ಪ.ಪೂ. ಕಾಲೇಜುಗಳ ಉಪನ್ಯಾಸಕರರಿಂದ ವೇತನ ನೀತಿ ಜಾರಿಗೊಳಿಸಲು ಪ್ರತಿಭಟನೆ

10:18 AM, Tuesday, September 6th, 2011
Share
1 Star2 Stars3 Stars4 Stars5 Stars
(3 rating, 1 votes)
Loading...

Shikshaka/ಉಪನ್ಯಾಸಕರ ಸಂಘ

ಮಂಗಳೂರು: ಕರ್ನಾಟಕ ರಾಜ್ಯ ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಕರೆಯ ಮೇರೆಗೆ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ವೇತನ ತಾರತಮ್ಯ ಅಧ್ಯಯನ ಸಮಿತಿಯ ವರದಿಯನ್ನು ಜಾರಿಗೊಳಿಸ ಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಸಂಘದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ 1998 ರಿಂದ ಪ.ಪೂ. ಶಿಕ್ಷಣ ಕ್ಷೇತ್ಸದಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ 4ನೇ ಮತ್ತು 5 ನೇ ವೇತನ ಆಯೋಗದ ಶಿಫಾರಸು ಅನುಷ್ಠಾನದ ಸಮಯದಲ್ಲಿ ಆದ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪ್ರತಿಭಟಿಸುತ್ತಾ 2011 ಎಪ್ರಿಲ್‌ನಲ್ಲಿ ದ್ವಿತೀಯ ಪಿ.ಯು.ಸಿ. ಉತ್ತರ ಪತ್ರಿಕೆಗಳ ಮೌಲ್ಯ ಮಾಪನವನ್ನು ಸಂಘವು ಬಹಿಷ್ಕರಿಸಿದಾಗ ಆಗಿನ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ವೇತನ ತಾರತಮ್ಯ ಅಧ್ಯಯನ ಸಮಿತಿ ರಚಿಸಿ ಅದರ ವರದಿ ಆಧಾರದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಅಧ್ಯಯನ ಸಮಿತಿ ವರದಿ ಸಲ್ಲಿಸಿ 2 ತಿಂಗಳಾದರೂ ಸರಕಾರ ಯಾವುದೇ ತೀರ್ಮಾಯ ಕೈಗೊಳ್ಳದಿರುವುದನ್ನು ವಿರೋಧಿಸಿ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯದರ್ಶಿ ವೀರೇಶ್‌ ಬೇಕಲ್‌, ಉಪಾಧ್ಯಕ್ಷ ಬಾಲಕೃಷ್ಣ ರಾವ್‌, ಜತೆ ಕಾರ್ಯದರ್ಶಿ ಹರಿ ಪ್ರಕಾಶ್‌, ಖಜಾಂಚಿ ಡಾ| ವಾಸುದೇವ ಬೆಳ್ಳೆ, ರಾಜ್ಯ ಸಂಘಟನಾ ಸಂಚಾಲಕ ರೊನಾಲ್ಡ್‌ ಫೆರ್ನಾಂಡಿಸ್‌, ಖಾಸಗಿ ಪ.ಪೂ. ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ರಾವ್‌, ರತ್ನಾಕರ ಬನ್ನಾಡಿ, ರೂಪಾಕ್ಷ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಮನವಿ ಸಲ್ಲಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English