ಮಕರ ಜ್ಯೋತಿ ನೇರ ಪ್ರಸಾರ ವೀಕ್ಷಕ ವಿವರಣೆ : ಡಾ. ಸದಾನಂದ ಪೆರ್ಲ

12:32 PM, Saturday, January 11th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sadananda-perla

ಮಂಗಳೂರು : ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಈ ಬಾರಿಯ ಶಬರಿಮಲೆ ಮಕರಜ್ಯೋತಿ ದರ್ಶನದ ನೇರಪ್ರಸಾರದ ವೀಕ್ಷಕ ವಿವರಣೆ ನೀಡಲಿದ್ದಾರೆ.

ಶಬರಿಮಲೆ ಸನ್ನಿಧಾನದಿಂದ ಜನವರಿ 15 ರಂದು ಸಾಯಂಕಾಲ 5.30 ರಿಂದ ಪ್ರಾರಂಭವಾಗುವ ಮಕರಜ್ಯೋತಿ ದರ್ಶನದ ನೇರಪ್ರಸಾರದ ವೀಕ್ಷಕ ವಿವರಣೆಗಾರರಾಗಿ ಪೆರ್ಲ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಮೀಪದ ಬಿ.ಸಿ ರೋಡಿನ ನಿವೃತ್ತ ಅಧ್ಯಾಪಕ ರಾಧಾಕೃಷ್ಣ ಅಡ್ಯಂತಾಯ ಭಾಗವಹಿಸಲಿರುವರು.

ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳು ಭಾಷೆಗಳಲ್ಲಿ ಮಕರಜ್ಯೋತಿ ದರ್ಶನದ ವೀಕ್ಷಕ ವಿವರಣೆಯು ಆಯಾಯ ರಾಜ್ಯಗಳಲ್ಲಿ ಪ್ರಸಾರವಾಗುತ್ತಿದೆ. ಕಳೆದೆರಡು ವರ್ಷಗಳಿಂದ ಡಾ. ಸದಾನಂದ ಪೆರ್ಲ ಕನ್ನಡ ವೀಕ್ಷಕ ವಿವರಣಾ ತಂಡದ ಪ್ರಮುಖರಾಗಿದ್ದರು.

ತಿರುವಾಭರಣ ಪ್ರವೇಶ, ಮಕರಜ್ಯೋತಿ ವಿಶೇಷ ಪೂಜೆ, ಜ್ಯೋತಿ ದರ್ಶನದ ಈ ವಿಶೇಷ ವೀಕ್ಷಕ ವಿವರಣೆಯನ್ನು ಶಬರಿಮಲೆ ಸನ್ನಿಧಾನದ ಗರ್ಭಗುಡಿಯ ಮುಂಭಾಗದಿಂದ ನೇರಪ್ರಸಾರ ಮಾಡಲಾಗುತ್ತಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English