ರವೇಶವಿದೆ ಎಂದೂ ಪ್ರಕಟಣೆ ತಿಳಿಸಿದೆ.
ನಾಟಕಕ್ಕೆ ಶೋಧನ್ ಎರ್ಮಾಳ್ ಸಂಗೀತ, ದಿವಾಕರ್ ಕಟೀಲ್ ಸಂಘತ್ಯ, ಪ್ರವೀಣ್ ಜಿ ಕೊಡವೂರು ಬೆಳಕು, ಶಿವರಾಮ ಕಲ್ಮಡ್ಕ ಪ್ರಸಾಧನ ಹಾಗೂ ಗೀತಾ ಅರೆಹೊಳೆ ವಸ್ತ್ರ ವಿನ್ಯಾಸವಿದೆ. ಅರೆಹೊಳೆ ಸದಾಶಿವ ರಾವ್ ನಿರ್ಮಾಣ ನಿರ್ವಹಣೆ ಇದ್ದು 115 ನಿಮಿಷಗಳ ಅವಧಿಯ ನಾಟಕ.
Click this button or press Ctrl+G to toggle between Kannada and English