ಜ್ಞಾನಾರ್ಜನೆಯೊಂದಿಗೆ ಜ್ಞಾನಪ್ರಸರಣೆ ಅತ್ಯಂತ ಶ್ರೇಷ್ಠ ಕಾಯಕ :ರೆ. ಫಾ. ವಿಜಯ ಲೋಬೋ
Friday, November 3rd, 2017ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಮಂಗಳೂರಿನ ಆವರಣದಲ್ಲಿ ಒಂದು ದಿನದ ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೋತ್ಸವವನ್ನು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ವಿಜಯ ಲೋಬೋ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ದ್ಯೆನಂದಿನ ಪಠ್ಯಕ್ರಮ ಅಧ್ಯಯನದೊಂದಿಗೆ ಸ್ಪಯಂಶಿಸ್ತನ್ನು ಅಳವಡಿಸಿಕೊಂಡು ತಾವು ಪಡೆದ ಜ್ಞಾನವನ್ನು ಇತರರಿಗೆ ಪಸರಿಸುವ ಜವಬ್ಧಾರಿಯನ್ನು ನೆನಪಿಸಿದರು. ಸಂಸ್ಥೆಯು ಕೊಡಮಾಡಿದ ಸುಸಜ್ಜಿತ ಪ್ರಯೋಗಾಲಯಗಳ ಬಗ್ಗೆ ಪ್ರಶಂಸಿಸುತ್ತಾ ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. […]