ಮಕರ ಜ್ಯೋತಿ ನೇರ ಪ್ರಸಾರ ವೀಕ್ಷಕ ವಿವರಣೆ : ಡಾ. ಸದಾನಂದ ಪೆರ್ಲ

Saturday, January 11th, 2020
sadananda-perla

ಮಂಗಳೂರು : ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಈ ಬಾರಿಯ ಶಬರಿಮಲೆ ಮಕರಜ್ಯೋತಿ ದರ್ಶನದ ನೇರಪ್ರಸಾರದ ವೀಕ್ಷಕ ವಿವರಣೆ ನೀಡಲಿದ್ದಾರೆ. ಶಬರಿಮಲೆ ಸನ್ನಿಧಾನದಿಂದ ಜನವರಿ 15 ರಂದು ಸಾಯಂಕಾಲ 5.30 ರಿಂದ ಪ್ರಾರಂಭವಾಗುವ ಮಕರಜ್ಯೋತಿ ದರ್ಶನದ ನೇರಪ್ರಸಾರದ ವೀಕ್ಷಕ ವಿವರಣೆಗಾರರಾಗಿ ಪೆರ್ಲ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಮೀಪದ ಬಿ.ಸಿ ರೋಡಿನ ನಿವೃತ್ತ ಅಧ್ಯಾಪಕ ರಾಧಾಕೃಷ್ಣ ಅಡ್ಯಂತಾಯ ಭಾಗವಹಿಸಲಿರುವರು. ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳು ಭಾಷೆಗಳಲ್ಲಿ ಮಕರಜ್ಯೋತಿ ದರ್ಶನದ ವೀಕ್ಷಕ […]

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ನಟನೆಗೆ ಪ್ರೋತ್ಸಾಹಿಸಬೇಕು : ಡಾ.ಸದಾನಂದ ಪೆರ್ಲ

Saturday, June 8th, 2019
Usha Bhandary

ಮಂಗಳೂರು : ರಂಗಭೂಮಿ ಹಾಗೂ ಹಿರಿ-ಕಿರುತೆರೆಯ ಖ್ಯಾತ ನಟಿ ಉಷಾ ಭಂಡಾರಿಯವರ ನೇತೃತ್ವದಲ್ಲಿ ಬೆಂಗಳೂರಿನ ಆಪ್ – ಆಕ್ಟಿಂಗ್ ಎಂಡ್ ಪರ್‌ಫಾರ್ಮಿಂಗ್ ಸಂಸ್ಥೆ ಮಂಗಳೂರಿನಲ್ಲಿ ನಡೆಸಿದ ಒಂದು ತಿಂಗಳ ಅಭಿನಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಗರದ ಡಾನ್‌ಬೋಸ್ಕೋ ಹಾಲ್‌ನಲ್ಲಿ ನಡೆಯಿತು. ಇಂದು ಹೆತ್ತವರು ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಒಬ್ಬ ಒಳ್ಳೆ ನಟ, ನಿರ್ದೇಶಕ ಆಗಬೇಕೆಂದು ಯಾರೂ ಚಿಂತನೆ ಮಾಡುವುದಿಲ್ಲ. ಅವರಲ್ಲಿರುವ ಕಲೆಯನ್ನು ಗುರುತಿಸಿ ಉತ್ತಮ ನಟ, ನಟಿಯರನ್ನಾಗಿ ಮಾಡಿದರೆ ಚಿತ್ರರಂಗ ಹಾಗೂ […]

ತುಳು ಸಂಸ್ಕೃತಿ ಪರಿಚಯಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ : ಡಾ. ಸದಾನಂದ ಪೆರ್ಲ

Wednesday, June 20th, 2018
Tulu-LCD

ಮಂಗಳೂರು: ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಂಪ್ರದಾಯಕ ಹಾಗೂ ಆಧುನಿಕ ತಂತ್ರಜ್ಷಾನದ ಬಳಕೆಯಾಗಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ರವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದ ಕಟ್ಟಡದ ಸಿರಿಚಾವಡಿಯಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಎಲ್.ಸಿ.ಡಿ ಪ್ರೊಜೆಕ್ಟರ್‌ನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ತುಳುಭಾಷೆಗೆ ಭವ್ಯವಾದ ಇತಿಹಾಸವಿದೆ. ಮೌಲಿಕವಾದ ಸಾಹಿತ್ಯ ಪರಂಪರೆವಿದೆ. ತುಳುವರಲ್ಲಿ ಹೋರಾಟದ ಕಿಚ್ಚು ಇದೆ. ಪ್ರಾಮಾಣಿಕತೆ, ನಿಷ್ಠೆ ತುಳುವರ ಮೂಲ ಗುಣ ಆಗಿದೆ. ಆದರೂ ತುಳು ಭಾಷೆಗೆ […]

ಡಾ. ಸದಾನಂದ ಪೆರ್ಲರಿಗೆ ರಾಜ್ಯ ಮಟ್ಟದ ಪುರಸ್ಕಾರ

Saturday, November 25th, 2017
perla

ಮಂಗಳೂರು: ಆಕಾಶವಾಣಿಯ ಬೆಂಗಳೂರು ವಾಣಿಜ್ಯ ಪ್ರಸಾರ ಸೇವಾ ಕೇಂದ್ರವು ಈ ವರ್ಷದಿಂದ ಪ್ರಾರಂಭಿಸಿದ ರಾಜ್ಯ ಮಟ್ಟದಲ್ಲಿ 2016-17 ನೇ ಸಾಲಿನಲ್ಲಿ ಅತ್ಯುತ್ತಮ ವಾಣಿಜ್ಯ ಗಳಿಕೆಯ ಸಾಧನೆಯ ಕ್ಷೇತ್ರದಲ್ಲಿ ನೀಡುವ ಪುರಸ್ಕಾರವು ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಆವರಿಗೆ ಸಂದಿದೆ. ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ನವೆಂಬರ್ ದಿನಾಂಕ 24ರಂದು ’ಕರ್ನಾಟಕ ರಾಜ್ಯೋತ್ಸವ ಹಾಗೂ ರಾಜ್ಯ ಮಟ್ಟದ ಆಕಾಶವಾಣಿ ವಾರ್ಷಿಕ ಪುರಸ್ಕಾರ ’ ಸಮಾರಂಭದಲ್ಲಿ ದಕ್ಷಿಣ ವಲಯದ ಮಹಾ ನಿರ್ದೇಶಕರ ಸಲಹೆಗಾರ ಡಾ. ಆರ್. ವೆಂಕಟೇಶ್ವರಲು, […]