ತುಳುನಾಡೊಚ್ಚಯದ ಅಧ್ಯಕ್ಷರಾದ ಫ್ರಾಂಕ್ ಪೆರ್ನಾಂಡಿಸ್‌ರಿಗೆ ತು.ರ.ವೇ ಅಭಿನಂದನೆ

10:28 AM, Monday, November 6th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

tulunadochhayaಮಂಗಳೂರು: ಡಿಸೆಂಬರ್ 23, 24 ರಂದು ಪಿಲಿಕುಳ ನಿಸರ್ಗ ಧಾಮದಲ್ಲಿ ನಡೆಯುವ ತುಳು ನಾಡೋಚ್ಚಯ 2017 ರ ಅಧ್ಯಕ್ಷರಾದ ಡೇವಿಡ್ ಫ್ರಾಂಕ್ ಪೆರ್ನಾಂಡಿಸ್‌ರವರನ್ನು ಅಭಿನಂದಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ತುಳುನಾಡಿನ ಮತೀಯ ಸಾಮರಸ್ಯ, ಐಕ್ಯತೆ ಹಾಗೂ ಅಭಿವೃದ್ಧಿಯ ಪ್ರತೀಕವಾದ ತುಳುನಾಡೋಚ್ಚಯ ಕಾರ್ಯಕ್ರಮದ ಒಟ್ಟು ಅಧ್ಯಕ್ಷತೆಯನ್ನು ತುಳುನಾಡಿಗಾಗಿ ದುಡಿಯುತ್ತಿರುವ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್‌ರವರಿಗೆ ಅಧ್ಯಕ್ಷ ಸ್ಥಾನ ಒಳಿದು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಅವರ ಅಧ್ಯಕ್ಷತೆಯಲ್ಲಿ ತುಳುನಾಡೋಚ್ಚಯ ಸಂಪೂರ್ಣ ಯಶಸ್ವಿಯಾಗುವ ಭರವಸೆ ನಮಗೆಲ್ಲರಿಗೆ ಇದೆ. ಫ್ರಾಂಕ್ ಫೆರ್ನಾಂಡಿಸ್‌ರವರು ದೂರದ ದುಬೈಯಲ್ಲಿದ್ದರೂ ತುಳುನಾಡಿಗೋಸ್ಕರ ಮಿಡಿಯುವ ಹೃದಯವಾಗಿದೆ ಎಂದರು.

tulunadochhayaಅಭಿನಂದನೆ ಸ್ವೀಕರಿಸಿ ಮಾತನಾಡಿದ ಡೇವಿಡ್ ಫ್ರಾಂಕ್ ಪೆರ್ನಾಂಡೀಸ್‌ರು ತು.ರ.ವೇ ಕಾರ್ಯ ಚಟುವಟಿಕೆಯನ್ನು ದೂರದ ದುಬೈಯಲ್ಲಿ ನಾವು ವೀಕ್ಷಿಸುತ್ತಿದ್ದೇವೆ. ಜಾತಿ, ಮತ, ಭೇದವಿಲ್ಲದೆ ಎಲ್ಲಾ ಧರ್ಮದವರನ್ನು, ಎಲ್ಲಾ ಪಂಗಡ, ಪಕ್ಷಗಳನ್ನು ಒಟ್ಟು ಸೇರಿಸಿ ತುಳುನಾಡಿಗಾಗುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ನೋಡಿದಾಗ ನಮಗೆ ತುಳುನಾಡಿನ ಅಭಿವೃದ್ಧಿಯ ಬಗೆಗಿನ ಚಿಂತೆ ದೂರವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತುಳುನಾಡೋಚ್ಚಯ ಪ್ರಧಾನ ಕಾರ್ಯದರ್ಶಿಯಾದ ಶಮಿನಾ ಆಳ್ವ, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ವಿಶ್ವ ತುಳುವೆರೆ ಆಯೆನೊದ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಳ್ವ ಬದಿಯಡ್ಕ, ಮಾತನಾಡಿದರು.

ತು.ರ,ವೇ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಸ್ವಾಗತಿಸಿದರು. ತು.ರ.ವೇ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರೆ ಧನ್ಯವಾದಗೈದರು. ಕಾರ್ಯಕ್ರಮದಲ್ಲಿ ತು.ರ.ವೇ ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿ ಜೈನ್, ತು.ರ.ವೇ ಕಾಸರಗೋಡ್ ಘಟಕದ ಅಧ್ಯಕ್ಷರಾದ ಭಾಸ್ಕರ್ ರೈ ಕುಂಬ್ಲೆ, ತು.ರ.ವೇ ಪ್ರಮುಖರಾದ ಶಿವ ಶೆಟ್ಟಿ, ಭೂಷನ್ ಕುಲಾಲ್, ರೇಷ್ಮಾ ಉಳ್ಳಾಲ, ಸುಖಲತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English