ಮಾಧ್ಯಮ ಪ್ರತಿನಿಧಿಗಳಿಗಾಗಿ ಜಿಲ್ಲಾ ಮಟ್ಟದ ಎಚ್‌ಐವಿ ಕಾರ್ಯಾಗಾರ

11:57 AM, Thursday, September 8th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

Aids seminar/ಎಚ್‌ಐವಿ ಕಾರ್ಯಾಗಾರ

ಮಂಗಳೂರು : ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ಇವುಗಳ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ವೆನ್ಲಾಕ್ ಅಶ್ಪತ್ರೆಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗಾಗಿ ನಡೆದ ಜಿಲ್ಲಾ ಮಟ್ಟದ ಎಚ್‌ಐವಿ ಕುರಿತ ಕಾರ್ಯಾಗಾರವನ್ನು ಎಚ್‌ಐವಿ ಸೋಂಕಿತೆಯಾಗಿ ಜೀವನ ನಡೆಸುತ್ತಿರುವ ಸೀಮಾ ಅವರಿಗೆ ಹಸ್ತಲಾಘವ ನೀಡುವ ಮೂಲಕ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯಪ್ರಕಾಶ್‌ ಅವರು ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಎಚ್‌ಐವಿ-ಏಡ್ಸ್‌ ಸೋಂಕಿತರನ್ನು ಸಮಾಜದಿಂದ ದೂರವಿರಿಸದೆ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಎಲ್ಲರ ಸಹಭಾಗಿತ್ವ ಅತ್ಯಗತ್ಯ ಎಂದು ವಿಜಯಪ್ರಕಾಶ್‌ ಹೇಳಿದರು. ಲೈಂಗಿಕ ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಜಿ.ಪಂ. ನಿಂದ ಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು. ಏಡ್ಸ್‌ ಪೀಡಿತರ ಬಗ್ಗೆ ಸಹಾನುಭೂತಿ, ಅನುಕಂಪ, ವಿಶ್ವಾಸ ಹೊಂದಬೇಕು. ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ತರ ಅವರು ಹೇಳಿದರು.

ಹೆಲ್ತ್‌ ಎಜುಕೇಶನ್‌ ಎಂಪವರ್‌ಮೆಂಟ್ ರಿಹೆಬಿಲಿಟೇಶನ್‌ ಅಸೋಸಿಯೇಶನ್‌ (ಹೀರಾ), ಹಿಂದ್‌ ಕುಷ್‌ ನಿವಾರಣ್‌ ಸಂಘ (ಎಚ್‌ಕೆಎನ್‌ಎಸ್‌) ಮುಂತಾದ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಎಚ್‌ಐವಿ/ಏಡ್ಸ್‌ ಸೋಂಕಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮಾಡುತ್ತಿರುವ ಕಾರ್ಯವನ್ನು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಒ.ಆರ್‌. ಶ್ರೀರಂಗಪ್ಪ, ಜಿಲ್ಲಾ ಏಡ್ಸ್‌ ತಡೆ ಮತ್ತು ಪ್ರತಿಬಂಧಕ ಘಟಕಾಧಿಕಾರಿ ಡಾ| ಕಿಶೋರ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಎ.ಆರ್‌.ಟಿ. ಸೆಂಟರ್‌ನ ವೈದ್ಯಾಧಿಕಾರಿ ಡಾ| ಸೌಮ್ಯ ಅವರು ಮುಖ್ಯ ಅತಿಥಿಗಳಾಗಿದ್ದರು.

ಲೈಂಗಿಕ ಮುನ್ನೆಚ್ಚರಿಕೆ, ಎಚ್‌ಐವಿ/ಏಡ್ಸ್‌ ಬಗೆಗೆ ಮಾಧ್ಯಮದವರೊಂದಿಗೆ ವಿಸ್ತೃತ ಚರ್ಚೆ, ಸಂವಾದ ನಡೆಯಿತು. ಎಚ್‌ಐವಿ ಜಾಗೃತಿಯಲ್ಲಿ ಮಾಧ್ಯಮಗಳು ನಿರ್ವಹಿಸಿದ ಜಾಗೃತಿಯ ಬಗ್ಗೆ ಕಿರುಚಿತ್ರ ಪ್ರದರ್ಶಿಸಲಾಯಿತು.

ದ. ಕನ್ನಡ ಜಿಲ್ಲೆಯಲ್ಲಿ 2007 ರಿಂದ 2011 ರ ಜುಲೈ ವರೆಗೆ ಗರ್ಭಿಣಿಯರು ಸಹಿತ ಒಟ್ಟು 5,197 ಮಂದಿ ಎಚ್‌ಐವಿ/ಏಡ್ಸ್‌ ಸೋಂಕಿಗೆ ಒಳಗಾಗಿದ್ದಾರೆ. 2011ರ ಜನವರಿಯಿಂದ ಆಗಸ್ಟ್‌ ವರೆಗೆ ಮಂಗಳೂರು -228, ಬಂಟ್ವಾಳ – 40, ಬೆಳ್ತಂಗಡಿ – 49, ಪುತ್ತೂರು – 22, ಸುಳ್ಯ -13, ಉಡುಪಿ -27, ಕಾಸರಗೋಡು – 52 ಮಂದಿ. ಈ ಪೈಕಿ ಇತರ ಜಿಲ್ಲೆಯವರು 77 ಹಾಗೂ ಇತರ ರಾಜ್ಯದವರು 16. ಪುರುಷರು 325 ಹಾಗೂ ಮಹಿಳೆಯರು 199 ಹೀಗೆ ಒಟ್ಟು 524 ಮಂದಿ. ಇದರಲ್ಲಿ 24 ಮಂದಿ 14 ವರ್ಷಕ್ಕಿಂತ ಕೆಳಗಿನವರು. 399 ಮಂದಿ 15 ರಿಂದ 49 ವರ್ಷದವರು. 101 ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರು. 2006 ರಿಂದ 2011ರ ವರೆಗೆ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಪುರುಷರು 1,748, ಮಹಿಳೆಯರು 1,036 ಹಾಗೂ 248 ಮಂದಿ ಮಕ್ಕಳು ಸೇರಿದ್ದಾರೆ.

image description

2 ಪ್ರತಿಕ್ರಿಯ - ಶೀರ್ಷಿಕೆ - ಮಾಧ್ಯಮ ಪ್ರತಿನಿಧಿಗಳಿಗಾಗಿ ಜಿಲ್ಲಾ ಮಟ್ಟದ ಎಚ್‌ಐವಿ ಕಾರ್ಯಾಗಾರ

  1. glijtf, zxmgqulbhrpt.com/

    3DmVIP mldvtwfulmmt, [url=http://ljdbtbbagvny.com/]ljdbtbbagvny[/url], [link=http://pcnjkdmtmmhy.com/]pcnjkdmtmmhy[/link], http://xedxnzsinhbb.com/

  2. ಸುರೇಶ, ಮೂಡಬಿದರೆ

    ಇಂತಹ ಮಾಹಿತಿ ಕಾರ್ಯಾಗಾರಗಳಿಂದ ಏಡ್ಸ್‌ ಬಗ್ಗೆ ಇರುವ ಭಯ ಕಡಿಮೆಯಾಗುತ್ತದೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English