ಡಾ. ಸದಾನಂದ ಪೆರ್ಲರಿಗೆ ರಾಜ್ಯ ಮಟ್ಟದ ಪುರಸ್ಕಾರ

8:41 PM, Saturday, November 25th, 2017
Share
1 Star2 Stars3 Stars4 Stars5 Stars
(No Ratings Yet)
Loading...

perlaಮಂಗಳೂರು: ಆಕಾಶವಾಣಿಯ ಬೆಂಗಳೂರು ವಾಣಿಜ್ಯ ಪ್ರಸಾರ ಸೇವಾ ಕೇಂದ್ರವು ಈ ವರ್ಷದಿಂದ ಪ್ರಾರಂಭಿಸಿದ ರಾಜ್ಯ ಮಟ್ಟದಲ್ಲಿ 2016-17 ನೇ ಸಾಲಿನಲ್ಲಿ ಅತ್ಯುತ್ತಮ ವಾಣಿಜ್ಯ ಗಳಿಕೆಯ ಸಾಧನೆಯ ಕ್ಷೇತ್ರದಲ್ಲಿ ನೀಡುವ ಪುರಸ್ಕಾರವು ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಆವರಿಗೆ ಸಂದಿದೆ.

ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ನವೆಂಬರ್ ದಿನಾಂಕ 24ರಂದು ’ಕರ್ನಾಟಕ ರಾಜ್ಯೋತ್ಸವ ಹಾಗೂ ರಾಜ್ಯ ಮಟ್ಟದ ಆಕಾಶವಾಣಿ ವಾರ್ಷಿಕ ಪುರಸ್ಕಾರ ’ ಸಮಾರಂಭದಲ್ಲಿ ದಕ್ಷಿಣ ವಲಯದ ಮಹಾ ನಿರ್ದೇಶಕರ ಸಲಹೆಗಾರ ಡಾ. ಆರ್. ವೆಂಕಟೇಶ್ವರಲು, ಪತ್ರಕರ್ತೆ-ಸಾಹಿತಿ ಆರ್. ಪೂರ್ಣಿಮಾ, ಬೆಂಗಳೂರು ದೂರದರ್ಶನ ಕೇಂದ್ರದ ಉಪಮಹಾನಿರ್ದೇಶಕ ಹನುಮಂತ್ ( ತಾಂತ್ರಿಕ ವಿಭಾಗ ) ಮತ್ತು ಬೆಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಎಚ್. ಎಸ್. ಸರಸ್ವತಿ ಪ್ರಶಸ್ತಿ ಪ್ರದಾನ ಮಾಡಿದರು. ಸಹಾಯಕ ನಿರ್ದೇಶಕ ಎಸ್. ಎಸ್. ಉಮೇಶ್ ಹಾಜರಿದ್ದರು.

2017 ನೇ ಸಾಲಿನಲ್ಲಿ ಅತ್ಯುತ್ತಮ ವಾಣಿಜ್ಯ ಗಳಿಕೆ ಪುರಸ್ಕಾರಕ್ಕೆ ಧಾರವಾಡದ ಆಕಾಶವಾಣಿ ಕೇಂದ್ರದ ಅನಿಲ್ ದೇಸಾಯಿ, ಕಲಬುರ್ಗಿಯ ಅಂಜನಾ ಯಾತನೂರು, ರಾಯಚೂರಿನ ಎಂ. ಆರ್. ಸುದರ್ಶನ, ಬೆಂಗಳೂರಿನ ವಿದ್ಯಾಶಂಕರ್, ಎಂ. ಎಸ್. ಅನುಪಮಾ, ಎಂ. ಶಿವಕುಮಾರ್, ಭದ್ರಾವತಿಯ ನಾರಾಯಣ ಭಟ್ ಕೂಡಾ ಆಯ್ಕೆಯಾಗಿದ್ದಾರೆ.

ಮಂಗಳೂರು ಆಕಾಶವಾಣಿ ಕೇಂದ್ರವು ಕಳೆದ ಹಲವಾರು ವರ್ಷಗಳಿಂದ ಕಾರ್ಯಕ್ರಮಗಳ ಮೂಲಕ ವಾಣಿಜ್ಯ ಗಳಿಕೆಯಲ್ಲಿ ಗುರಿ ಮೀರಿದ ಸಾಧನೆ ದಾಖಲಿಸುತ್ತಿದ್ದು, ವೈಯಕ್ತಿಕ ಕೊಡುಗೆಯನ್ನು ಗಮನಿಸಿ ರಾಜ್ಯಮಟ್ಟದ ಈ ಪುರಸ್ಕಾರಕ್ಕೆ ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ.ಉತ್ತಮ ಸಾಧನೆ ಮಾಡಿ ಆಕಾಶವಾಣಿ ಮಂಗಳೂರಿಗೆ ಹೆಮ್ಮೆ ತಂದುಕೊಟ್ಟ ಡಾ. ಸದಾನಂದ ಪೆರ್ಲ ಅವರನ್ನು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್. ಉಷಾಲತಾ ಅಭಿನಂದಿಸಿದ್ದಾರೆ. ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಪ್ರಾಯೋಜಕತ್ವ ನೀಡಿ ಸಹಕರಿಸಿದ ಎಲ್ಲ ಸರಕಾರಿ, ಅರೆಸರಕಾರಿ, ಸರಕಾರೇತರ ಸಂಸ್ಥೆ ಮತ್ತು ಖಾಸಗಿ ಸಂಸ್ಥೆಗಳನ್ನು ಕೂಡಾ ಅವರು ಅಭಿನಂದಿಸಿದ್ದಾರೆ.

ರಾಜ್ಯ ಮಟ್ಟದ ಈ ಪುರಸ್ಕಾರವು ಕೇವಲ ವೈಯಕ್ತಿಕ ಸಾಧನೆ ಅಲ್ಲ. ಎಲ್ಲರ ಸಹಕಾರಕ್ಕೆ ಸಿಕ್ಕಿದ ಪುರಸ್ಕಾರ. ಇದು ಮಂಗಳೂರು ಆಕಾಶವಾಣಿಗೆ ಸಂದ ಹೆಮ್ಮೆಯ ಗೌರವ ಎಂದು ಪ್ರಶಸ್ತಿ ಪಡೆದ ಡಾ. ಸದಾನಂದ ಪೆರ್ಲ ಪ್ರತಿಕ್ರಿಯಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English