ಜ್ಞಾನಾರ್ಜನೆಯೊಂದಿಗೆ ಜ್ಞಾನಪ್ರಸರಣೆ ಅತ್ಯಂತ ಶ್ರೇಷ್ಠ ಕಾಯಕ :ರೆ. ಫಾ. ವಿಜಯ ಲೋಬೋ

4:57 PM, Friday, November 3rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

shrinivas collage ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಮಂಗಳೂರಿನ ಆವರಣದಲ್ಲಿ ಒಂದು ದಿನದ ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೋತ್ಸವವನ್ನು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು.

ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ವಿಜಯ ಲೋಬೋ ಅವರು ಈ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ದ್ಯೆನಂದಿನ ಪಠ್ಯಕ್ರಮ ಅಧ್ಯಯನದೊಂದಿಗೆ ಸ್ಪಯಂಶಿಸ್ತನ್ನು ಅಳವಡಿಸಿಕೊಂಡು ತಾವು ಪಡೆದ ಜ್ಞಾನವನ್ನು ಇತರರಿಗೆ ಪಸರಿಸುವ ಜವಬ್ಧಾರಿಯನ್ನು ನೆನಪಿಸಿದರು. ಸಂಸ್ಥೆಯು ಕೊಡಮಾಡಿದ ಸುಸಜ್ಜಿತ ಪ್ರಯೋಗಾಲಯಗಳ ಬಗ್ಗೆ ಪ್ರಶಂಸಿಸುತ್ತಾ ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಶ್ರೀನಿವಾಸ ರಾವ್ ಅವರು ಮಾತನಾಡುತ್ತಾ ಇಂತಹ ವಿಶೇಷ ಕಾರ‍್ಯಕ್ರಮಗಳ ಸದುಪಯೋಗ ಪಡೆದುಕೊಂಡು ಜೊತೆಜೊತೆಗೆ ಪಠ್ಯ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಬಗ್ಗೆ ಹಲವು ಕಿವಿಮಾತುಗಳನ್ನು ತಿಳಿಯಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ. ಅವರ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡ ಈ ಕಾರ‍್ಯಕ್ರಮದಲ್ಲಿ ಮುಖ್ಯ ಅಥಿತಿಗಳ ಪರಿಚಯವನ್ನು ಕಾರ‍್ಯಕ್ರಮ ಸಂಯೋಜಕ ಡಾ. ಸೂರ‍್ಯನಾರಾಯಣ ಅವರು ನಿರ್ವಹಿಸಿದರು. ಸುಮಾರು 40 ಕ್ಕಿಂತಲೂ ಹೆಚ್ಚು ಪದವಿ ಪೂರ್ವ ಕಾಲೇಜಿನ ಅಧ್ಯಾಪಕರು ಸ್ಪರ್ಧಾ ನಿರ್ಣಯಕರಾಗಿ ಆಗಮಿಸಿದ್ದರು. ಕು. ಪ್ರಜ್ಞಾ ಇವರ ಸುಶ್ಯಾವ್ಯ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ‍್ಯಕ್ರಮವು ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಗೋಪಾಲಕೃಷ್ಣ ಭಟ್ ಎನ್. ಇವರ ಧನ್ಯವಾದದೊಂದಿಗೆ ಮುಕ್ತಾಯವಾಯಿತು.

ವಿದ್ಯಾರ್ಥಿನಿ ದೀಕ್ಷಾ ಕುಮಾರಿ ಹಾಗೂ ರುಚಿ ಕುಮಾರಿ ಜಂಟಿಯಾಗಿ ಕಾರ‍್ಯಕ್ರಮ ನಿರೂಪಿಸಿದರು. ತದನಂತರ, ಯುರೇಕಾ(ವಿಜ್ಞಾನ ಮಾದರಿ ಪ್ರಾತ್ಯಕ್ಷಿಕೆ), ಸ್ಪೀಕ್ ಟು ಇನ್ಸ್ಪಯರ್, ಪುಪ್ಪಲಂಕಾರ, ಸಯನ್ಸಿಯಾ, ಆಕೃತಿ, ಇನೋವೆಷನ್, ಮ್ಯಾಡ್ ಆಡ್, ಸ್ಲೈಡ್‌ವೇರ್, ರಾಗತರಂಗ ಎಂಬಿತ್ಯಾದಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English